ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಸಚಿವೆ ಉಮಾ ಭಾರತಿ ಭೇಟಿ
ಉಡುಪಿ, ಜುಲೈ 9: ಕೇಂದ್ರದ ನೀರಾವರಿ ಹಾಗೂ ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಖಾತೆಯ ಸಚಿವೆ ಉಮಾ ಭಾರತಿಯವರು ಗುರುಪೂರ್ಣಿಮೆಯ ಪ್ರಯುಕ್ತ ಇಂದು ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದರು.
ತಮ್ಮ ಗುರುಗಳಾದ ಪರ್ಯಾಯ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಭಾನುವಾರ ಉಡುಪಿಗೆ ಆಗಮಿಸಿ ಅವರು ತಮ್ಮ ಗುರುಗಳಾದ ಪೇಜಾವರ ಸ್ವಾಮೀಜಿಯವರೊಂದಿಗೆ ಕೃಷ್ಣ ಮಠದ ದರ್ಶನ ಪಡೆದರು. ಬಳಿಕ ಪೇಜಾವರ ಸ್ವಾಮೀಜಿಯರಿಗೆ ಪಾದಪೂಜೆ ಹಾಗೂ ಆರತಿ ಎತ್ತಿ ಗುರುಪೂರ್ಣಿಮೆ ಪ್ರಯುಕ್ತ ಗೌರವ ಸಮರ್ಪಿಸಿದರು.
"ಸನ್ಯಾಸ ಸ್ವೀಕರಿಸಿ 25 ವರ್ಷಗಳಾಯ್ತು. ಪೇಜಾವರ ಶ್ರೀಗಳಂತ ಹಿರಿಯರ ಶಿಷ್ಯೆ ಅನ್ನೋದು ಹೆಮ್ಮೆ. 17 ವರ್ಷಗಳ ಬಳಿಕ ಕೃಷ್ಣಮಠದಲ್ಲಿ ಗುರು ಪೂರ್ಣಿಮಾ ಆಚರಿಸಿದ್ದೇನೆ," ಎಂದು ಸಚಿವೆ ಉಮಾ ಭಾರತಿ ಹೇಳಿದರು.












Click it and Unblock the Notifications