• search
 • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಂಬರೀಶ್ ಸತ್ತಾಗ ರೇವಣ್ಣ ಹಾಕಿದ್ದು ಮೊಸಳೆ ಕಣ್ಣೀರಾ:ಶೋಭಾ ಕರಂದ್ಲಾಜೆ ಪ್ರಶ್ನೆ

|
   ಎಚ್ ಡಿ ರೇವಣ್ಣರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ ಶೋಭಾ ಕರಂದ್ಲಾಜೆ | Oneindia Kannada

   ಮಂಗಳೂರು, ಮಾರ್ಚ್ 09:ಸುಮಲತಾ ಅಂಬರೀಶ್ ಕುರಿತು ಸಚಿವ ರೇವಣ್ಣ ಹೇಳಿಕೆ ವಿರುದ್ಧ ಸಂಸದೆ ಶೋಭಾ ಕರಂದ್ಲಾಜೆ ಮತ್ತೆ ಕಿಡಿಕಾರಿದ್ದಾರೆ.

   ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ರೇವಣ್ಣ ವಿರುದ್ಧ ವಾಗ್ದಾಳಿ ನಡೆಸಿ, ಸುಮಲತಾ ಅಂಬರೀಶ್ ಕನ್ನಡದ ಸೊಸೆ. ಅಂಬರೀಶ್ ಸತ್ತಾಗ ನೀವು ಹಾಕಿದ್ದು ಮೊಸಳೆ ಕಣ್ಣೀರಾ? ಎಂದು ಅವರು ರೇವಣ್ಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

   ರೇವಣ್ಣ ಸುಮಲತಾ ಅವರ ಕ್ಷಮೆಯಾಚಿಸಲಿ: ಶೋಭಾ ಕರಂದ್ಲಾಜೆ

   ಹೆಣ್ಮಕ್ಕಳಿಗೆ ನೀವು ಕೊಡುವ ಗೌರವ ಇದೇನಾ? ಎಂದು ಪ್ರಶ್ನಿಸಿದ ಅವರು ಗಂಡ ಸತ್ತವರು ತಲೆ ಬೋಳಿಸಿ ಮನೆಯಲ್ಲಿರಬೇಕಾ.ನೀವು ಯಾವ ಶತಮಾನದಲ್ಲಿ ಇದ್ದೀರಾ?ಎಂದು ಶೋಭಾ ಕಿಡಿಕಾರಿದರು.

   ವಿಧವೆ ಬಗ್ಗೆ ಮಾತನಾಡಿರೋದು ದುಃಖ ತಂದಿದೆ.ಸುಮಲತಾ ಅವರಿಗೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಹಕ್ಕಿದೆ.ನೀವು ರಾಜ್ಯದ ಮುಂದೆ ಕ್ಷಮೆಯಾಚಿಸಬೇಕು ಎಂದು ಅವರು ರೇವಣ್ಣ ಅವರನ್ನು ಒತ್ತಾಯಿಸಿದರು.

   ಸುಮಲತಾ ಅಂಬರೀಶ್ ಚಾಲೆಂಜ್ ಸ್ವೀಕರಿಸಲು ಸಿದ್ಧ : ರೇವಣ್ಣ

   ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ರಾಜ್ಯದಲ್ಲಿ 22 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ಅದಕ್ಕಿಂತಲೂ ಹೆಚ್ಚು ಸ್ಥಾನಗಳು ಬರುವ ನಿರೀಕ್ಷೆ ಇದೆ. ಕಳೆದ ಬಾರಿ ನಾವು ಸೋತಿರುವ ಕ್ಷೇತ್ರಗಳಾದ ಚಿಕ್ಕೋಡಿ, ಚಿತ್ರದುರ್ಗ ,ರಾಯಚೂರು , ಚಾಮರಾಜ ನಗರ , ಕೋಲಾರದಲ್ಲಿ ಒಳ್ಳೆಯ ವಾತಾವರಣವಿದೆ. ರಾಜ್ಯದ ಜನ ಮೋದಿ ಅವರೊಂದಿಗೆ ಇದ್ದಾರೆ. ಮತ್ತೊಮ್ಮೆ ಮೋದಿ ಪ್ರಧಾನಿ ಆಗಬೇಕು ಎನ್ನುವ ಚಿಂತನೆಯಲ್ಲಿ ಇದ್ದಾರೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.

   English summary
   MP Shobha Karandlaje again spoke against Minister Revanna In Mangaluru. She asked What century are you in?. Respect women first.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X