ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು: ಸಂಚಾರ ನಿಯಮ ಉಲ್ಲಂಘಿಸಿದವರು ಅಂಚೇ ಕಚೇರಿಯಲ್ಲಿ ಶುಲ್ಕ ಪಾವತಿಸಬಹುದು

|
Google Oneindia Kannada News

ಮಂಗಳೂರು, ನವೆಂಬರ್ 15: ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿದವರು ಇನ್ಮುಂದೆ ರಾಜ್ಯದ ಯಾವುದೇ ಅಂಚೆ ಕಚೇರಿಯಲ್ಲಿ ಪೆನಾಲ್ಟಿ ಮೊತ್ತವನ್ನು ಪಾವತಿ ಮಾಡಬಹುದಾಗಿದೆ. ಮಂಗಳೂರು ಸಿಟಿ ಪೊಲೀಸ್‌ ಮತ್ತು ಮಂಗಳೂರು ಅಂಚೆ ಕಚೇರಿ ವಿಭಾಗ ಜಂಟಿಯಾಗಿ ಈ ಹೊಸ ಕಾರ್ಯಕ್ಕೆ ಮುಂದಾಗಿವೆ.

ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಂಚಾರ ಉಲ್ಲಂಘನೆಯ ದಂಡವನ್ನು ಅಂಚೆ ಕಚೇರಿಗಳಲ್ಲಿ ಪಾವತಿ ಮಾಡುವ ಸೌಲಭ್ಯವನ್ನು ಚಾಲನೆ ನೀಡಲಾಗಿದೆ. ಸೋಮವಾರ ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಕಚೇರಿಗಳ ಅಧೀಕ್ಷಕರಾದ ಶ್ರೀಹರ್ಷ ಎನ್, ಹಾಗೂ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಈ ನೂತನ ಸೇವೆಯ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಚಾಲನೆ ನೀಡಿದ್ದಾರೆ.

ಲೋಕ ಅದಾಲತ್‌ನಲ್ಲಿ ದಾಖಲೆಯ 14.77 ಲಕ್ಷ ಕೇಸ್ ಇತ್ಯರ್ಥ, ಮತ್ತೆ ಒಂದಾದ 170 ದಂಪತಿ!ಲೋಕ ಅದಾಲತ್‌ನಲ್ಲಿ ದಾಖಲೆಯ 14.77 ಲಕ್ಷ ಕೇಸ್ ಇತ್ಯರ್ಥ, ಮತ್ತೆ ಒಂದಾದ 170 ದಂಪತಿ!

ಎರಡು ಇಲಾಖೆಗಳ ನೂತನ ಸೇವೆಯ ಆರಂಭದಿಂದ ಸಂಚಾರ ನಿಯಮವನ್ನು ಉಲ್ಲಂಘನೆ ಮಾಡಿದ ವಾಹನ ಸವಾರರು ತಮ್ಮ ವಾಹವನ್ನು ಬಿಡುಗಡೆ ಮಾಡಿಸಿಕೊಳ್ಳಲು ದಂಡ ಕಟ್ಟಲು ಕೋರ್ಟ್‌ಗೆ ಹೋಗಬೇಕಾದ ಅನಿವಾರ್ಯತೆ ತಪ್ಪಿದಂತಾಗಿದೆ.

ಮಂಗಳೂರು ವ್ಯಾಪ್ತಿಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿದವರು ದಕ್ಷಿಣ ಕನ್ನಡ ಜಿಲ್ಲೆಯ 126, ಉಡುಪಿ 62 ಅಂಚೆ ಕಚೇರಿ ಸೇರಿದಂತೆ ರಾಜ್ಯದ 1,702 ಅಂಚೆ ಕಚೇರಿಗಳಲ್ಲಿ ನಗದಯ ಅಥವಾ ಸ್ಕ್ಯಾನ್ ಮಾಡುವ ಮೂಲಕ ದಂಡದ ಶುಲ್ಕವನ್ನು ಪಾವತಿಸಬಹುದಾಗಿದೆ.

ನಗದು ಅಥವಾ ಸ್ಕ್ಯಾನ್‌ ಮೂಲಕ ದಂಡ ಕಟ್ಟಬಹುದು

ನಗದು ಅಥವಾ ಸ್ಕ್ಯಾನ್‌ ಮೂಲಕ ದಂಡ ಕಟ್ಟಬಹುದು

ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಸೇರಿದಂತೆ ರಾಜ್ಯದ ಯಾವುದೇ ಅಂಚೆ ಕಚೇರಿಗಳಲ್ಲಿ ದಂಡದ ಮೊತ್ತವನ್ನು ಪಾವತಿ ಮಾಡಬಹುದಾದ ಸೇವೆಗೆ ಚಾಲನೆ ನೀಡಿದ್ದೇವೆ. ಈ ವ್ಯವಸ್ಥೆ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ವಾಹನ ಸವಾರರಿಗೆ ದಂಡವನ್ನು ಪಾವತಿ ಮಾಡಲು ಸುಲಭ ಮಾಡಿಕೊಡಲಿದೆ. ದಂಡದ ಮೊತ್ತವನ್ನು ಅಂಚೆ ಕಚೇರಿಯಲ್ಲಿ ಕೌಂಟರ್‌ಗಳಲ್ಲಿ ನೇರವಾಗಿ ನಗದಿನ ಮೂಲಕ ಅಥವಾ ಕ್ಯುಆರ್‌ ಕೋಡ್‌ ಸ್ಕ್ಯಾನ್ ಮಾಡಿ ಪಾವತಿಸ ಬಹುದು ಎಂದು ಪೊಲೀಸ್‌ ಕಮೀಷನರ್ ಶಶಿ ಕುಮಾರ್ ತಿಳಿಸಿದ್ದಾರೆ.

ಮುಖ್ಯ ಅಥವಾ ಉಪ ಅಂಚೆ ಕಚೇರಿಯಲ್ಲೂ ಪಾವತಿಗೆ ಅವಕಾಶ

ಮುಖ್ಯ ಅಥವಾ ಉಪ ಅಂಚೆ ಕಚೇರಿಯಲ್ಲೂ ಪಾವತಿಗೆ ಅವಕಾಶ

ಮಂಗಳೂರು ವಿಭಾಗ ಹಿರಿಯ ಅಂಚೆ ಅಧೀಕ್ಷಕ ಶ್ರೀ ಹರ್ಷ ಎನ್. ಮಾತನಾಡಿ, ಪ್ರಸ್ತುತ ಸಂಚಾರ ನಿಯಮ ಉಲ್ಲಂಘನೆ ದಂಡ ಶುಲ್ಕವನ್ನು ಪಾವತಿಸಲು ಕೇವಲ ಆನ್‌ಲೈನ್, ನಾಲ್ಕು ಸಂಚಾರಿ ಪೊಲೀಸ್ ಠಾಣೆ ಹಾಗೂ ನಾಲ್ಕು ಮಂಗಳೂರು ವನ್ ಕೇಂದ್ರಗಳಲ್ಲಿ ಮೂಲಕ ಸಲ್ಲಿಸಲು ಅವಕಾಶವಿತ್ತು. ಆದರೆ ಇನ್ನು ಮುಂದೆ ಕರ್ನಾಟಕದ ಎಲ್ಲಾ ಕೇಂದ್ರ ಅಂಚೆ ಕಛೇರಿ ಮತ್ತು ಉಪ ಅಂಚೆ ಕಚೇರಿಗಳಿಗೂ ವಿಸ್ತರಿಸಲಾಗುವುದು ಎಂದು ಮಾಹಿತಿ ನೀಡಿದರು.

7 ದಿನಗಳೊಳಗೆ ಹತ್ತಿರ ಅಂಚೆ ಕಚೇರಿಯಲ್ಲಿ ಪಾವತಿಗೆ ಅವಕಾಶ

7 ದಿನಗಳೊಳಗೆ ಹತ್ತಿರ ಅಂಚೆ ಕಚೇರಿಯಲ್ಲಿ ಪಾವತಿಗೆ ಅವಕಾಶ

ಹೆಲ್ಮೆಟ್‌ ಧರಿಸದ, ಸೀಟ್‌ ಬೆಲ್ಟ್‌ ಹಾಕದ, ತ್ರಿಬಲ್ ರೈಡಿಂಗ್ ಹಾಗೂ ಧೋಷಪೂರಿತ ನಂಬರ್‌ ಪ್ಲೇಟ್‌ ಹಾಕಿಕೊಂಡು ವಾಹನ ಚಲಾಯಿಸುವವರನ್ನು ನಿಯಂತ್ರಿಸಲು ನಗರದಲ್ಲಿ ಆರಂಭಿಸಿರುವ ಆಟೋಮ್ಯಾಷನ್‌ ಸೆಂಟರ್‌ನಲ್ಲಿ ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳ ಮಾಹಿತಿ ತಕ್ಷಣಕ್ಕೆ ಲಭ್ಯವಾಗುತ್ತದೆ.

ನಿಯಮ ಉಲ್ಲಂಘನೆ ಮಾಡಿದ ವಾಹನಗಳ ಮಾಲೀಕರಿಗೆ ನೋಟಿಸ್‌ ಕಳುಹಿಸಲಾಗುತ್ತದೆ. ನೋಟಿಸ್ ಜಾರಿಯಾದ 7 ದಿನಗಳಲ್ಲಿ ವಾಹನ ಮಾಲೀಕರು ದಂಡವನ್ನು ಪಾವತಿಸಬೇಕಾಗುತ್ತದೆ. ಅವರು ಮಂಗಳೂರಿಗೆ ಬಂದು ದಂಡ ಪಾವತಿಸಲು ತುಂಬಾ ಕಷ್ಟವಾಗುವುದರಿಂದ ಹತ್ತಿರದ ಅಂಚೆ ಕಚೇರಿಯಲ್ಲಿ ದಂಡವನ್ನು ಪಾವತಿ ಮಾಡಬಹುದಾಗಿದೆ ಎಂದು ಶ್ರೀಹರ್ಷ ತಿಳಿಸಿದರು.

ಸೇವಾ ಶುಲ್ಕವೆಷ್ಟು?

ಸೇವಾ ಶುಲ್ಕವೆಷ್ಟು?

ಇನ್ನು ಅಂಚೆ ಕಚೇರಿಯಲ್ಲಿ ನೀಡಲಾಗುವ ಈ ಸೌಲಭ್ಯಕ್ಕೆ ಸೇವಾ ಶುಲ್ಕ ಅನ್ವಯವಾಗಲಿದೆ. 1000 ರೂ. ದಂಡ ಪಾವತಿಸಿದರೆ 10 ರೂ ಸೇವಾಶುಲ್ಕ, 1001ರಿಂದ 2500 ರೂ ಮೊತ್ತಕ್ಕೆ 15, 2500ರಿಂದ 5000 ರೂ ಮೊತ್ತಕ್ಕೆ 20 ಹಾಗೂ 5000ಕ್ಕಿಂತ ಹೆಚ್ಚಿನ ಮೊತ್ತ ಪಾವತಿಗೆ 25 ರೂ ಸೇವಾ ಶುಲ್ಕ ನಿಗಧಿ ಮಾಡಲಾಗಿದೆ.

ಅಂಚೆ ಕಚೇರಿಯಲ್ಲಿ ಇ- ಪೇಮೆಂಟ್‌ ಮೂಲಕ ಸ್ವೀಕರಿಸಿದ ಸಂಚಾರ ನಿಯಮ ಉಲ್ಲಂಘನೆ ದಂಡ API ಇಂಟೆಗ್ರೇಷನ್ ಮೂಲಕ ಮಂಗಳೂರು ಸಿಟಿ ಪೊಲೀಸ್‌ ಸರ್ವರ್‌ಗೆ ಆನ್‌ಲೈನ್‌ನಲ್ಲಿ ತಕ್ಷಣ ವರ್ಗಾವಣೆಯಾಗಲಿದೆ.

English summary
Traffic rules violators can now pay penalty amount at post offices in Mangaluru city. Mangaluru City Police and the Department of Posts have taken a joint initiative this service,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X