2ನೇ ಮಹಾಯುದ್ಧದಲ್ಲಿ ಹೋರಾಡಿದ್ದ ಸುಬೇದಾರ್ ರುಕ್ಮಯ್ಯ ಬಂಗೇರಾ ನಿಧನ

ಮಂಗಳೂರು, ಜನವರಿ 13: ಹಲವಾರು ಕರಾಳ ಘೋರ ದುರಂತಗಳಿಗೆ ಸಾಕ್ಷಿಯಾಗಿದ್ದ 2 ನೇ ಮಹಾಯುದ್ಧದಲ್ಲಿ ಭಾಗಿಯಾಗಿ ನಂತರ ನಿವೃತ್ತರಾಗಿದ್ದ ಸುಬೇದಾರ್ ಜಪ್ಪು ಬಪ್ಪಾಲ್ ನಿವಾಸಿ ರುಕ್ಮಯ್ಯ ಬಂಗೇರಾ ಅವರು ಎಡಪದವಿನ ಪುತ್ರನ ಮನೆಯಲ್ಲಿ ಶನಿವಾರ ನಿಧನರಾದರು. ಅವರಿಗೆ (98) ವರ್ಷ ವಯಸ್ಸಾಗಿತ್ತು.

ಸೇನೆಯಲ್ಲಿ ಮುಖ್ಯ ಸುಬೇದಾರ್ ದರ್ಜೆಯ ಅಧಿಕಾರಿಯಾಗಿದ್ದ ರುಕ್ಮಯ್ಯ ಬಂಗೇರಾ ಎರಡನೇ ಮಹಾಯುದ್ಧದಲ್ಲಿ ಭಾಗವಹಿಸಿದ್ದರು. ಸೇನೆಯಲ್ಲಿ 37ವರ್ಷ ಸೇವೆ ಸಲ್ಲಿಸಿದ ಇವರು, ದ್ವಿತೀಯ ಮಹಾಯುದ್ಧ ಮಾತ್ರವಲ್ಲದೆ, ಹೈದ್ರಾಬಾದ್ ಮತ್ತು ಗೋವಾ ವಿಮೋಚನೆಯಲ್ಲಿ ಭಾಗವಹಿಸಿದ್ದರು.

ರುಕ್ಮಯ್ಯ ಬಂಗೇರಾ ಅವರ ಸೇವೆಯನ್ನು ಗುರುತಿಸಿದ್ದ ಮಾಜಿ ರಾಷ್ಟ್ರಪತಿ ಗ್ಯಾನಿ ಜೈಲ್ ಸಿಂಗ್‌ ಚಹಾಕೂಟಕ್ಕೆ ತಮ್ಮ ರಾಷ್ಟ್ರಪತಿ ಭವನಕ್ಕೆ ಆಹ್ವಾನಿಸಿ, ಗೌರವಿಸಿದ್ದರು.

Subedar Rukmaya Bangera (98) no more

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಮಾಜಿ ಸಚಿವರಾದ ಬಿ. ರಮಾನಾಥ ರೈ, ಅಭಯಚಂದ್ರ ಜೈನ್, ಮಾಜಿ ಶಾಸಕ ಮೊಯ್ದಿನ್ ಬಾವ, ಜಿಪಂ ಸದಸ್ಯರಾದ ಜನಾರ್ದನ ಗೌಡ, ಯು.ಪಿ. ಇಬ್ರಾಹೀಂ, ತಾ ಪಂ ಸದಸ್ಯರಾದ ಸಚಿನ್ ಅಡಪ, ನಾಗೇಶ್ ಶೆಟ್ಟಿ, ಅಪ್ಸತ್, ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಾಂಬ್ಳಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್ ಮೃತರ ಮನೆಗೆ ತೆರಳಿ ರುಕ್ಮಯ್ಯ ಬಂಗೇರಾ ಅವರ ಅಂತಿಮ ದರ್ಶನ ಪಡೆದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+