ಮಂಗಳೂರು ವಿದ್ಯಾರ್ಥಿನಿ ಮೇಲೆ ಶಿಕ್ಷಕನಿಂದ ಕಿರುಕುಳ

ವಾಮಂಜೂರಿನ ಸೈಂಟ್ ರೇಮೆಂಡ್ಸ್ ಕಾಲೇಜಿನ ಕನ್ನಡ ಉಪನ್ಯಾಸಕ ಹರೀಶ್ ಆಚಾರ್ಯ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದು, ಸೋಮವಾರ ಕಾಲೇಜಿನಿಂದ ಮರಳಿ ಬಂದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಫ್ಯಾನಿಗೆ ನೇಣು ಬಿಗಿದು ಅತ್ಮಹತ್ಯೆಗೆ ಯತ್ನಿಸುತ್ತಿರುವುದನ್ನು ಕಂಡ ಆಕೆಯ ಸೋದರ ಮಾವ ಆಕೆಯನ್ನು ರಕ್ಷಿಸಿ, ವಿಚಾರಿಸಿದಾಗ ಲೈಂಗಿಕ ಕಿರುಕುಳ ಪ್ರಕರಣ ಬೆಳಕಿಗೆ ಬಂದಿದೆ.[ಮಂಗಳೂರಿನಲ್ಲಿ ವಿದ್ಯಾರ್ಥಿಗಳಿಂದ ಬೃಹತ್ ಪ್ರತಿಭಟನೆ]
ಉಪನ್ಯಾಸಕ ಅಂಕಗಳು ಕಡಿಮೆಯಾಗಿದೆ ಎಂದು ವಿದ್ಯಾರ್ಥಿನಿಯನ್ನು ಕಳೆದ ಒಂದು ವರ್ಷದಿಂದ ಚೇಂಬರ್‌ಗೆ ಕರೆಸಿ ಕೈಮುಟ್ಟುತ್ತಿದ್ದ ಮತ್ತು ಮೊಬೈಲ್ ನಂಬರ್ ಕೇಳುತ್ತಿದ್ದ ಎಂದು ವಿದ್ಯಾರ್ಥಿನಿಯ ಪೋಷಕರು ಆರೋಪಿಸಿದ್ದಾರೆ.
ಇಂತಹ ಪ್ರಕರಣಗಳು ಮರುಕಳಿಸದಂತೆ ಕೂಡಲೇ ಬಂಧಿಸಿ ಕಾನೂನು ಕ್ರಮ ಜರಗಿಸಬೇಕೆಂದು ಸ್ಥಳೀಯ ಸಂಘಟನೆಗಳು ಒತ್ತಾಯಿಸಿದೆ.
ಪರಾರಿಯಾದ ಶಿಕ್ಷಕ: ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ವಿಚಾರ ಸುದ್ದಿ ದೊಡ್ಡದಾಗುತ್ತಿದ್ದಂತೆ ಉಪನ್ಯಾಸಕ ಹರೀಶ್ ತಲೆಮರೆಸಿಕೊಂಡಿದ್ದಾನೆ. ಪೊಲೀಸರು ಶಿಕ್ಷಕನ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ.












Click it and Unblock the Notifications