ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿದರೆ ಸಾಧನೆ ಸಾಧ್ಯ: ಎಸ್ಡಿಎಂ ಪ್ರಿನ್ಸಿಪಾಲ್

By Mahesh
|
Google Oneindia Kannada News

ಉಜಿರೆ, ಜೂ.19: "ಸವಾಲು ಮತ್ತು ಸಮಸ್ಯೆಗಳನ್ನು ಅವಕಾಶವೆಂದು ತಿಳಿದು ಪ್ರಯತ್ನಿಸಿದರೆ ಯಶಸ್ಸು ಸಾಧ್ಯ. ಸೃಜನಶೀಲತೆ, ಕುತೂಹಲ, ಸಂವಹನ ಕಲೆ ಎಂಬ ಮೂರು ಅಂಶಗಳು ವಿದ್ಯಾರ್ಥಿಗಳಿಗೆ ಅತ್ಯಗತ್ಯ. ನಾವು ಈಗ ಜ್ಞಾನಯುಗದಲ್ಲಿದ್ದೇವೆ. ಈ ಯುಗದಲ್ಲಿ ಯಶಸ್ಸು ಮುಖ್ಯ" ಎಂದು ಉಜಿರೆ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ.ಬಿ ಯಶೋವರ್ಮ ಹೇಳಿದರು.

ಇತ್ತೀಚೆಗೆ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ "ಪ್ರಥಮ ದಿನದ ನಿರೀಕ್ಷೆ, ಕುತೂಹಲವನ್ನು ವರ್ಷದುದ್ದಕ್ಕೂ ಉಳಿಸಿಕೊಳ್ಳಬೇಕು. ಎಲ್ಲರಲ್ಲೂ ವಿಶೇಷ ಸಾಮಥ್ರ್ಯ ಇದ್ದೇ ಇರುತ್ತದೆ. ಅದನ್ನು ಗುರುತಿಸುವ ಪ್ರಯತ್ನ ನಮ್ಮದಾಗಬೇಕು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂತಹವರು ಮಾತ್ರ ಯಶಸ್ವಿಯಾಗುತ್ತಾರೆ" ಎಂದು ಅಭಿಪ್ರಾಯಪಟ್ಟರು. [ಬೆಂಗಳೂರಲ್ಲಿ ಉಜಿರೆ ಎಸ್ ಡಿಎಂ ಕಾಲೇಜಿನ ಅಲುಮ್ನಿ]

Principal Yashovarma

"ದೇವರು ನಮಗೆ ಪ್ರತಿಕ್ಷಣವೂ ಹೊಸ ಉಡುಗೊರೆಯನ್ನು ನೀಡುತ್ತಾನೆ. ಅದನ್ನು ಬೆಲೆಬಾಳುವಂತೆ ಮಾಡುವುದು ನಮ್ಮ ಕರ್ತವ್ಯ" ಎಂದ ಅವರು "ಅಮೆರಿಕದಜನರಿಗೆ ಉದ್ಯೋಗವಕಾಶ ಕಡಿಮೆಯಾಗಿದೆ ಅವರಿಗೆ ಏಷ್ಯಾದ ಬುದ್ದಿವಂತ ಯುವಜನತೆಯೇ ದೊಡ್ಡ ಸವಾಲು" ಎಂದು ನುಡಿದರು.

"ನಮ್ಮ ಕಣ್ಣು, ಕಿವಿಗಳನ್ನು ತೆರೆದಿಟ್ಟರೆ ಸಾಕಷ್ಟು ಅವಕಾಶಗಳು ನಮಗಾಗಿ ಕಾಯುತ್ತಿವೆ. ಆದರೆ ನಾವು ಅದನ್ನು ಸಮಸ್ಯೆ ಸವಾಲುಗಳೆಂದು ಪರಿಗಣಿಸಿ ಕಡೆಗಣಿಸುತ್ತೇವೆ. ಕಾಲೇಜಿನಲ್ಲಿ ಅವಕಾಶಗಳ ಮಹಾ ಸಾಗರವೇ ಇದೆ ಅದನ್ನು ಚೆನ್ನಾಗಿ ಉಪಯೋಗಿಸಿಕೊಳ್ಳಿ" ಎಂದರು. [ಧರ್ಮಸ್ಥಳ ಸಾಮಾಜಿಕ ಜಾಲ ತಾಣಗಳ ಅನಾವರಣ]

"ಜೀವನದಲ್ಲಿ ಯಶಸ್ಸನ್ನು ಪಡೆಯಲು ಉತ್ತಮ ಅಂಕಗಳ ಜೊತೆಗೆ ಸೃಜನಶೀಲತೆ ಮುಖ್ಯ. ಒಳ್ಳೆಯ ಸಂಸ್ಕಾರ, ಹವ್ಯಾಸಗಳನ್ನು ಬೆಳಸಿಕೊಂಡು ಉತ್ತಮ ಹಾದಿಯಲ್ಲಿ ಮುಂದುವರೆಯಿರಿ" ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಶ್ರೀಧರ್ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಸಮಾರಂಭದಲ್ಲಿ ಉಪ ಪ್ರಾಂಶುಪಾಲ ಪ್ರೊ ಟಿ.ಎನ್ ಕೇಶವ್, ವಿಜ್ಞಾನ ವಿಭಾಗದ ಡೀನ್ ಪ್ರೊ ಕೆ ಎನ್ ಮೋಹನ್ ನಾರಾಯಣ್, ಕಲೆ ವಿಭಾಗದ ಮುಖ್ಯಸ್ಥರು, ಕಾಲೇಜಿನ ಉಪನ್ಯಾಸಕರು ಹಾಗೂ ಪ್ರಥಮ ಪದವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

English summary
“Look at the challenges as opportunities instead of looking at it as problems .Make use of every opportunity” said Dr. D.Yashovarma, Principal of SDM degree college, Ujire. He was recently speaking on the occasion of the orientation programme for Ist year students of the college held at Indraprasta stadium
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X