ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರಣಿಕ ಕ್ಷೇತ್ರ ಶಿಬರೂರು ಕೊಡಮಣಿತ್ತಾಯ ದೈವಸ್ಥಾನದ ಬಗ್ಗೆ ನಿಮಗೆಷ್ಟುಗೊತ್ತು?

|
Google Oneindia Kannada News

ಮಂಗಳೂರು, ಡಿಸೆಂಬರ್ 17: ತುಳು ನಾಡು ದೈವ ದೇವರುಗಳ ನೆಲೆಬೀಡು. ತುಳು ನಾಡಿನಲ್ಲಿ ಹೆಜ್ಜೆಗೊಂದರಂತೆ ದೈವಸ್ಥಾನ, ದೇವಸ್ಥಾನಗಳು ಕಾಣಸಿಗುತ್ತವೆ. ಅದರಂತೆ ಸುರತ್ಕಲ್ ಸಮೀಪದ ಅತ್ಯಂತ ಪ್ರಸಿದ್ಧ ಶಿಬರೂರು ಕೊಡಮಣಿತ್ತಾಯ ದೈವಸ್ಥಾನದ ವರ್ಷಾವಧಿ ಉತ್ಸವವು ಸೋಮವಾರ ಡಿಸೆಂಬರ್ 16 ರಂದು ನಡೆಯಿತು. ಅತ್ಯಂತ ಕಾರಣಿಕ ಕ್ಷೇತ್ರ ಎಂದು ಪ್ರಸಿದ್ಧಿಯನ್ನು ಪಡೆದ ಈ ಕ್ಷೇತ್ರಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡುವುದು ವಿಶೇಷ.

ಮಂಗಳೂರಿನ ಸುರತ್ಕಲ್ ಸಮೀಪದ ಶಿಬರೂರು ಕೊಡಮಣಿತ್ತಾಯ ದೈವಸ್ಥಾನ ಕಾರ್ಣಿಕ ಕ್ಷೇತ್ರ ಎಂದೇ ಪರಿಗಣಿಸಲಾಗುತ್ತದೆ. ತುಳುವಿನಲ್ಲಿ ಒಂದು ಮಾತಿದೆ 'ಅದು ತಿಗಲೆ ಇತ್ತಿನಾಯಗ್ ತಿಬಾರ್' ಎಂಬುದು ಶಿಬರೂರು ಅಂದರೆ ತಿಬಾರ್ ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಮಂದಿ ಪಾಲ್ಗೊಳ್ಳುತ್ತಿದ್ದಾರೆ.

ವೈಕುಂಠ ಏಕಾದಶಿ, ಮೋಕ್ಷಕ್ಕಾಗಿ ಪ್ರಾರ್ಥಿಸುವ ದಿನ: ದೇಗುಲಗಳ ವಿಶೇಷವೈಕುಂಠ ಏಕಾದಶಿ, ಮೋಕ್ಷಕ್ಕಾಗಿ ಪ್ರಾರ್ಥಿಸುವ ದಿನ: ದೇಗುಲಗಳ ವಿಶೇಷ

ಇಂತಹ ಜನ ಸಂದಣಿಯಲ್ಲಿ ಕ್ಷೇತ್ರಕ್ಕೆ ಭೇಟಿ ಕೊಡುವುದೆಂದರೆ ಅದೊಂದು ಸಾಹಸ ಎಂಬುದು ಹಿರಿಯರ ಮಾತು. ಶಿಬರೂರುಗುತ್ತು ತಿಮತ್ತಿಕರಿಯಾಲ್ ರವರ ಭಕ್ತಿಗೆ ಒಲಿದ ಉಳ್ಳಾಯ ಮತ್ತು ಕೊಡಮಣಿತ್ತಾಯ ದೈವಗಳು ಕೋಳಿ ಮತ್ತು ಹೋರಿ ಮೂಲಕ ಶಿಬರೂರಿಗೆ ಬಂದು ನೆಲೆ ನಿಂತಿದೆ ಎಂಬ ಪ್ರತೀತಿ ಇದೆ.

ಊಳ್ಳಾಯ ಮತ್ತು ಕೊಡ ಮಣಿತ್ತಾಯ ದೈವಗಳು, ಭಕ್ತರಿಂದ ಕಾಲ ಕಾಲಕ್ಕೆ ಸೇವೆಗಳನ್ನು ಪಡೆದು ತಮ್ಮ ಕಾರಣಿಕವನ್ನು ತೋರಿಸುತ್ತಿದೆ.

ಬೆಳ್ಳಿಯ ಹರಕೆ ಅರ್ಪಣೆ

ಬೆಳ್ಳಿಯ ಹರಕೆ ಅರ್ಪಣೆ

ನಂದಿನಿ ನದಿಯ ತಟದಲ್ಲಿ ನೆಲೆ ನಿಂತಿರುವ ಉಳ್ಳಾಯ ಮತ್ತು ಕೊಡಮಣಿತ್ತಾಯ ದೈವ ತುಳುನಾಡಿನಲ್ಲಿ ಕಾರಣಿಕದ ದೈವ ಎಂಬ ಪ್ರಸಿದ್ದಿಯನ್ನು ಪಡೆದಿದೆ. ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಯಾಗಿ ಉಳ್ಲಾಯ ಮತ್ತು ಕೊಡಮಣಿತ್ತಾಯ ದೈವಕ್ಕೆ ಬೆಳ್ಳಿಯ ಹರಕೆಯನ್ನು ಅರ್ಪಿಸುತ್ತಾರೆ. ದೈವಸ್ಥಾನದಲ್ಲಿ ಪ್ರತಿವರ್ಷ ಧನು ಸಂಕ್ರಮಣಕ್ಕೆ ಧ್ವಜಾರೋಹಣವಾಗಿ ಮಹೋತ್ಸವವು ಜರಗುತ್ತದೆ. ಮರುದಿನ ಮುಂಜಾನೆ ಶ್ರೀ ಉಳ್ಳಾಯ ದೈವದ ನೇಮದಲ್ಲಿ ತುಲಾಭಾರ ಸೇವೆ, ಕಂಚೀಲು ಸೇವೆ, ಉರುಳು ಸೇವೆಗಳು ನಡೆಯುವುದಲ್ಲದೇ ಮಹಾ ಅನ್ನಸಂತರ್ಪಣೆಯು ನಡೆಯುತ್ತದೆ.

ಸಾವಿರಾರು ಭಕ್ತರ ಆಗಮನ

ಸಾವಿರಾರು ಭಕ್ತರ ಆಗಮನ

ಅದೇ ರಾತ್ರಿ ಕೊಡಮಣಿತ್ತಾಯ ದೈವದ ನೇಮ, ಬಂಡಿ ಉತ್ಸವ, ಮರುದಿನದಿಂದ ಕ್ರಮವಾಗಿ ಕಾಂತೇರಿ ಧೂಮಾವತಿ, ಸರಳ ಧೂಮಾವತಿ, ಜಾರಂದಾಯ ದೈವ, ಕೈಯೂರು ಧೂಮಾವತಿ ಮತ್ತು ಪಿಲಿಚಾಮುಂಡಿ ದೈವದ ನೇಮೋತ್ಸವಗಳು ನಡೆದು ಧ್ವಜಾರೋಹಣ ನಡೆಯುತ್ತದೆ. ಧ್ವಜಾರೋಹಣದಿಂದ ಧ್ವಜಾವರೋಹರಣದವರೆಗೆ ಪ್ರತಿನಿತ್ಯ ಅನ್ನಸಂತರ್ಪಣೆ ನಡೆಯುತ್ತದೆ. ಈ ದಿನಗಳಲ್ಲಿ ಮಾತ್ರವಲ್ಲದೆ ಪ್ರತೀ ಸಂಕ್ರಮಣಕ್ಕೂ ಸಾವಿರಾರು ಭಕ್ತರು ಇಲ್ಲಿಗೆ ಭೇಟಿ ನೀಡಿ ಶ್ರೀ ದೈವದ ಕೃಪೆಗೆ ಪಾತ್ರರಾಗುತ್ತಾರೆ.

ದತ್ತ ಜಯಂತಿ: ಸದ್ಗುರುಗಳ ಪಾದುಕೆಗಳ ಪೂಜೆಗಾಗಿ ವಿಶಿಷ್ಟ ಮಂದಿರದತ್ತ ಜಯಂತಿ: ಸದ್ಗುರುಗಳ ಪಾದುಕೆಗಳ ಪೂಜೆಗಾಗಿ ವಿಶಿಷ್ಟ ಮಂದಿರ

ಶ್ರೀ ಕಟೀಲಿಗೆ ಭೇಟಿ

ಶ್ರೀ ಕಟೀಲಿಗೆ ಭೇಟಿ

ಶ್ರೀಕ್ಷೇತ್ರ ಕಟೀಲಿಗೂ ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರಕ್ಕೂ ಅಭೇದ್ಯ ಸಂಬಂಧವಿದೆ. ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರೆಯ ಸಂದರ್ಭ ಶ್ರೀ ಕೊಡಮಣಿತ್ತಾಯ ದೈವವು ಶ್ರೀ ಕಟೀಲಿಗೆ ಭೇಟಿ ನೀಡುವ ಕ್ರಮ ಈಗಲೂ ಮುಂದುವರಿದಿದೆ, ಮಾಡುವಂತಹ ಒಂದು ಸಂಪ್ರದಾಯವಿದೆ ಇಂದಿಗೂ ಮುಂದುವರಿದಿದೆ. ತುಳುನಾಡಿನ ಅತ್ಯಂತ ಕಾರಣಿಕದ ಕ್ಷೇತ್ರಗಳಲ್ಲಿ ಶಿಬರೂರು ಕೂಡ ಒಂದಾಗಿದೆ.

ಏತದ ಮೂಲಕ ನೀರು ಎತ್ತುವಿಕೆ

ಏತದ ಮೂಲಕ ನೀರು ಎತ್ತುವಿಕೆ

ಶಿಬರೂರು ಕ್ಷೇತ್ರದ ತೀರ್ಥ ಬಹಳ ಪ್ರಸಿದ್ಧಿ ಪಡೆದಿದೆ. ಹಿಂದಿನ ಕಾಲದಲ್ಲಿ ಸೂರಿಂಜೆ ಗುತ್ತು ತ್ಯಾಂಪ ಶೆಟ್ಟಿ ಎಂಬುವವರ ಬಳಿ ವಿಷವನ್ನು ಹೀರುವ ಕಲ್ಲು ಇದ್ದು ಅವರು ಎಲ್ಲರಿಗೂ ಉಪಯೋಗವಾಗಲಿ ಎಂಬ ಕಾರಣಕ್ಕೆ ಆ ಕಲ್ಲನ್ನು ಶಿಬರೂರು ದೈವಸ್ಥಾನದ ಎದುರಿನ ಬಾವಿಗೆ ಹಾಕಿದ್ದು, ಮುಂದಕ್ಕೆ ಆ ಬಾವಿಯ ನೀರು ವಿಷವನ್ನು ಹೀರುವ ಗುಣವನ್ನು ಪಡೆದಿದೆ ಎಂಬ ನಂಬಿಗೆ ಇಂದಿಗೂ ಮುಂದುವರಿದಿದೆ.

ಹಿಂದಿನ ಕಾಲದಲ್ಲಿ ವಿಷ ಜಂತುಗಳು ಕಚ್ಚಿದಲ್ಲಿ ಕ್ಷೇತ್ರದ ಮಣ್ಣು ಮತ್ತು ಇಲ್ಲಿನ ತೀರ್ಥ ಕುಡಿದರೆ, ವಿಷ ಕಡಿಮೆ ಆಗಿ ಸಮಸ್ಯೆ ಪರಿಹಾರವಾಗುತ್ತಿದ್ದ ಕ್ಷಣವನ್ನು ಕಣ್ಣಾರೆ ಕಂಡ ಹಿರಿಯರು ಈಗಲೂ ನೆನಪಿಸುತ್ತಾರೆ. ಅದಕ್ಕಾಗಿ ಇಂದಿಗೂ ಇಲ್ಲಿನ ತೀರ್ಥ ಮತ್ತು ಮಣ್ಣು ಭಕ್ತರು ತಮ್ಮ ಮನೆಯಲ್ಲಿ ಇಟ್ಟುಕೊಳ್ಳುತ್ತಾರೆ. ಇಲ್ಲಿನ ಈ ತೀರ್ಥ ಬಾವಿಗೆ ಕೊಡಪಾನ ಅಥವಾ ಪಂಪು ಮೂಲಕ ನೀರನ್ನು ಎತ್ತುವಂತಿಲ್ಲ. ಅದರ ಬದಲು ಏತದ ಮೂಲಕವೇ ನೀರನ್ನು ಎತ್ತುದು ಇಲ್ಲಿನ ವಿಶೇಷ.

ಬಸವನಗುಡಿಯಲ್ಲೊಂದು ಭೂವೈಕುಂಠ, ಸೋಸಲೆ ಮಠದ ಶ್ರೀನಿವಾಸನ ಕಾಣಿರಿಬಸವನಗುಡಿಯಲ್ಲೊಂದು ಭೂವೈಕುಂಠ, ಸೋಸಲೆ ಮಠದ ಶ್ರೀನಿವಾಸನ ಕಾಣಿರಿ

English summary
The annual festival of Shree Kodamanithaya Kshetra Shibaroor started on December 17.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X