ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಸ್ ಮೇಲೆ ಬಿದ್ದ ಭಾರೀ ಗಾತ್ರದ ಮರದ ರೆಂಬೆ:ಸ್ವಲ್ಪದರಲ್ಲೇ ತಪ್ಪಿದ ದುರಂತ

|
Google Oneindia Kannada News

ಮಂಗಳೂರು, ಜನವರಿ 28: ಬಸ್ಸಿನ ಮೇಲೆ ಭಾರೀ ಗಾತ್ರದ ಮರದ ರೆಂಬೆ ತುಂಡಾಗಿ ಬಿದ್ದ ಘಟನೆ ಮಂಗಳೂರಿನಲ್ಲಿ ನಡೆದಿದೆ. ನಗರದ ಜನನಿಬಿಡ ಹಂಪನಕಟ್ಟೆ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು , ನಡೆಯಬೇಕಿದ್ದ ಭಾರೀ ಅನಾಹುತ ಸ್ವಲ್ಪದರಲ್ಲೇ ತಪ್ಪಿದೆ.

ಸುಳ್ಯದಲ್ಲಿ ಬೆಂಕಿಗೆ ಆಹುತಿಯಾದ ಶಾಲಾ ಬಸ್, ತಪ್ಪಿದ ದುರಂತಸುಳ್ಯದಲ್ಲಿ ಬೆಂಕಿಗೆ ಆಹುತಿಯಾದ ಶಾಲಾ ಬಸ್, ತಪ್ಪಿದ ದುರಂತ

ಪ್ರತಿದಿನ ನೂರಾರು ಮಂದಿ ಬಸ್ಸಿಗಾಗಿ ಕಾಯುವ ಜಾಗ, ನಗರದ ಜನನಿಬಿಡ ಹಂಪನಕಟ್ಟೆಯಲ್ಲಿ ಘಟನೆ ನಡೆದಿದ್ದು, ಅಲ್ಲೇ ಇದ್ದ ಅಶ್ವತ್ಥ ಮರದಿಂದ ಭಾರೀ ಗಾತ್ರದ ರೆಂಬೆ ಏಕಾಏಕಿ ಮುರಿದು ಬಿದ್ದಿದೆ. ಮಂಗಳೂರಿನಿಂದ ಕಿನ್ನಿಗೋಳಿ ಕಡೆ ತೆರಳುತ್ತಿದ್ದ ಖಾಸಗಿ ಬಸ್ಸು ಬಂದು ನಿಂತಾಕ್ಷಣ ಮರದ ರೆಂಬೆ ಕಡಿದು ಬಿದ್ದಿದೆ.

 ಚಾಲಕನ ಸಮಯಪ್ರಜ್ಞೆ: ಕಿತ್ತೂರು ಪಟ್ಟಣದಲ್ಲಿ ತಪ್ಪಿದ ಭಾರೀ ಬಸ್ ದುರಂತ ಚಾಲಕನ ಸಮಯಪ್ರಜ್ಞೆ: ಕಿತ್ತೂರು ಪಟ್ಟಣದಲ್ಲಿ ತಪ್ಪಿದ ಭಾರೀ ಬಸ್ ದುರಂತ

ಬಸ್ಸಿನ ಮೇಲೆ ಮರದ ರೆಂಬೆ ಉರುಳಿದ ಪರಿಣಾಮ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾದು ನಿಂತಿದ್ದ ಜನರ ಮೇಲೆ ರೆಂಬೆ ಬಿದ್ದಿಲ್ಲ. ಮರದ ರೆಂಬೆ ಮುರಿದು ಬೀಳುವ ಸಂದರ್ಭದಲ್ಲಿ ಬಸ್ ಇಲ್ಲದಿದ್ದರೆ ರೆಂಬೆ ಇಲ್ಲಿದ್ದ ಜನರ ಮೇಲೆ ಉರುಳಿಬಿದ್ದು, ಭಾರೀ ಅನಾಹುತ ಸಂಭವಿಸುತ್ತಿತ್ತು.

Tree branch falls on city Bus in Mangaluru

ಆದರೂ ಘಟನೆಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಮಹಿಳೆಯೋರ್ವರು ಗಾಯಗೊಂಡಿದ್ದಾರೆ. ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಹಾಗೂ ಅಗ್ನಿಶಾಮಕದಳ ಸಿಬ್ಬಂದಿ ತೆರಳಿ ಮರದ ರೆಂಬೆಯನ್ನು ತೆರವು ಗೊಳಿಸಿದ್ದಾರೆ.

English summary
In a shocking incident huge tree branch fell on the city bus at Hampankatta in Mangaluru.In this incident one person injured.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X