ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಷಾರಾಮಿ ಹಡಗುಗಳ ಮೂಲಕ ಮಂಗಳೂರಿಗೆ ಬಂತು ವಿದೇಶಿ ಪ್ರವಾಸಿಗರ ದಂಡು

|
Google Oneindia Kannada News

ಮಂಗಳೂರು, ಡಿಸೆಂಬರ್ 13: ಕಡಲತಡಿಯ ನಗರ ಮಂಗಳೂರಿಗೆ ವಿದೇಶಿ ಪ್ರವಾಸಿಗರ ದಂಡೇ ಹರಿದು ಬಂದಿದೆ. ಹೌದು, ನಗರದ ನವಮಂಗಳೂರು ಬಂದರಿಗೆ ಇಟಲಿಯ ಕೊಸ್ಟಾ ನಿಯೋ ರಿವೈರಾ ಮತ್ತು ಮಾಲ್ಟಾ ದೇಶದ ಮರೆಲ್ಲಾ ಡಿಸ್ಕವರಿ ಐಷಾರಾಮಿ ಪ್ರವಾಸಿ ಕ್ರೋಸ್ ಹಡಗುಗಳು ಆಗಮಿಸಿವೆ.

ಕೊಡಗಿನಲ್ಲಿ ಕುಸಿದ ಪ್ರವಾಸೋದ್ಯಮದ ಚೇತರಿಕೆಗೆ ನಾನಾ ಕಸರತ್ತುಕೊಡಗಿನಲ್ಲಿ ಕುಸಿದ ಪ್ರವಾಸೋದ್ಯಮದ ಚೇತರಿಕೆಗೆ ನಾನಾ ಕಸರತ್ತು

ಕೊಸ್ಟಾ ನಿಯೋ ರಿವೈರಾದಲ್ಲಿ 1,727 ಪ್ರವಾಸಿಗರು ಮತ್ತು 500 ಸಿಬ್ಬಂದಿ, ಮರೆಲ್ಲಾ ಡಿಸ್ಕವರಿಯಲ್ಲಿ 1,839 ಪ್ರವಾಸಿಗರು ಮತ್ತು 720 ಸಿಬ್ಬಂದಿಗಳನ್ನು ಹೊತ್ತ ಎರಡು ಹಡಗುಗಳು ಬಂದಿಳಿದಿವೆ.

 ದಸರಾ ಮುಗಿದರೂ ಮೈಸೂರಿನಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿಲ್ಲ ದಸರಾ ಮುಗಿದರೂ ಮೈಸೂರಿನಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿಲ್ಲ

ಕೊಸ್ಟಾ ನಿಯೋ ರಿವೈರಾ ಪ್ರವಾಸಿ ಹಡಗು ಮುಂಬೈ ಬಂದರಿನಿಂದ ಹಾಗೂ ಮರೆಲ್ಲಾ ಡಿಸ್ಕವರಿ ಹಡಗು ಮರ್ಮೊಗೋವಾ ಬಂದರಿನಿಂದ ಮಂಗಳೂರಿಗೆ ಬಂದಿದೆ.

Two cruise ship arrived to Mangaluru

ಮಂಗಳೂರಿನಲ್ಲಿ ಗತಕಾಲದ ಇತಿಹಾಸ ಸಾರುವ ಐತಿಹಾಸಿಕ ಚರ್ಚ್ ಗಳಾದ ಸಂತ ಅಲೋಶಿಯಸ್ , ಸಂತ ಮಿಲಾಗ್ರಿಸ್ , 450 ವರ್ಷಗಳ ಇತಿಹಾಸ ಸಾರುತ್ತಿರುವ ರೊಜಾರಿಯೋ ಕೆಥೇಡ್ರಲ್ ಸೇರಿದಂತೆ ತುಳುನಾಡಿನ ಸಂಸ್ಕೃತಿ, ಪರಂಪರೆ ಸಾರುವ ಇಲ್ಲಿಯ ಐತಿಹಾಸಿಕ ದೇವಾಲಯ, ದೈವಸ್ಥಾನಗಳನ್ನು ಈ ವಿದೇಶಿ ಪ್ರವಾಸಿಗರು ವಿಕ್ಷಿಸಲಿದ್ದಾರೆ.

 ಇನ್ಮುಂದೆ ಅಬ್ಬಿಫಾಲ್ಸ್ ಗೆ ಲಘು ವಾಹನಗಳಲ್ಲಿ ತೆರಳಬಹುದು ಇನ್ಮುಂದೆ ಅಬ್ಬಿಫಾಲ್ಸ್ ಗೆ ಲಘು ವಾಹನಗಳಲ್ಲಿ ತೆರಳಬಹುದು

ಅದಲ್ಲದೇ ತುಳುನಾಡಿನ ಪಾರಂಪರಿಕ ವಿಶಿಷ್ಟ ತಿನಿಸುಗಳ ಸವಿಯನ್ನು ಈ ಪ್ರವಾಸಿಗರು ಸವಿಯಲಿದ್ದಾರೆ. ಪ್ರವಾಸಿಗರನ್ನು ಮಂಗಳೂರು ಬಂದರಿನಲ್ಲಿ ಯಕ್ಷಗಾನ ಹಾಗೂ ಹುಲಿಕುಣಿತ ಪ್ರದರ್ಶನ ಮೂಲಕ ಸ್ವಾಗತ ಕೋರಲಾಯಿತು.

ಕಳೆದ ವರ್ಷ ನವಮಂಗಳೂರು ಬಂದರಿಗೆ 22 ಪ್ರವಾಸಿ ಹಡಗು ಆಗಮಿಸಿದ್ದು, 24,258 ವಿದೇಶಿಗರು ಜಿಲ್ಲೆಯನ್ನು ಸಂದರ್ಶಿಸಿದ್ದರು. ಪ್ರಸಕ್ತ ಸಾಲಿನಲ್ಲಿ ಒಟ್ಟು 32 ಹಡಗುಗಳು ಆಗಮಿಸಲಿವೆ ಎಂದು ಹೇಳಲಾಗಿದ್ದು ಪ್ರವಾಸೋಧ್ಯಮಕ್ಕೆ ಇನ್ನಷ್ಟು ಪುಷ್ಠಿ ದೊರಕಲಿದೆ.

English summary
Two cruise vessels 3616 passengers with 1220 crew members arrived at NMPT port on December 12.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X