ಮಂಗಳೂರು : ತರಕಾರಿ ಬೆಲೆಗೆ ಬೇಸಿಗೆ, ಮದುವೆ ಬಿಸಿ
ಮಂಗಳೂರು, ಏ. 11 : ಮಂಗಳೂರು ಮಾರುಕಟ್ಟೆಗಳಲ್ಲಿ ತರಕಾರಿಗಳ ಬೆಲೆ ದುಬಾರಿಯಾಗಿದೆ. ಸೊಪ್ಪು, ತರಕಾರಿ ಗಿಡಗಳು ಬಿಸಿಲ ಬೇಗೆಗೆ ಬಸವಳಿದಿದ್ದು, ತರಕಾರಿ ಪೂರೈಕೆ ಕಡಿಮೆಯಾಗಿದೆ. ಆದ್ದರಿಂದ ದರ ಹೆಚ್ಚಳವಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.
ಕಡಿಮೆ ಬೆಲೆಗೆ ದೊರೆಯುತ್ತಿದ್ದ ಟೊಮೊಟೋ, ಸಾಂಬಾರ್ ಸೌತೆಕಾಯಿ ಬೆಲೆ ಏರಿಸಿಕೊಂಡು ಕುಳಿತಿವೆ. ಈರುಳ್ಳಿಗೆ 20 ರೂ. ದರವಿದ್ದರೆ. ಹಸಿಮೆಣಸು ಮತ್ತು ಕೊತ್ತಂಬರಿ ಸೊಪ್ಪು ರೇಟು ಕೂಡ ಬರೋಬ್ಬರಿ ಏರಿಕೆ ಕಂಡಿದೆ.

ಒಂದು ಕಡೆ ವಿಪರೀತ ಬಿಸಿಲು, ಇನ್ನೊಂದು ಕಡೆ ಮದುವೆ ಸೀಸನ್, ಮತ್ತೊಂದೆಡೆ ಬಿಸು ಹಬ್ಬದ ತರಾತುರಿ. ಆದ್ದರಿಂದ 20 ಬುಟ್ಟಿ ತರಕಾರಿಗಳಿಗೆ ಬೇಡಿಕೆ ಇದ್ದರೆ 10 ಬುಟ್ಟಿ ಮಾತ್ರ ಪೂರೈಕೆ ಯಾಗುತ್ತಿದೆ. ಹೀಗಾಗಿ ಬೆಲೆ ಹೆಚ್ಚಳವಾಗಿದೆ ಎನ್ನುತ್ತಾರೆ ಸೆಂಟ್ರಲ್ ಮಾರ್ಕೆಟ್ ವ್ಯಾಪಾರಿಗಳ ಸಂಘದ ಪ್ರತಿನಿಧಿ ಜನಾರ್ದನ ಸಾಲ್ಯಾನ್.

ಎಷ್ಟು ಏರಿಕೆಯಾಗಿದೆ : ಕಳೆದ ವಾರ ಕೆಜಿ ಬೀನ್ಸ್‌ಗೆ 34 ರೂ. ಇತ್ತು ಈ ವಾರ 10 ರೂ ಹೆಚ್ಚಳವಾಗಿದೆ. 50 ರೂ.ಗೆ ಸಿಗುತ್ತಿದ್ದ 1 ಕೆಜಿ ಕೊತ್ತಂಬರಿ ಸೊಪ್ಪು, ಇದೀಗ 65 ರೂ.ಗೆ ಏರಿಕೆ ಕಂಡಿದೆ. ಪಾಲಕ್‌ಗೆ 28 ರೂ., ಆಲೂಗೆಡ್ಡೆ 16, ಅಲಸಂಡೆ 36 ರೂ.ಗಳಿಗೆ ಮಾರಾಟವಾಗುತ್ತಿದೆ.












Click it and Unblock the Notifications