ಆಳ್ವಾಸ್ ವಿದ್ಯಾರ್ಥಿಸಿರಿ 2018: ಸಮ್ಮೇಳನಾಧ್ಯಕ್ಷೆಯಾಗಿ ಸನ್ನಿಧಿ ಟಿ.ರೈ ಪೆರ್ಲ ಆಯ್ಕೆ

ಮಂಗಳೂರು, ಅಕ್ಟೋಬರ್ 01:⁣ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುತ್ತಿರುವ 'ಆಳ್ವಾಸ್ ವಿದ್ಯಾರ್ಥಿಸಿರಿ 2018' ವಿದ್ಯಾರ್ಥಿ ಸಾಹಿತ್ಯ - ಸಂಸ್ಕೃತಿ ಸಮ್ಮೇಳನದ ಅಧ್ಯಕ್ಷರಾಗಿ ಕಾಸರಗೋಡಿನ ಚಿನ್ಮಯ ಪ್ರೌಢಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿನಿ ಸನ್ನಿಧಿ ಟಿ ರೈ ಪೆರ್ಲ ಆಯ್ಕೆಯಾಗಿದ್ದಾರೆ.

ಕವಿಗೋಷ್ಠಿಯ ಅಧ್ಯಕ್ಷರಾಗಿ ಉಜಿರೆ ಎಸ್‍ಡಿಎಂ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಭಾರ್ಗವಿ ಶಬರಾಯ ಆಯ್ಕೆಯಾಗಿದ್ದಾರೆ.

ಸಂವಾದ ಗೋಷ್ಠಿಯ ಅಧ್ಯಕ್ಷತೆಗೆ ಉಜಿರೆ ಎಸ್‍ಡಿಎಂ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಶಾಮ್ ಪ್ರಸಾದ್ ಹಾಗೂ ಸಮಾರೋಪ ಭಾಷಣಕ್ಕೆ ಆಳ್ವಾಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 9 ನೇ ತರಗತಿ ವಿದ್ಯಾರ್ಥಿ ದೀಕ್ಷಿತ್ ಅವರನ್ನು ಆಯ್ಕೆ ಮಾಡಲಾಗಿದೆ.

Sannidhi T Rai Perla selected as Sammelanadyakshe of Alvas Vidyasiri 2018

ವಿಶೇಷೋಪನ್ಯಾಸ ನೀಡಲು ಬೆಳ್ತಂಗಡಿ ವಾಣಿ ಪದವಿ ಪೂರ್ವಕಾಲೇಜಿನ ಪ್ರಜ್ಞಾ ಪ್ರಭು, ಒಳಕಾಡು ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿ ನಚಿಕೇತ ನಾಯಕ್, ಆಳ್ವಾಸ್ ಪ್ರೌಢಶಾಲೆಯ ಭಾರತೀ ಶಿವಾನಂದ ನಾಯಕ್ ಅವರನ್ನು ಆಯ್ಕೆ ಮಾಡಲಾಗಿದೆ.

ಸಂವಾದ ಗೋಷ್ಠಿಯಲ್ಲಿ ಮೂಡುಬಿದಿರೆ ರೋಟರಿ ಪ್ರೌಢಶಾಲೆಯ ಪ್ರದ್ಯುಮ್ನ ಮೂರ್ತಿ ಕಡಂದಲೆ, ಆಳ್ವಾಸ್ ಪ್ರೌಢಶಾಲೆಯ ಭಕ್ತಿಶ್ರೀ, ಉಜಿರೆಯ ಎಸ್‍ಡಿಎಂ ಪದವಿಪೂರ್ವಕಾಲೇಜಿನ ಪೂರ್ಣಿಮಾ ಹಾಗೂ ಆಳ್ವಾಸ್ ಪಿಯು ಕಾಲೇಜಿನ ಗುಣೇಶ್ ಭಾರತೀಯ ಅವರನ್ನು ಆಯ್ಕೆ ಮಾಡಲಾಗಿದೆ.

ವಿದ್ಯಾರ್ಥಿಸಿರಿ ಸಮ್ಮೆಳನಕ್ಕೆ ಮೂಡಬಿದಿರೆಯ ವಿದ್ಯಾಗಿರಿಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಲಿಖಿತ ಪರೀಕ್ಷೆ, ಆಶು ಭಾಷಣ ಹಾಗೂ ಸಂದರ್ಶನ ಹಾಗೂ ಪ್ರಮಾಣ ಪತ್ರ ಪರಿಶೀಲನೆಯ ಮೂಲಕ ಆಯ್ಕೆ ಪ್ರಕ್ರಿಯೆ ನಡೆದಿದೆ.

ನಿವೃತ್ತ ಶಿಕ್ಷಕ ಅಂಡಾರು ಗುಣಪಾಲ ಹೆಗ್ಡೆ, ಡಾ.ಧನಂಜಯ ಕುಂಬ್ಳೆ, ಜೀವನ್‍ರಾಂ ಸುಳ್ಯ, ಶ್ರೀಧರ ಜೈನ್ ಮತ್ತು ರಾಮಕೃಷ್ಣ ಶಿರೂರು ಮೌಲ್ಯ ಮಾಪಕರಾಗಿ ಭಾಗವಹಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+