ಮಂಗಳೂರಿನಲ್ಲಿ ಯುವತಿಗೆ ಲೈಂಗಿಕ ಕಿರುಕುಳ: ಯುವಕನ ಬಂಧನ
ಮಂಗಳೂರು, ಅಕ್ಟೋಬರ್. 09 : ಕಚೇರಿಯಲ್ಲಿ ಸಹದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಹೊರವಲಯದ ಕೋಟೆಕಾರ್ ಎಂಬಲ್ಲಿ ಈ ಘಟನೆ ನಡೆದಿದೆ.
ಇಲ್ಲಿಯ ಕಟ್ಟಡ ನಿರ್ಮಾಣ ಸಂಸ್ಥೆಯ ಕಚೇರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಗೆ ಅದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಲೈಂಗಿಕ ಕಿರುಕುಳ ನೀಡಿದ್ದ ಎಂದು ಆರೋಪಿಸಲಾಗಿದೆ.
ಬಂಧಿತನನ್ನು ಕಾಸರಗೋಡು ಜಿಲ್ಲೆಯ ಉಪ್ಪಳದ ಉಪ್ಪಳಗೇಟ್ ರೆಹಮತ್ ಮಂಜಿಲ್ ನಿವಾಸಿ ಅಬ್ದುಲ್ ಲತೀಫ್ ಖಾದರ್(37) ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿ ಅಬ್ದುಲ್ ಲತೀಫ್ ಖಾದರ್ ಕಟ್ಟಡ ನಿರ್ಮಾಣ ಸಂಸ್ಥೆಯ ಮ್ಯಾನೇಜರ್ ಆಗಿದ್ದು, ನಿನ್ನೆ ಸೋಮವಾರ (ಅ.09) ಮಧ್ಯಾಹ್ನ ಕೋಟೆಕಾರ್ ಬೀದಿಯಲ್ಲಿರುವ ಕಚೇರಿಯಲ್ಲಿ
ಯಾರು ಇಲ್ಲದ ಸಮಯದಲ್ಲಿ ಕಚೇರಿಯೊಳಗೆ ಬಂದು ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ.
ಈ ಬಗ್ಗೆ ಸಂತ್ರಸ್ಥೆ ಯುವತಿ ನೀಡಿದ ದೂರಿನಂತೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ನಂತರ ಆರೋಪಿಯನ್ನು ಬಂಧಿಸಲಾಗಿದೆ.











Click it and Unblock the Notifications