ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಮದರಸದ ಶಿಕ್ಷಕನ ವಿರುದ್ಧ ದೂರು

ಮಂಗಳೂರು ಮೇ 18: 12 ವರ್ಷದ ಬಾಲಕನ ಮೇಲೆ ಮದರಸ ಶಿಕ್ಷಕನೋರ್ವ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಪುತ್ತೂರಿನ ನರಿಮೊಗರು ಗ್ರಾಮದ ಪುರುಷರಕಟ್ಟೆ ಮಸೀದಿಯಲ್ಲಿ ಘಟನೆ . ಈ ಹಿನ್ನೆಲೆಯಲ್ಲಿ ಮಸೀದಿ ಉಸ್ತಾದ್ ಅನ್ವರ್ ಮೌಲ್ವಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲು ಮಾಡಲಾಗಿದೆ.

ಪುತ್ತೂರು ತಾಲೂಕು ನರಿಮೊಗರು ಗ್ರಾಮದ ಪುರುಷರಕಟ್ಟೆಯಲ್ಲಿರುವ ಹಿಮಾಯುತುಲ್‌ ಇಸ್ಲಾಂ ಮದರಸದಲ್ಲಿದ್ದ ಅನ್ವರ್‌ ಮೌಲವಿ ರವರಿಗೆ ಕಳೆದ ಮಾರ್ಚ್ 21 ರಂದು ಧರ್ಮದ ಪದ್ದತಿಯಂತೆ ಮಸೀದಿಯ ಗುರುಗಳಾದ ಉಸ್ತಾದ್‌ ರವರಿಗೆ ಸಂಜೆಯ ಚಹ-ತಿಂಡಿಯನ್ನು ನೆರೆಯ ಹಾರೂನ್‌ ಎಂಬವರು ಬಾಲಕನ ಕೈಯಲ್ಲಿ ಕೊಟ್ಟು ಕಳುಹಿಸಿದ್ದರು ಎನ್ನಲಾಗಿದೆ.

Teacher of Mosque booked under Pocso act

ಬಾಲಕನು ಸಂಜೆ ಸುಮಾರು 5ಗಂಟೆಗೆ ಚಹಾ ಮತ್ತು ತಿಂಡಿಯನ್ನು ಕೊಂಡು ಹೋಗಿ ಕೊಟ್ಟ ಸಮಯ ಅನ್ವರ್‌ ಮೌಲವಿ ಮದರಸದ ಬಾಗಿಲನ್ನು ಹಾಕಿ ಬಾಲಕನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ದೂರಲಾಗಿದೆ.

ಅದಲ್ಲದೇ ಆರೋಪಿ ಅನ್ವರ್‌ ಮೌಲವಿ ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಸಾಯಿಸಿ ಬಿಡುತ್ತೇನೆ ಎಂದು ಜೀವ ಬೆದರಿಕೆ ಒಡ್ಡಿದ್ದು ಎಂದು ಆರೋಪಿಸಲಾಗಿಒದೆ. ಕಳೆದ ಏಪ್ರಿಲ್ 07 ರಂದು ಬೆಳಗ್ಗೆ 8 ಗಂಟೆಗೆ ಮದರಸ ಶಾಲೆ ಬಿಟ್ಟ ಬಳಿಕ ಮದರಸದಿಂದ ಹೊರಗಡೆ ಹೋಗದಂತೆ ಬಾಗಿಲು ಹಾಕಿ ಮತ್ತೊಮ್ಮೆ ಬಾಲಕನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯವನ್ನು ಎಸಗಿದ್ದ ಎಂದು ಹೇಳಲಾಗಿದೆ.

ಈ ಘಟನೆಯಿಂದ ಆಘಾತಕ್ಕೆ ಒಳಗಾದ ಬಾಳಕ ಮದರಸಕ್ಕೆ ಹಾಗೂ ಮಸೀದಿಗೆ ನಮಾಝ್‌ಗೆ ಹೋಗದೇ ಇದ್ದುದನ್ನು ಕಂಡು ಬಾಲಕನ ತಾಯಿ ಬಾಲಕನನ್ನು ವಿಚಾರಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿಬಾಲಕನ ತಾಯಿ ಪೊಲೀಸ್ ಠಾಣೆಗೆ ತೆರಳಿ ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವಂತೆ ತಡವಾಗಿ ದೂರು ನೀಡಿದ್ದ ಪರಿಣಾಮ ಆರೋಪಿ ಮೌಲ್ವಿ ವಿರುದ್ಧ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+