ಧರ್ಮಸ್ಥಳದಲ್ಲಿ ಸಾವಿರಾರು ಭಕ್ತರಿಂದ ಶಿವ ನಾಮ ಸ್ಮರಣೆ, ಜಾಗರಣೆ

ಮಂಗಳೂರು, ಮಾರ್ಚ್ 05: ದಕ್ಷಿಣ ಭಾರತದ ಹೆಸರಾಂತ ಪುಣ್ಯ ಕ್ಷೇತ್ರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಹಾಶಿವರಾತ್ರಿಯ ಜಾಗರಣೆ ಸಂಭ್ರಮದಿಂದ‌ ಜರುಗಿದೆ.ನಾಡಿನ ವಿವಿಧೆಡೆಯಿಂದ ಆಗಮಿಸಿದ ಸಾವಿರಾರು ಭಕ್ತರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮುಂಜಾನೆಯವರೆಗೂ ಶಿವರಾತ್ರಿಯ ಜಾಗರಣೆ ನಡೆಸಿದರು.

ದೇವಳದ ಮುಂಭಾಗ ಸಾವಿರಾರು ಭಕ್ತರು ಜಾಗರಣೆ ಮಾಡಿದ್ದು, ಭಜನೆಯ ಮೂಲಕ ಶಿವನ ಸ್ತುತಿ ಮಾಡಿದ್ದಾರೆ. ದೇವಾಲಯದಲ್ಲಿ ತಡರಾತ್ರಿ ಎರಡು ಗಂಟೆಯ ವೇಳೆಗೆ ಪೂಜಾ ವಿಧಿವಿಧಾನಗಳು ಮುಗಿದ ಬಳಿಕ ಮಂಜುನಾಥ ಬೆಳ್ಳಿರಥದಲ್ಲಿ ರಥಾರೂಢನಾಗಿ ದರ್ಶನ ನೀಡಿದ.

Thousands of devotees celebrated Mahashivaratri in Dharmasthala

ಶಿವರಾತ್ರಿಯ ಜಾಗರಣೆಗೆಂದೇ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಭಕ್ತರು ರಥಾರೂಢನಾಗಿ ಬಂದ ಮಂಜುನಾಥನನ್ನು ಕಣ್ತುಂಬಿಕೊಂಡರು. ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದ ಬಳಿಕ ಧರ್ಮಸ್ಥಳದ ಮಹಾದ್ವಾರದ ತನಕ ಮಂಜುನಾಥನ ಬೆಳ್ಳಿ ರಥೋತ್ಸವ ನಡೆದಿದೆ.

Thousands of devotees celebrated Mahashivaratri in Dharmasthala

ಮಹಾಶಿವರಾತ್ರಿಯ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ತಡರಾತ್ರಿಯವರೆಗೂ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಇಂದು ಬೆಳಗ್ಗೆ ಒಂಭತ್ತು ಗಂಟೆಯ ನಂತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+