ರೂಬಿಕ್ ಕ್ಯೂಬ್: ಗಿನ್ನೆಸ್ ದಾಖಲೆ ಬರೆದ ಎಸ್‌ಡಿಎಂ ವಿದ್ಯಾರ್ಥಿಗಳು
ಮಂಗಳೂರು, ಫೆಬ್ರವರಿ. 20 : ಉಜಿರೆಯ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ರಚಿಸಿದ ರೂಬಿಕ್ ಫಜಲ್ ಕ್ಯೂಬ್ ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗಿದೆ.
ರೂಬಿಕ್ ಕ್ಯೂಬ್ ರಚಿಸಿದ ಉಜಿರೆಯ ಎಸ್ ಡಿಎಂ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಪೃಥ್ವಿಶ್ ಮತ್ತು ತಂಡಕ್ಕೆ ಗಿನ್ನಿಸ್ ವಿಶ್ವ ದಾಖಲೆ ಪ್ರಮಾಣ ಪತ್ರವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಅವರು ನೀಡಿ ಅಭಿನಂದಿಸಿದರು .[ಗಿನ್ನೆಸ್ ದಾಖಲೆ ಸೇರಲಿದೆ ಭವಿಷ್ಯತ್ತಿಗಾಗಿ ಯೋಗ ಪ್ರದರ್ಶನ!]
ಕಾಲೇಜಿನ 20 ವಿದ್ಯಾರ್ಥಿಗಳು ಸೇರಿ 14981 ಚದರ್ ಮೀ. ಅಳತೆಯ ಬೃಹತ್ ಜಾಲರಿ ಪರದೆಯ ಮೇಲೆ 4500 ರೂಬಿಕ್ ಫಜಲ್ ಕ್ಯೂಬ್ ಗಳನ್ನು ಮೊಸಾಯಿಕ್ ಶೈಲಿಯಲ್ಲಿ ಜೋಡಿಸಿ, ಒಂದು ಬದಿಯಲ್ಲಿ ಹಾಸ್ಯ ನಟ ಚಾರ್ಲಿ ಚಾಪ್ಲಿನ್ ಹಾಗೂ ಇನ್ನೊಂದು ಬದಿಯಲ್ಲಿ ಇನ್ನೋರ್ವ ಹಾಸ್ಯ ನಟ ಮಿಸ್ಟರ್ ಬಿನ್ ಚಿತ್ರಗಳನ್ನು ಮೂಡಿಸಿದ್ದರು.

ಈ ಸಾಧನೆಗೆ ಗಿನ್ನಿಸ್ ದಾಖಲೆಯ ಬಗ್ಗೆ 2017 ಜನವರಿ 13ಕ್ಕೆ ಅಂತಿಮ ಅಂಗೀಕಾರ ದೊರೆತಿದ್ದು, ಇದೀಗ ಅವರಿಂದ ಪ್ರಮಾಣ ಪತ್ರ ಬಂದಿದೆ.
ರೂಬಿಕ್ ಕ್ಯೂಬ್ ಸಮಸ್ಯೆ ಪರಿಹರಿಸುವುದೇ ಒಂದು ಹವ್ಯಾಸವಾಗಿ ಮಾಡಿಕೊಂಡಿರುವ ಈ ತಂಡ ಮಹಾನ್ ಸಾಧನೆಯನ್ನೇ ಮಾಡಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಪ್ರಯತ್ನದಲ್ಲಿ ಪ್ರಥ್ವೀಶ್ ಅವರೊಂದಿಗೆ ವಿದ್ಯಾರ್ಥಿಗಳಾದ ಮುದ್ದೇಬಿಹಾಳದ ಪ್ರಜ್ವಲ್ ಪಾಟೀಲ, ಮೂಡಿಗೆರೆಯ ಶರತ್ ಕೃಷ್ಣ, ವಿಜಯಪುರದ ವಿರೇಶ್ ಎಸ್.ಬಿ., ಅಥಣಿಯ ಶಾಂತಿನಾಥ, ಮಿಯಾಪದವಿನ ಶಿವಕುಮಾರ್, ಬಳ್ಳಾರಿಯ ವಿನಯ್, ಸಾಂಗ್ಲಿಯ ಸ್ವಪ್ನಿಲ್, ಮಾವಿನಕರೆಯ ಪ್ರಹ್ಲಾದ್, ವೇತಡ್ಕದ ಹರಿಕೃಷ್ಣ, ಮುಂಡಾಜೆಯ ಸಾತ್ವಿಕ್, ಬಲಮುರಿಯ ಸ್ಟೀಫ್ನ್, ಗುಂಡ್ಮಿಯ ಮಧುರ್, ಬನಶಂಕರಿಯ ಕಾರ್ತಿಕ್, ವಿಜಯಪುರದ ಮಲ್ಲನಗೌಡ ಮೇಟಿ, ಶಿವಮೊಗ್ಗದ ಸುಜಯ್, ಉಜಿರೆಯ ಸಂಜಯ್ ಹೊಳ್ಳ, ನಿಪ್ಪಾಣಿಯ ರೋಹನ್, ಕಾರವಾರದ ಶಾಯಿಲ್ ನ್ಯಾಕ್, ಸಾಬರಕಟ್ಟೆಯ ಶಿವ ಕೈಜೋಡಿಸಿದ್ದರು.
ಈ ಬಗ್ಗೆ ಮಾತನಾಡಿದ ಪ್ರಥ್ವೀಶ್, ನಾವು ಕೆಲ ವರ್ಷಗಳಿಂದ ನಡೆಸಿದ ಪ್ರಯತ್ನಕ್ಕೆ ಇದೀಗ ಗಿನ್ನಿಸ್ ದಾಖಲೆಯ ಗೌರವ ದೊರೆತಿದೆ.
ಇದಕ್ಕೆ ಧರ್ಮಸ್ಥಳದ ಧರ್ಮಾಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನ ಮತ್ತು ಸಹಕಾರವೇ ಕಾರಣ ಎಂದು ಸಂತಸ ವ್ಯಕ್ತಪಡಿಸಿದರು.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications