ಮಲ್ಪೆ 'ಸರ್ಫಿಂಗ್ ಉತ್ಸವ'ಕ್ಕೆ ಹೊಡೆತ ಕೊಟ್ಟ 'ರೋನು'
ಉಡುಪಿ, ನವೆಂಬರ್, 16 : ವಾಯುಭಾರ ಕುಸಿತದ ಪರಿಣಾಮ ತಮಿಳುನಾಡು, ಆಂಧ್ರಪ್ರದೇಶ ಮತ್ತು ಕರ್ನಾಟಕದ ಕೆಲವು ಪ್ರದೇಶಗಳಿಗೆ ಸುಳಿದಿದ್ದು, ಉಡುಪಿಯ ಮಲ್ಪೆ ಬೀಚಿನಲ್ಲಿ ನವೆಂಬರ್ ತಿಂಗಳಲ್ಲಿ 'ಸರ್ಫಿಂಗ್ ಉತ್ಸವ' ಸಂಘಟಿಸುವುದು ಅಸಾಧ್ಯ ಎಂದು ಮಲ್ಪೆ ಬೀಚ್ ಪರಿಶೋಧಕರು ಹೇಳಿದ್ದಾರೆ.
ನವೆಂಬರ್ 9ರಂದು 'ರೋನು' ಚಂಡಮಾರುತ ಅಬ್ಬರಿಸಿದೆ. ವಾಯುಭಾರ ಕುಸಿತದಿಂದಾಗಿ ಅಲೆಗಳ ಭವಿಷ್ಯ ಹೇಳುವುದು ಕೂಡ ಸಾಧ್ಯವಿಲ್ಲ. ಹಾಗಾಗಿ ಮಲ್ಪೆ ಸಮುದ್ರದ ಪ್ರಸಕ್ತ ಅಲೆಗಳ ಪರಿಸ್ಥಿತಿ ಗಮನಿಸಿದರೆ ಸರ್ಫಿಂಗಿನಂತಹ ಕ್ರೀಡೆಗಳಿಗೆ ಸೂಕ್ತವಲ್ಲ. ರಾಷ್ಟ್ರೀಯ ಮಟ್ಟದ ಸರ್ಫಿಂಗ್ ಕ್ರೀಡಾಕೂಟ ಮೇ 2016ರಲ್ಲಿ ನಡೆಯಲಿದೆ ಎಂದು ಭಾರತದ ಸರ್ಫಿಂಗ್ ಫೆಡರೇಷನ್ ನ ಅಧ್ಯಕ್ಷ ಕಿಶೋರ್ ಕುಮಾರ್ ಕೇಳಿದ್ದಾರೆ.[ಚಂಡಮಾರುತ 'ರೋನು', ಎಲ್ಲೆಲ್ಲಿ ಅಬ್ಬರಿಸುತ್ತಿದೆ?]

ನೆತ್ತರಕೆರೆ ಮಸೀದಿಗೆ ಬೆಂಕಿ, 5 ಸಾವಿರ ರೂ. ನಷ್ಟ
ಮಂಗಳೂರು, ನವೆಂಬರ್, 16 : ಮುಹಿಯುದ್ದೀನ್ ಮಸೀದಿಗೆ ದುಷ್ಕರ್ಮಿಗಳು ಬೆಂಕಿ ಕೊಳ್ಳಿ ಎಸೆದು ಪರಾರಿಯಾಗಿರುವ ಘಟನೆ ಪೊಳಲಿ ರಸ್ತೆಯ ಕೊಡ್ಮಾಣ್ ಸಮೀಪವಿರುವ ನೆತ್ತರಕೆರೆ ಬಳಿ ಶನಿವಾರ ರಾತ್ರಿ ನಡೆದಿದ್ದು, ಭಾನುವಾರ ಬೆಳಗ್ಗೆ ಈ ಘಟನೆ ಬೆಳಕಿಗೆ ಬಂದಿದೆ.[ವಿದೇಶ ವ್ಯಾಸಂಗಕ್ಕೆ ತೆರಳುವ ಅಲ್ಪಸಂಖ್ಯಾತರಿಗೆ ಶಿಷ್ಯವೇತನ]
ಕಿಡಿಗೇಡಿಗಳು ಮಸೀದಿಯ ಎಡಭಾಗದ ಕಿಟಕಿ ಮೂಲಕ ಬೆಂಕಿ ಕೊಳ್ಳಿ ಹಾಕಿದ್ದು, ನಮಾಝ್ ನಿರ್ವಹಿಸುವ ಚಾಪೆ ಹಾಗೂ ಬಟ್ಟೆ ಸುಟ್ಟು ಹೋಗಿವೆ. ಇದರಿಂದ ಸುಮಾರು 5 ಸಾವಿರ ರೂ. ನಷ್ಟ ಸಂಭವಿಸಿದೆ ಎಂದು ಸ್ಥಳೀಯ ನಿವಾಸಿ ಹಸನಬ್ಬ ಎಂಬುವರು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೇ ಮಸೀದಿಗೆ ಬೆಂಕಿ ಇಟ್ಟಿರುವ ದುಷ್ಕರ್ಮಿಗಳ ಕೃತ್ಯವನ್ನು ಪಿಎಫ್ಐ ಬಂಟ್ವಾಳ ಸಮಿತಿ ಖಂಡಿಸಿದೆ.












Click it and Unblock the Notifications