ಕೊರೊನಾವೈರಸ್ ಮಧ್ಯೆ ಮಾನವೀಯತೆ ಮೆರೆದ ಉಪ್ಪಿನಂಗಡಿ ಪೊಲೀಸರು

ಮಂಗಳೂರು, ಮೇ 30: ಉಡುಪಿ ಮೂಲದ ವ್ಯಕ್ತಿಯೋರ್ವರು ಉಪ್ಪಿನಂಗಡಿಯಲ್ಲಿ ಹೊಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಆ ವ್ಯಕ್ತಿಯು ಲಾಕ್‌ಡೌನ್‌ ಹಿನ್ನೆಲೆಯಲ್ಲಿ ನೆಕ್ಕಿಲಾಡಿ ಎಂಬಲ್ಲಿ ವಾಸವಾಗಿದ್ದನು.

Recommended Video

      ಗಾಂಧೀಜಿ ಬಳಿ ಹೋಗಿ ಪ್ರಶ್ನೆ ಕೇಳಿದ ಮಂಗಳೂರಿನ ಯುವಕ..! | Mangalore | Mahatma Gandhi

      ಉಡುಪಿ ಮೂಲದ ಹೋಟೆಲ್ ಕೆಲಸಗಾರ ಮೇ 27 ರಂದು ಇವರು ಕುಸಿದು ಬಿದ್ದು ಮೃತಪಟ್ಟಿದ್ದು, ಸದರಿ ವ್ಯಕ್ತಿ ಜ್ವರದಿಂದ ಬಳಲುತ್ತಿದ್ದರು ಎಂದು ವದಂತಿ ಹಬ್ಬಿತ್ತು. ಈ ಹಿನ್ನೆಲೆಯಲ್ಲಿ ಕೊರೊನಾ ವೈರಸ್‌ ಭಯದಿಂದ ಯಾರೂ ನೆರವಿಗೆ ಬರದಿದ್ದರಿಂದ ಶವ ಸಂಸ್ಕಾರ ಮಾಡಲೂ ಆಗದೆ, ಶವವನ್ನು ಊರಿಗೆ ಸಾಗಿಸಲೂ ಆಗದೆ ಮನೆಯವರು ಅಸಹಾಯಕರಾಗಿ ಪೊಲೀಸ್‌ ಠಾಣೆಯ ಬಾಗಿಲಲ್ಲಿ ಕಾಯುವ ಸ್ಥಿತಿ ಎದುರಾಯಿತು.

      ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನೆರವಿಗೆ ಆಗಮಿಸಿದ ಉಪ್ಪಿನಂಗಡಿ ಪೋಲಿಸ್ ಠಾಣಾಧಿಕಾರಿ ಡಿ.ಎನ್‌ ಈರಯ್ಯನವರು ಖಾಸಗಿ ಆ್ಯಂಬುಲೆನ್ಸ್ ಚಾಲಕರೋರ್ವರ ಮನವೊಲಿಸಿ ಆತನಿಗೆ ಪಿಪಿಇ ಉಡುಪನ್ನು ಒದಗಿಸಿದರು.

      Uppinangady Police Helps To Shift Dead Body To Govt Hopsital

      ನಂತರ ಶವವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಸಾಗಿಸುವಲ್ಲಿ ಯಶಸ್ವಿಯಾದರು. ತಮ್ಮ ಬಿಡುವು ರಹಿತ ಕರ್ತವ್ಯದ ಹೊರತಾಗಿಯೂ ಸದಾ ಸಾರ್ವಜನಿಕರ ಸಂಕಷ್ಟಕ್ಕೆ ಸ್ಪಂದಿಸುವ ಉಪ್ಪಿನಂಗಡಿ ಪೊಲೀಸ್‌ ಠಾಣಾಧಿಕಾರಿ ಮತ್ತು ಸಿಬ್ಬಂದಿಗಳು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+