ಧರ್ಮಸ್ಥಳದ ಜೊತೆ ಅವಿನಾಭಾವ ನಂಟು ಹೊಂದಿದ್ದ ಶಿವಕುಮಾರ ಸ್ವಾಮೀಜಿ
ಮಂಗಳೂರು, ಜನವರಿ 21: ನಡೆದಾಡುವ ದೇವರು ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಇಂದು ಲಿಂಗೈಕ್ಯರಾಗಿದ್ದಾರೆ. ಶ್ರೀಗಳ ಅಗಲಿಕೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಸಂತಾಪ ಸೂಚಿಸಿದ್ದಾರೆ.
ಶ್ರೀಕ್ಷೇತ್ರದ ಜೊತೆ ಶ್ರೀಗಳಿಗೆ ಅವಿನಾಭಾವ ನಂಟಿತ್ತು.ಧರ್ಮಸ್ಥಳದ ಜೊತೆ 75ವರ್ಷಕ್ಕೂ ಹಿಂದಿನ ನಂಟು ಹೊಂದಿದ್ದ ಶ್ರೀಗಳು, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ತಂದೆ ಮತ್ತು ಅಜ್ಜನ ಕಾಲದಲ್ಲಿ ಶ್ರೀಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ.

ದಿ.ರತ್ನವರ್ಮ ಹೆಗ್ಗಡೆ ಹಾಗೂ ಅವರ ತಂದೆ ದಿ.ಮಂಜಯ್ಯ ಹೆಗ್ಗಡೆ ಕಾಲದಲ್ಲಿ ಸಿದ್ಧಗಂಗಾಶ್ರೀಗಳಿಗೆ ಧರ್ಮಸ್ಥಳದ ಜೊತೆ ಅವಿನಾಭಾವ ನಂಟಿತ್ತು.50 ವರ್ಷಗಳ ಹಿಂದೆ ಸಿದ್ದಗಂಗಾ ಶ್ರೀಗಳು ಉಜಿರೆಗೂ ಆಗಮಿಸಿದ್ದರಂತೆ. 1969 ಮತ್ತು 1970ರಲ್ಲಿ ಶ್ರೀಕ್ಷೇತ್ರಕ್ಕೆ ಭೇಟಿ ನೀಡಿದ್ದ ಶ್ರೀಗಳು, ಉಜಿರೆಯಲ್ಲಿ ಎಸ್ ಡಿಎಂ ಕಾಲೇಜು ಕಟ್ಟಡ ಶಂಕುಸ್ಥಾಪನೆ ಮತ್ತು ವರ್ಷದ ಬಳಿಕ ಉದ್ಘಾಟನೆಗೂ ಆಗಮಿಸಿದ್ದು ವಿಶೇಷ.

ಆ ಬಳಿಕ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರೇ ತುಮಕೂರಿಗೆ ತೆರಳಿ ಶ್ರೀಗಳ ದರ್ಶನ ಪಡೆಯುತ್ತಿದ್ದರು.











Click it and Unblock the Notifications