ಅಚ್ಚರಿಯ ಘಟನೆ: ಸುಬ್ರಹ್ಮಣ್ಯನ ಸನ್ನಿಧಿಯಲ್ಲಿ ಪ್ರತ್ಯಕ್ಷವಾದ ನವಿಲು!
Recommended Video
ಮಂಗಳೂರು, ಮೇ 14:ಮಂಗಳೂರು ಹೊರವಲಯದ ಅನಂತ ಪದ್ಮನಾಭ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಇಲ್ಲಿಯ ಸುಬ್ರಹ್ಮಣ್ಯ ದೇಗುಲದಲ್ಲಿ ಉತ್ಸವದ ಸಂದರ್ಭದಲ್ಲಿ ದೇವರಿಗೆ ಅರ್ಪಿಸಿದ ಧ್ವಜಸ್ತಂಭಕ್ಕೆ ತೈಲಧಿವಾಸ ಪೂಜೆ ಅದ್ದೂರಿಯಾಗಿ ನಡೆದಿತ್ತು. ಇದೇ ವೇಳೆ ಸುಬ್ರಹ್ಮಣ್ಯನ ವಾಹನ ನವಿಲು ಪ್ರತ್ಯಕ್ಷವಾಗಿ ಏಕಾಏಕಿ ದೇವಾಲಯ ಪ್ರವೇಶಿಸಿದೆ.
ನವಿಲು ಯಾವುದೇ ಅಳುಕಿಲ್ಲದೇ ಭಕ್ತರ ಜೊತೆ ಪೂಜೆಯಲ್ಲಿ ಭಾಗಿಯಾಗಿ ಅಚ್ಚರಿ ಮೂಡಿಸಿದೆ. ದೇವರ ಪೂಜೆ ಸಂದರ್ಭದಲ್ಲಿ ನವಿಲು ದೇಗುಲದ ಒಳಭಾಗದ ಅಂಗಣದಲ್ಲಿ ಪ್ರದಕ್ಷಿಣೆ ಹಾಕಿದ್ದಲ್ಲದೆ, ಜನರ ಜೊತೆಯೇ ನಡೆದುಬಂದಿದ್ದು ಅಚ್ಚರಿಗೆ ಕಾರಣವಾಗಿದೆ.

ಅಲ್ಲದೇ, ಸುಬ್ರಹ್ಮಣ್ಯನಿಗೆ ಗರ್ಭಗುಡಿಯಲ್ಲಿ ಪೂಜೆ ನಡೆಯುತ್ತಿದ್ದಾಗ ಮುಂಭಾಗದಲ್ಲಿ ನವಿಲು ನಿಂತಿರುವುದು ಕಂಡು ಭಕ್ತರು ಸ್ವತಃ ದೇವರೇ ಬಂದಿರುವ ರೀತಿ ಕೈಮುಗಿದು ಭಕ್ತಿ ತೋರಿದರು. ಆದರೆ, ಸ್ಥಳೀಯರ ಮಾಹಿತಿ ಪ್ರಕಾರ, ಅದೇ ನವಿಲು ದಿನವೂ ಪೂಜೆ ಸಂದರ್ಭದಲ್ಲಿ ದೇಗುಲದ ಒಳಭಾಗಕ್ಕೆ ಬಂದು ನಿಲ್ಲುತ್ತೆ ಎಂದು ಹೇಳಿದ್ದಾರೆ . ಜೊತೆಗೆ ದೇವರ ನೈವೇದ್ಯ ಸೇವನೆ ಮಾಡುವುದಂತೆ. ಏನಿದ್ದರೂ, ಸುಬ್ರಹ್ಮಣ್ಯನ ಸನ್ನಿಧಿಯಲ್ಲಿ ಸುಬ್ರಹ್ಮಣ್ಯನ ವಾಹನವೇ ಬಂದು ನಿಂತಿದ್ದು ಭಕ್ತರಿಗೆ ಪಾಲಿಗೆ ವಿಶೇಷವೇ ಸರಿ.












Click it and Unblock the Notifications