ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಗಿಯದ ಕಾಮಗಾರಿ, ಶಿರಾಡಿ ಘಾಟ್ ಸಂಚಾರ ಮುಕ್ತ ಮತ್ತೆ ಮುಂದಕ್ಕೆ

By Sachhidananda Acharya
|
Google Oneindia Kannada News

ಮಂಗಳೂರು, ಜುಲೈ 1: ಶಿರಾಡಿ ಘಾಟ್ ಕಾಮಗಾರಿ ಇನ್ನೂ ಮುಗಿದಿಲ್ಲ. ಹಾಗಾಗಿ ಸಂಚಾರಕ್ಕೆ ಮುಕ್ತವಾಗುವ ದಿನ ಇನ್ನೂ ದೂರವಾಗಿದೆ.

ಈ ಹಿಂದೆ ಜುಲೈ 5ರಂದು ಶಿರಾಡ್ ಘಾಟ್ ನಲ್ಲಿ ವಾಹನ ಸಂಚಾರ ಆರಂಭವಾಗಲಿದೆ ಎನ್ನಲಾಗಿತ್ತು. ಆದರೆ, ಕಾಮಗಾರಿ ಪೂರ್ಣಗೊಂಡಿದ್ದರೂ, ತಡೆಗೋಡೆ ಕಾಮಗಾರಿ ಬಾಕಿ ಇರುವುದರಿಂದ ಜುಲೈ 15ರಿಂದ ಸಂಚಾರ ಆರಂಭವಾಗುವ ಸಾಧ್ಯತೆ ಇದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಹೇಳಿದರು.

ಶಿರಾಡಿ ಘಾಟ್‌ ರಸ್ತೆ ಜುಲೈ 15ಕ್ಕೆ ವಾಹನಗಳಿಗೆ ಮುಕ್ತವಾಗಲ್ಲ?ಶಿರಾಡಿ ಘಾಟ್‌ ರಸ್ತೆ ಜುಲೈ 15ಕ್ಕೆ ವಾಹನಗಳಿಗೆ ಮುಕ್ತವಾಗಲ್ಲ?

ಶನಿವಾರ ಮಂಗಳೂರಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಭೆಯಲ್ಲಿ ಅವರು ಈ ವಿವರ ನೀಡಿದರು.

Unfinished work, Vehicle movement postpones on Shiradi Ghat

ಸದ್ಯಕ್ಕೆ 12.30 ಕಿಲೋಮೀಟರ್ ನ ಕಾಮಗಾರಿ ಪೂರ್ಣಗೊಂಡಿದೆ. ಬಾಕಿ ಉಳಿದಿರುವ 380 ಮೀಟರ್ ನ ಕಾಮಗಾರಿ ನಡೆಯುತ್ತಿದೆ . ವಾಹನ ಸಂಚಾರ ಸುರಕ್ಷತಾ ಕ್ರಮಗಳಾದ ರಸ್ತೆಯ ಎರಡೂ ಬದಿಯಲ್ಲಿ ಶೋಲ್ಡರ್ ನಿರ್ಮಾಣ, ತಡೆಗೋಡೆ ನೀರ್ಮಾಣ ಕಾಮಗಾರಿ ನಡೆಯುತ್ತಿದೆ ಎಂದು ಅವರು ವಿವರಿಸಿದರು.

ಜ.20ರಿಂದ ಶಿರಾಡಿ ಘಾಟ್ ಬಂದ್, ಪರ್ಯಾಯ ಮಾರ್ಗಗಳುಜ.20ರಿಂದ ಶಿರಾಡಿ ಘಾಟ್ ಬಂದ್, ಪರ್ಯಾಯ ಮಾರ್ಗಗಳು

ಇದರಿಂದ ಮಂಗಳೂರು ಮತ್ತು ಬೆಂಗಳೂರನ್ನು ಸಂಪರ್ಕಿಸುವ ಶಿರಾಡಿ ಘಾಟಿ ರಸ್ತೆ ಜುಲೈ 15ರಿಂದ ವಾಹನ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ ಇದೆ ಎಂದು ಸೆಂಥಿಲ್ ತಿಳಿಸಿದರು.

English summary
Due to the unfinished work, the vehicle movement postponed in Sirad Ghat. Vehicle movement in the ghat likely to start from July 15 said Dakshina Kannada Deputy Commissioner Shashikant Senthil.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X