Get Updates
Get notified of breaking news, exclusive insights, and must-see stories!

ಶೀಘ್ರದಲ್ಲೇ ಶಿರಾಡಿಘಾಟ್‌ನಲ್ಲಿ ಸುರಂಗ ಮಾರ್ಗ; ನಿತಿನ್ ಗಡ್ಕರಿ

ಮಂಗಳೂರು, ಮಾರ್ಚ್ 01; ಕಡಲನಗರಿ ಮಂಗಳೂರು ಭೂ, ಜಲ, ವಾಯು ಸಾರಿಗೆ ಸಂಪರ್ಕ ಹೊಂದಿರುವ ನಗರ. ಇದೀಗ ಇಲ್ಲಿ ಭೂ ಸಾರಿಗೆಯನ್ನು ಇನ್ನಷ್ಟು ಬಲಗೊಳಿಸುವ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿಯವರೇ ಕಾಮಗಾರಿ ಪೂರ್ತಿಯಾದ ಯೋಜನೆ ಲೋಕಾರ್ಪಣೆಗೊಳಿಸಿ ನೂತನ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.

ಕಡಲ ನಗರಿ ಮಂಗಳೂರಿನಲ್ಲಿ ರಾಷ್ಟ್ರೀಯ ಹೆದ್ದಾರಿಯ ವಿವಿಧ ಕಾಮಗಾರಿಗಳ ಶಂಕು ಸ್ಥಾಪನೆ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಏಕಕಾಲದಲ್ಲಿ 7 ಜಿಲ್ಲೆಗಳಿಗೆ ಸೇರಿದ 15 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಚಾಲನೆ ನೀಡಿದರು.

ಒಟ್ಟು 3,163 ಕೋಟಿ ರೂ. ವೆಚ್ಚದ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಇದಾಗಿದ್ದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯ ಸಚಿವರುಗಳು ಗಡ್ಕರಿಯವರ ಜೊತೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಅಧಿಕೃತ ಚಾಲನೆ ನೀಡಿದ ಯೋಜನೆಗಳಲ್ಲಿ ರಾಜ್ಯ ರಾಜಧಾನಿ ಬೆಂಗಳೂರು ಹಾಗೂ ಬಂದರು ನಗರಿ ಮಂಗಳೂರನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75 ರ ಬಿ. ಸಿ. ರೋಡ್- ಅಡ್ಡಹೊಳೆ ಚತುಷ್ಪಥ ಕಾಮಗಾರಿ ಯೋಜನೆ ಪ್ರಮುಖವಾಗಿದೆ. ಇದರ ವೆಚ್ಚ ಒಟ್ಟು 1, 500 ಕೋಟಿ ರೂ. ಆಗಿದೆ.

ಕಾಮಗಾರಿ ಅರ್ಧಕ್ಕೆ ನಿಂತಿತ್ತು

ಕಾಮಗಾರಿ ಅರ್ಧಕ್ಕೆ ನಿಂತಿತ್ತು

ಮೂರು ವರ್ಷದ ಹಿಂದೆ ಬಿ. ಸಿ. ರೋಡ್ ನಿಂದ ಶಿರಾಡಿಯ ಅಡ್ಡಹೊಳೆ ವರೆಗಿನ 65 ಕಿಲೋಮೀಟರ್ ದೂರದ ಚತುಷ್ಪಥ ಕಾಮಗಾರಿ ನಡೆಸುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸುಮಾರು 821ಕೋಟಿ ರೂಪಾಯಿಗಳ ಕಾಮಗಾರಿಯನ್ನು ಎಲ್ & ಟಿ ಕಂಪನಿಗೆ ವಹಿಸಿತ್ತು. ಆದರೆ ಕಂಪನಿಯು ಕಾಮಗಾರಿಯನ್ನು ಆರಂಭಿಸಿದ ಬಳಿಕ ಪ್ರಾಕೃತಿಕ ವಿಕೋಪದಿಂದಾಗಿ ಕಂಪನಿಗೆ ಭಾರೀ ನಷ್ಟವಾದ ಹಿನ್ನಲೆಯಲ್ಲಿ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿ ಹಿಂದೆ ಸರಿದಿತ್ತು.

ಆ ಬಳಿಕ ಇದೇ ರಸ್ತೆಗೆ ಮತ್ತೆ ಟೆಂಡರ್ ಕರೆಯಲಾಗಿದ್ದು, ಈ ಬಾರಿ ಸುಮಾರು 1500 ಕೋಟಿ ಅಂದಾಜಿನ ಎರಡು ಹಂತದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಕಾಮಗಾರಿಯು ಇದೀಗ ಭರದಿಂದ ಸಾಗುತ್ತಿದ್ದು, 2023 ರಲ್ಲಿ ಕಾಮಗಾರಿ ಮುಗಿಸಲು ಗಡುವನ್ನೂ ನೀಡಲಾಗಿದೆ. ಈ ನಡುವೆ ಶಿರಾಡಿ ಘಾಟ್ ನ 24 ಕಿ. ಮೀ. ಘಾಟ್ ರಸ್ತೆಯನ್ನು ಚತುಷ್ಪದ ಮಾಡುವುದಾಗಿಯೂ ಗಡ್ಕರಿ ಘೋಷಿಸಿದ್ದಾರೆ.

ರಸ್ತೆ ಅಭಿವೃದ್ಧಿಪಡಿಸಲಾಗುತ್ತದೆ

ರಸ್ತೆ ಅಭಿವೃದ್ಧಿಪಡಿಸಲಾಗುತ್ತದೆ

ಕೇಂದ್ರ ಭೂಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರಿಂದ 3,163 ಕೋಟಿ ರೂ. ಮೊತ್ತದ 164 ಕಿ.ಮೀ. ಉದ್ದದ 15 ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಚಾಲನೆ ದೊರಕಿದೆ. ಮುಂದಿನ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಅತ್ಯುತ್ತಮ ಮೂಲ ಸೌಕರ್ಯಗಳ ಅಭಿವೃದ್ಧಿ ಒತ್ತು ನೀಡುವುದಾಗಿ ಅವರು ಹೇಳಿದ್ದಾರೆ. 2024ರ ವೇಳೆಗೆ ರಾಜ್ಯದ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳನ್ನು ಅಮೆರಿಕಾದ ರಸ್ತೆಗಳಿಗೆ ಸಮಾನವಾಗಿ ಅಭಿವೃದ್ಧಿ ಪಡಿಸಲಾಗುತ್ತದೆ.‌ ಭಾರತ್ ಮಾಲಾ 2ನೇ ಹಂತದ ಬಳಿಕ ಪರ್ವತ್ ಮಾಲಾ ಮೂಲಕ ರೋಪ್ ವೇಯಂತಹ ಯೋಜನೆ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಹೇಳಿದರು.

ಕೇಂದ್ರ ಅರಣ್ಯ ಹಾಗೂ ಪರಿಸರ ಇಲಾಖೆಯ ಅನುಮೋದನೆ ದೊರಕಿದ ತಕ್ಷಣ ಶಿರಾಡಿ ಘಾಟ್ ರಸ್ತೆ ಮೇಲ್ದರ್ಜೆಗೆ ಏರಿಸಲಾಗುತ್ತದೆ‌.‌ 14 ಸಾವಿರ ಕೋಟಿ ರೂ. ವೆಚ್ಚದಲ್ಲಿ ಏಳು ಸುರಂಗ ಹಾಗೂ ಏಳು ಸೇತುವೆಗಳ ಮಾರ್ಗವನ್ನು ಒಳಗೊಂಡ ಶಿರಾಡಿ ಘಾಟ್ ಅಭಿವೃದ್ಧಿಗೆ ಡಿಪಿಆರ್ ಸಿದ್ಧತೆ ಮಾಡಲಾಗುತ್ತಿದೆ. ಸುರಂಗ ಮಾರ್ಗ ತಜ್ಞರಿಂದ ಅಧ್ಯಯನ ನಡೆಸಿ ಡಿಪಿಆರ್ ಸಿದ್ಧಪಡಿಸಲಾಗುತ್ತದೆ.‌ ಇದಕ್ಕೆ ಅರಣ್ಯ ಹಾಗೂ ಪರಿಸರ ಇಲಾಖೆಯಿಂದ ಅನುಮೋದನೆ ಸಿಕ್ಕ ತಕ್ಷಣ ಬಸವರಾಜ ಬೊಮ್ಮಾಯಿ ಸಹಕಾರದಿಂದ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

ವಿವಿಧ ರಸ್ತೆಗಳು 4 ಪಥವಾಗಲಿವೆ

ವಿವಿಧ ರಸ್ತೆಗಳು 4 ಪಥವಾಗಲಿವೆ

ಭಾರತ್ ಮಾಲಾ ಯೋಜನೆಯಡಿ 2 ಸಾವಿರ ಕೋಟಿ ರೂ. ವೆಚ್ಚದಲ್ಲಿ ಎನ್ಎಂಪಿಟಿ, ಕಾರವಾರ ಬಂದರುಗಳ ಅಭಿವೃದ್ಧಿಗೆ ಚಾಲನೆ ನೀಡಲಾಗುತ್ತದೆ. ಬೆಂಗಳೂರು-ಮಂಗಳೂರು ಸಂಪರ್ಕದ ಶಿರಾಡಿ ಘಾಟ್ ನ 26 ಕಿ. ಮೀ. ರಸ್ತೆ ಚತುಷ್ಪಥವಾಗಿ ಮೇಲ್ದರ್ಜೆಗೆ ಏರಿಸುವ ಜೊತೆಗೆ ದಕ್ಷಿಣ ಕನ್ನಡ ಜಿಲ್ಲೆಯ 14 ರೈಲ್ವೇ ಮೇಲ್ಸೇತುವೆಗಳಿಗೆ ಮಂಜೂರಾತಿ ನೀಡಲಾಗುತ್ತದೆ. ಮಂಗಳೂರಿಗೆ ಶೀಘ್ರ ರಿಂಗ್ ರೋಡ್ ನೀಡಲಾಗುತ್ತದೆ. ನಗರದ ನಂತೂರು ಬಳಿ ಫ್ಲೈಓವರ್ ನಿರ್ಮಾಣಕ್ಕೂ ಅನುಮತಿ ನೀಡಲಾಗುತ್ತದೆ. ನಗರದ ಎನ್ಐಟಿಕೆ ಬಳಿಯ ಟೋಲ್ ಪ್ಲಾಝಾ ರದ್ದುಗೊಳಿಸಲು ಕಾನೂನು ತೊಡಕು ಎದುರಾಗುತ್ತಿದೆ. ಈ ಸಮಸ್ಯೆ ಬಗೆಹರಿಸಲು ಶೀಘ್ರವೇ ದೆಹಲಿಯಲ್ಲಿ ಸಭೆ ಕರೆಯಲಾಗುತ್ತದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

ಜಲಶಕ್ತಿ ಯೋಜನೆ ಜಾರಿ

ಜಲಶಕ್ತಿ ಯೋಜನೆ ಜಾರಿ

ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ರಾಷ್ಟ್ರೀಯ ಹೆದ್ದಾರಿಗಳ ಅಂಚಿನಲ್ಲಿರುವ ಜಲಮೂಲಗಳನ್ನು ಅಭಿವೃದ್ಧಿ ಪಡಿಸಲು ಮಹಾರಾಷ್ಟ್ರ ಮಾದರಿಯಲ್ಲಿ ಜಲಶಕ್ತಿ ಯೋಜನೆ ರಾಜ್ಯದಲ್ಲೂ ಅನುಷ್ಠಾನ ಮಾಡಲು ಸರಕಾರಿ ಆದೇಶ ನೀಡಲಾಗುತ್ತದೆ. ನಿತಿನ್ ಗಡ್ಕರಿಯವರು ರಾಷ್ಟ್ರೀಯ ಹೆದ್ದಾರಿ ಸಚಿವರಾದ ಬಳಿಕ 5ಸಾವಿರಕ್ಕಿತಲೂ ಅಧಿಕ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯಾಗಿದೆ. ರಾಜ್ಯದಲ್ಲಿ 42 ಸಾವಿರ ಕಿ. ಮೀ. ಗಿಂತಲೂ ರಾಷ್ಟ್ರೀಯ ಹೆದ್ದಾರಿಗಳು ಅಧಿಕವಾಗಿವೆ. ಭಾರತ್ ಮಾಲಾ -1 ಸಂಪೂರ್ಣ ರಾಜ್ಯಕ್ಕೆ ಸಹಕಾರಿಯಾಗಿದೆ. 20-30 ವರ್ಷಗಳಿಂದ ನೆನೆಗುದಿಗೆ ಬಿದ್ದ ರಸ್ತೆ ಕಾಮಗಾರಿಗಳು ಸಂಪೂರ್ಣವಾಗುತ್ತಿದೆ" ಎಂದರು.

ಕಾರ್ಯಕ್ರಮದಲ್ಲಿ ನೂತನ ಕಾಮಗಾರಿಗೆ ಅಧಿಕೃತ ಚಾಲನೆ ಜೊತೆಗೆ ಸುಮಾರು 186ಕೋಟಿ ರೂ ವೆಚ್ಚದ ಕಾಮಗಾರಿಯನ್ನು ಲೋಕಾರ್ಪಣೆಗೊಳಿಸಲಾಯಿತು. ಇದರ ಜೊತೆಗೆ ಮಂಗಳೂರಿಗೆ ಶೀಘ್ರದಲ್ಲಿ ರಿಂಗ್ ರೋಡ್ ಮಾಡುವುದಾಗಿಯೂ ಘೋಷಿಸಲಾಯಿತು. ಒಟ್ಟಿನಲ್ಲಿ ಕರಾವಳಿಯ ಭೂ ಸಾರಿಗೆ ಅಭಿವೃದ್ಧಿಗೊಂಡರೆ ಇಲ್ಲಿನ ಕೈಗಾರಿಕೆಗಳಿಗೆ ಸೇರಿದಂತೆ ಜನರಿಗೆ ಹೆಚ್ಚಿನ ಸದುಪಯೋಗ ಆಗಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+