ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿ.25ರ ನಂತರ ಶಿರಾಡಿ ಘಾಟ್‌ ಬಂದ್

|
Google Oneindia Kannada News

ಮಂಗಳೂರು, ಡಿ. 19 : ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಯುವ ಶಿರಾಡಿ ಘಾಟ್‌ನಲ್ಲಿ ವಾಹನ ಸಂಚಾರವನ್ನು ನಿಷೇಧಿಸಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಅಗತ್ಯ ಸಿದ್ಧತೆಗಳನ್ನು ಆರಂಭಿಸಿದೆ.ಡಿಸೆಂಬರ್ 25ರ ನಂತರ ಶಿರಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು, ಆಗುಂಬೆ ಘಾಟಿ ರಸ್ತೆ ಹಾಗೂ ಮಾಣಿ-ಮೈಸೂರು ರಸ್ತೆ ಕಾಮಗಾರಿ ಡಿಸೆಂಬರ್ 25ರೊಳಗೆ ಪೂರ್ಣಗೊಳ್ಳಲಿದ್ದು, ನಂತರ ಶಿರಾಡಿ ಘಾಟಿ ರಸ್ತೆ ಸಂಚಾರ ಸ್ಥಗಿತಗೊಳಿಸಲಾಗುವುದು ಎಂದರು. [ಕುಂಭಕರ್ಣನ ನಿದ್ದೆಗೆ ಜಾರಲಿರುವ ಶಿರಾಡಿಘಾಟ್]

Shiradi Ghat

ಮಾಣಿ-ಮೈಸೂರು ರಸ್ತೆಯ 1 ಕಿ.ಮೀ. ರಸ್ತೆ ಕಾಮಗಾರಿ ನಡೆಯಬೇಕಾಗಿದ್ದು, ಇದು ಡಿ.25ರೊಳಗೆ ಪೂರ್ಣಗೊಳ್ಳಲಿದೆ. ಶಿರಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಂದರ್ಭ ವಾಹನ ಸಾಗಾಟಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಆದ್ದರಿಂದ ಪರ್ಯಾಯ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ತಿಳಿಸಿದರು. [ಶಿರಾಡಿ ಘಾಟ್ ರಸ್ತೆಗೆ ಪರ್ಯಾಯ ಮಾರ್ಗಗಳು]

ಯಾವ ವಾಹನ ಎಲ್ಲಿ ಸಂಚಾರ : ಮಂಗಳೂರು-ಬೆಂಗಳೂರು ನಡುವೆ ಸಾಗುವ 'ಎ' ಕ್ಯಾಟಗರಿ ವಾಹನಗಳಾದ ಕೆಎಸ್‌ಆರ್‌ಟಿಸಿ ಕೆಂಪು ಬಸ್, ಲೈಟ್ ವಾಹನಗಳು ಚಾರ್ಮಾಡಿ ಘಾಟ್ ಮಾರ್ಗದಲ್ಲಿ ಸಾಗುತ್ತದೆ.

'ಬಿ' ಕ್ಯಾಟಗಾರಿ ವಾಹನಗಳು ಮಾಣಿ-ಮೈಸೂರು ಮೂಲಕ ಸಾಗಲಿದ್ದು, ಈ ರಸ್ತೆಗಳಲ್ಲಿ ಟ್ಯಾಂಕರ್ ಸಂಚಾರ ನಿಷೇಧಿಸಲಾಗುತ್ತದೆ, ಉಡುಪಿಗೆ ಬರುವ ವಾಹನಗಳು ಬೆಂಗಳೂರಿನಿಂದ ನೇರವಾಗಿ ಶಿವಮೊಗ್ಗ ಮಾರ್ಗವಾಗಿ ಬರಲಿದೆ ಎಂದು ಜಿಲ್ಲಾಧಿಕಾರಿಗಳು ವಿವರಣೆ ನೀಡಿದರು.

English summary
The Shiradi Ghat stretch of National Highway 75 is likely to be closed for six months from December 25 to facilitate strengthening and concreting work said Mangaluru Deputy commissioner AB Ibrahim.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X