ಬೆಳಿಗ್ಗೆ ಕಾಂಗ್ರೆಸ್, ಮಧ್ಯಾಹ್ನ ಬಿಜೆಪಿ, ಸಂಜೆ ಮತ್ತೆ ಕಾಂಗ್ರೆಸ್ ಗೆ ವಾಪಸ್!

Recommended Video

      Karnataka Elections 2018 : ಕಾಂಗ್ರೆಸ್ ಶಾಸಕನ ಪಕ್ಷಾಂತರ ಅವಾಂತರ | Oneindia Kannada

      ಮಂಗಳೂರು, ಏಪ್ರಿಲ್ 9: ಹೀಗೊಂದು ಪಕ್ಷಾಂತರ ನಾಟಕಕ್ಕೆ ಕರಾವಳಿ ಕರ್ನಾಟಕದ ರಾಜಕೀಯ ಶನಿವಾರ ಸಾಕ್ಷಿಯಾಗಿತ್ತು. ಹೀಗೆ ಗಂಟೆಗೊಂದು ಪಕ್ಷ ಬದಲಿಸಿದವರು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಸುಂದರ ದೇವಿನಗರ.

      ಭಾನುವಾರ ಬೆಳಿಗ್ಗೆ ಸುಂದರ ದೇವಿನಗರ ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ್ದರು. ತದ ನಂತರ ಅವರು ಸಮಾರಂಭವೊಂದರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಬಂಟ್ವಾಳದಲ್ಲಿ ಕಾಂಗ್ರೆಸ್ ಪ್ರಭಾವಿ ನಾಯಕ ರಮಾನಾಥ ರೈ ವಿರುದ್ಧ ಕಣಕ್ಕಿಳಿಯಲಿರುವ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರನ್ನು ಬಿಜೆಪಿ ಧ್ವಜ ನೀಡಿ ಪಕ್ಷಕ್ಕೂ ಬರ ಮಾಡಿಕೊಂಡಿದ್ದರು.

      ಆದರೆ ಮತ್ತೆ ನಡೆದ ಮಿಂಚಿನ ಬೆಳವಣಿಗೆಯಲ್ಲಿ ಸುಂದರ ದೇವಿನಗರ ಮತ್ತೆ ಕಾಂಗ್ರೆಸ್ ಗೆ ವಾಪಾಸಾಗಿದ್ದರು. ಬಿಜೆಪಿಗೆ ಸೇರಿದ ಕೆಲವೇ ಗಂಟೆಗಳ ನಂತರ ಬಂಟ್ವಾಳದ ಮಾಣಿಯಲ್ಲಿ ಸಂಜೆ ನಡೆದ ಕಾರ್ಯಕ್ರಮದಲ್ಲಿ ಅವರು ಕಾಂಗ್ರೆಸ್ ಗೆ ಮರು ಸೇರ್ಪಡೆಯಾದರು.

      Swing it like Sundar: Quits Congress, joins BJP and comes back to Congress by evening

      ಪ್ರಕಾಶ್ ಶೆಟ್ಟಿ ತುಂಬೆ ಮೊದಲಾದವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಅವರನ್ನು ಮತ್ತೆ ಪಕ್ಷಕ್ಕೆ ಸ್ವಾಗತಿಸಲಾಯಿತು.

      ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

      ಚುನಾವಣೆ ಹತ್ತಿರ ಬಂದಾಗ ಚಿತ್ರ ವಿಚಿತ್ರ ಪಕ್ಷಾಂತರಗಳು ನಡೆಯುತ್ತವೆ. ಅವುಗಳ ಸಾಲಿಗೆ ಸೇರುವ ನಾಟಕೀಯ ಪಕ್ಷಾಂತರ ಘಟನೆಗಳಲ್ಲಿ ಇದೂ ಒಂದು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+