Puneeth Kerehalli: ಹಾಸನದಲ್ಲಿ ಹಿಂದುಪರ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಬಂಧಿಸಿದ ಪೊಲೀಸರು, ಕಾರಣವೇನು?

ಬೆಂಗಳೂರು: ಹಿಂದುಪರ ಸಾಮಾಜಿಕ ಕಾರ್ಯಕರ್ತ ಹಾಗೂ 'ರಾಷ್ಟ್ರಪಡೆ'ಯ ಸಂಘಟನೆ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಅವರನ್ನು ಬೆಂಗಳೂರು ಪೊಲೀಸರು ಹಾಸನದಲ್ಲಿ ಶುಕ್ರವಾರ ಬಂಧಿಸಿದ್ದಾರೆ. ಮೌಲ್ವಿಗಳ ವಿರುದ್ಧ ನಿಂದನೆ ಆರೋಪ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ಸಲ್ಲಿಕೆ ಆಗಿತ್ತು. ಈ ಹಿನ್ನೆಲೆ ಹಾಸನ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪುನೀತ್ ಅವರನ್ನು ಬಂಧಿಸಿ ಬೆಂಗಳೂರಿಗೆ ಕರೆತರಲಾಗುತ್ತಿದೆ.

ಮೌಲ್ವಿಗಳ ಕುರಿತು ನಿಂದನಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ವಕ್ತಾರ, ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ ಅವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಸಂಬಂಧ ಬೆಂಗಳೂರು ಕೆ.ಎಸ್. ಲೇಔಟ್ ಠಾಣೆ ಪೊಲೀಸರು ಹಾಸನಕ್ಕೆ ತೆರಳಿದ್ದರು. ಹಾಸನದಲ್ಲಿ ಸಹೋದರನ ಮದುವೆ ಕಾರ್ಯಗಳಲ್ಲಿ ಬ್ಯೂಸಿಯಾಗಿದ್ದ ಸಾಮಾಜಿಕ ಕಾರ್ಯಕರ್ತ ಪುನೀತ್ ಕೆರೆಹಳ್ಳಿಯನ್ನು ಬಂಧಿಸಿ ಪೊಲೀಸ್ ವಾಹನದಲ್ಲಿ ರಾಜಧಾನಿಗೆ ಕರೆ ತರಲಾಗುತ್ತಿದೆ.

Puneeth Kerehalli

ಪ್ರಕರಣ ಸಂಬಂಧ ವಿಚಾರಣೆ ನಡೆಸುವ ಪೊಲೀಸರು ಪುನೀತ್ ಅವರ ಹೇಳಿಕೆ, ದೂರಿನಲ್ಲಿ ಉಲ್ಲೇಖಿಸಿರುವ ಅಂಶಗಳ ಬಗ್ಗೆ ಪೊಲೀಸರು ಸ್ಪಷ್ಟನೆ ಕೇಳಬಹುದು. ಈ ಹಿಂದೆಯು ವಿವಿಧ ಆರೋಪಗಳ ಮೇಲೆ ಪುನೀತ್ ಕೆರೆ ಹಳ್ಳಿ ಅವರನ್ನು ಬಂಧಿಸಲಾಗಿತ್ತು. ಅಕ್ರಮ ಬಾಂಗ್ಲಾ ವಲಸಿಗರ ಶೆಡ್‌ಗಳಿಗೆ ನುಗ್ಗಿ, ದಾಖಲಾತಿ ಕೇಳಿದ್ದರು. ಅವರನ್ನು ಬೆದರಿಸಿದ್ದರು ಎಂಬ ಆರೋಪಗಳು ಸೇರಿದಂತೆ ವಿವಿಧ ಆರೋಪಗಳ ಮೇರೆಗೆ ಅವರನ್ನು ಬಂಧಿಸಲಾಗಿತ್ತು. ಇದೀಗ ಮೌಲ್ವಿಗಳನ್ನು ನಿಂದಿಸಿದ್ದಾರೆಂಬ ಕಾರಣಕ್ಕೆ ಬಂಧನವಾಗಿದೆ. ವಿಚಾರಣೆ ತೀವ್ರಗೊಳಿಸುವ ಸಾಧ್ಯತೆಗಳು ಇವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+