ಮಂಗಳೂರು: 300 ಮನೆಗೆ ಕುಡಿಯುವ ನೀರು ನೀಡಿದ ಬಾವಿ

ಮಂಗಳೂರು, ಡಿಸೆಂಬರ್, 05: ಸಮಾಜ ಸೇವಾ ಘಟಕ, ಜಮಾಅತೆ ಇಸ್ಲಾಮೀ ಹಿಂದ್ ಉಳ್ಳಾಲ ಘಟಕವು ದಾನಿಗಳ ನೆರವಿನಿಂದ ಕುಡಿಯುವ ನೀರಿಗಾಗಿ ನಿರ್ಮಾಣ ಮಾಡಿದ ಸಾರ್ವಜನಿಕ ಬಾವಿ ಉದ್ಘಾಟನೆ ಕಿನ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಿಂಪಿರಿಯಲ್ಲಿ ಡಿಸೆಂಬರ್ 04ರ ಶುಕ್ರವಾರ ನಡೆಯಿತು.

ಬೋಳಂಗಡಿ ಹವ್ವಾ ಜುಮಾ ಮಸೀದಿಯ ಖತೀಬರಾದ ಮೌಲಾನಾ ಯಹ್ಯಾ ತಂಯಾಳ್ ಮತ್ತು ನಿವೃತ್ತ ಪ್ರಾಂಶುಪಾಲರಾದ ಸಾದು ಕುಂಞ ಮಾಸ್ಟರ್ ಅವರು ಮದನಿ ಎಂಬ ಹೆಸರಿನ ಬಾವಿಗೆ ಚಾಲನೆ ನೀಡಿದರು. ಈ ಬಾವಿ ನಿರ್ಮಾಣಕ್ಕೆ ಎರಡು ಲಕ್ಷ ರೂಪಾಯಿ ವೆಚ್ಚವಾಗಿದ್ದು, ಸುಮಾರು 250 ರಿಂದ 300 ಮನೆಗಳು ಬಾವಿಯ ಲಾಭ ಪಡೆಯಲಿದ್ದಾರೆ.[ನೀರಿಗಾಗಿ ಮೂರು ಹೆಂಡಿರ ಗಂಡನಾದ ಮಾರ್ತಾಂಡ!]

Samaja seva Ghataka and Jamaate Islam hindu Ullal ghataka build well in Mangaluru

ಬಾವಿ ಉದ್ಘಾಟಿಸಿ ಮಾತನಾಡಿದ ಮೌಲಾನಾ ಯಹ್ಯಾ ತಂಯಾಳ್ ಅವರು, ನೀರು ದೇವರು ನೀಡಿರುವ ಅತ್ಯಮೂಲ್ಯವಾದ ಪ್ರಾಕೃತಿಕ ಸಂಪತ್ತು. ನೀರನ್ನು ಯಾರು ಪೋಲು ಮಾಡಬಾರದು. ಉಳ್ಳಾಲದ ಸಮಾಜ ಸೇವಾ ಘಟಕವು ಯಾವುದೇ ಜಾತಿ, ಧರ್ಮ ನೋಡದೆ ಸಾರ್ವಜನಿಕರಿಗಾಗಿ ನೀರಿನ ವ್ಯವಸ್ಥೆ ಮಾಡಿರುವುದು ಶ್ಲಾಘನೀಯ. ಇದು ಎಲ್ಲರಿಗೂ ಮಾದರಿ ಎಂದು ಹೇಳಿದರು.['ಮಳೆ ನೀರು ಸಂಗ್ರಹಿಸದಿದ್ದರೆ ದಂಡ ಗ್ಯಾರಂಟಿ']

ಈ ಸಂದರ್ಭದಲ್ಲಿ ಬಾವಿ ನಿರ್ಮಿಸಲು ಸ್ಥಳ ದಾನ ಮಾಡಿದ ಲಿಲ್ಲಿ ಡಿಜೋಜಾ ಕುಟುಂಬದ ಸದಸ್ಯರು, ಗ್ರಾಮ ಪಂಚಾಯತಿ ಸದಸ್ಯರಾದ ಆಶಾಲತಾ, ಆಸಿಯಮ್ಮ, ಫಾರೂಕ್, ಸ್ಥಳೀಯ ಜುಮಾ ಮಸೀದಿಯ ಕಾರ್ಯದರ್ಶಿ ಅಬುಸಾಲಿ ಹಾಜಿ, ಜಮಾಅತೆ ಇಸ್ಲಾಮೀ ಹಿಂದ್ ಉಳ್ಳಾಲ ಉಪಾಧ್ಯಕ್ಷ ಅಬ್ದುರ್ರಹೀಮ್, ಕಾರ್ಯದರ್ಶಿ ಅಬ್ದುಲ್ ಕರೀಮ್, ಅಬ್ದುಸ್ಸಲಾಂ ಸಿ.ಎಚ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+