ಮನೆಗೆ ಕನ್ನಹಾಕಿದ ಕಳ್ಳರು, ಲಕ್ಷಾಂತರ ನಗದು ಲೂಟಿ
ಬಂಟ್ವಾಳ, ಡಿಸೆಂಬರ್,12: ಅಮ್ಚೂರು ಚರ್ಚ್ ಬಳಿ ಇರುವ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ನಗದು ದೋಚಿದ ಕಳ್ಳರು ಪರಾರಿಯಾದ ಘಟನೆ ದಕ್ಚಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಶನಿವಾರ ನಡೆದಿದೆ.
ಅಮ್ಚೂರಿನ ಇಲ್ಯಾಸ್ ಡಿಸೋಜಾ ಎಂಬುವರ ಮನೆಗೆ ನುಗ್ಗಿದ್ದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ನಗರ ಠಾಣಾ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು, ಶ್ವಾನ ದಳ , ಬೆರಳಚ್ಚು ತಜ್ಞರು ಆಗಮಿಸಿ ತನಿಖೆ ಮುಂದುವರಿಸಿದ್ದಾರೆ.[ಮಂಗಳೂರಲ್ಲಿ ಬ್ಯಾಂಕ್ ದರೋಡೆ, 5 ಕೋಟಿ ಲೂಟಿ]

ವಿವಿಧ ಪ್ರಕರಣದಲ್ಲಿ ಭಾಗಿಯಾದ ಮೂವರ ಮೇಲೆ ಗೂಂಡಾ ಕಾಯ್ದೆ
ಮಂಗಳೂರು, ಡಿಸೆಂಬರ್,12: ಬಿಜೈ ರಾಜಾ ಕೊಲೆ ಸೇರಿದಂತೆ ಕೊಲೆಯತ್ನ, ಡಕಾಯಿತಿ ಸೇರಿ 8 ಕ್ಕಿಂತಲೂ ಹೆಚ್ಚಿನ ಪ್ರಕರಣಗಳಲ್ಲಿ ಭಾಗಿಯಾಗಿದ್ದ 2 ರೌಡಿ ಶೀಟರ್ ಗಳ ವಿರುದ್ಧ ಗೂಂಡಾ ಕಾಯ್ದೆ ದಾಖಲಿಸುವಂತೆ ಕಮಿಷನರ್ ಎಸ್. ಮುರುಗನ್ ಆದೇಶಿಸಿದ್ದಾರೆ.
ಈಗಾಗಲೇ ಹಲವು ಕೃತ್ಯಗಳಲ್ಲಿ ಭಾಗಿಯಾಗಿದ್ದ ಬೊಕ್ಕಪಟ್ಣ ನಿವಾಸಿ ಭರತೇಶ್, ಕೊಟ್ಟಾರ ನಿವಾಸಿ ಚಂದ್ರಹಾಸ್ ಶೆಟ್ಟಿ ಎಂಬುವರ ಮೇಲೆ ಗೂಂಡಾ ಕಾಯ್ದೆ ದಾಖಲಿಸುವಂತೆ ಕಮಿಷನರ್ ಆದೇಶಿಸಿದ್ದಾರೆ.[ಮುತ್ತೂಟ್ ಫೈನಾನ್ಸ್ ನಲ್ಲಿ ದರೋಡೆಗೆ ಯತ್ನ]
2 ದಿನಗಳ ಹಿಂದೆ ರೌಡಿ ಶೀಟರ್ ಸಫ್ವಾನ್ ಮೇಲೆ ಗೂಂಡಾ ಕಾಯ್ದೆ ದಾಖಲಿಸಿದ್ದು , ವಿವಿಧ ಅಪರಾಧಗಳಲ್ಲಿ ಭಾಗಿಯಾಗಿದ್ದ ಮೂವರ ಮೇಲೆ ಗೂಂಡಾ ಕಾಯ್ದೆ ಜಾರಿ ಮಾಡಲಾಗಿದೆ.












Click it and Unblock the Notifications