ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಂಬರೀಶ್ ಅಗಲಿಕೆ ರಾಜಕೀಯಕ್ಕೆ, ಚಿತ್ರರಂಗಕ್ಕೆ ತುಂಬಲಾರದ ನಷ್ಟ: ಆರ್.ವಿ.ದೇಶಪಾಂಡೆ

|
Google Oneindia Kannada News

ಮಂಗಳೂರು, ನವೆಂಬರ್ 26: ಹಿರಿಯ ನಟ ಅಂಬರೀಶ್ ಅವರ ನಿಧನಕ್ಕೆ ಸಚಿವ ಆರ್.ವಿ. ದೇಶಪಾಂಡೆ ಸಂತಾಪ ಸೂಚಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಚಿತ್ರರಂಗದ ರೆಬಲ್ ಸ್ಟಾರ್ ಆಗಿದ್ದ ಮಂಡ್ಯದ ಗಂಡು ನಮ್ಮನ್ನು ಅಗಲಿದ್ದಾರೆ.ರಾಜಕೀಯಕ್ಕೆ ಮತ್ತು ಚಿತ್ರರಂಗಕ್ಕೆ ಅಂಬರೀಶ್ ನಿಧನ ತುಂಬಲಾರದ ನಷ್ಟ. ಅಂಬರೀಷ್ ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ ಎಂದು ಹೇಳಿದರು.

ಅಂದು ಅಂಬರೀಶ್ ಎಂಬ ತಾಕತ್ತು ಇತ್ತು, ಇಂದು ಯಾರಿದ್ದಾರೆ?ಅಂದು ಅಂಬರೀಶ್ ಎಂಬ ತಾಕತ್ತು ಇತ್ತು, ಇಂದು ಯಾರಿದ್ದಾರೆ?

ಕರ್ನಾಟಕದಿಂದ ರಫ್ತಾಗುವ ಮೀನುಗಳಿಗೆ ನಿರ್ಬಂಧ ವಿಚಾರ ಕುರಿತು ಮಾತನಾಡಿದ ಅವರು ಗೋವಾ ಸರ್ಕಾರದೊಂದಿಗೆ ಡಿಸಿ ಜೊತೆಗೂಡಿ ಆರೋಗ್ಯ ಸಚಿವರು ಮಾತುಕತೆ ನಡೆಸಿದ್ದಾರೆ.ಇದರ ಅನ್ವಯ ಗೋವಾ ಸರ್ಕಾರ ಕರ್ನಾಟಕದ ಮೀನಿನ ಮೇಲೆ ನಿರ್ಬಂಧ ಹೇರಿಲ್ಲ. ಆದರೆ ಕೆಲವು ಮೀನಿನಲ್ಲಿ ಫಾರ್ಮಾಲಿನ್ ಕೆಮಿಕಲ್ ಇರುವುದರಿಂದ ಮೀನಿನ ಗುಣಮಟ್ಟ ಏರುಪೇರಿರುತ್ತದೆ ಎಂಬುದನ್ನು ಸ್ಪಷ್ಟಪಡಿಸಲಾಗಿದೆ.

Live Updates ಅಗಲಿದ ಅಂಬಿಗೆ ವಿದಾಯ ಹೇಳುವ ಹೊತ್ತುLive Updates ಅಗಲಿದ ಅಂಬಿಗೆ ವಿದಾಯ ಹೇಳುವ ಹೊತ್ತು

RV Deshpande expressed condolence

ಮೀನಿನಲ್ಲಿ ರಾಸಾಯನಿಕ ಕಂಡು ಬಂದ ಹಿನ್ನೆಲೆಯಲ್ಲಿ ಆ ಭಾಗದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಗೋವಾ ಸರ್ಕಾರ ಇಲ್ಲಿಯ ಮೀನನ್ನು ಪಡೆಯಲು ಆಹಾರ ಇಲಾಖೆಯಿಂದ ಸರ್ಟಿಫಿಕೇಟ್ ಪಡೆಯಲು ತಿಳಿಸಿದೆ. ಇದಕ್ಕೆ ಮಂಗಳೂರಿನ ಮೀನುಗಾರರು ತಮ್ಮ ಅನುಮತಿಯನ್ನು ಸೂಚಿಸಿದ್ದಾರೆ. ಆರೋಗ್ಯ ದೃಷ್ಟಿಯಿಂದ ಗುಣಮಟ್ಟದ ಮೀನು ರಫ್ತು ಮಾಡುವುದು ಉತ್ತಮ ದೇಶಪಾಂಡೆ ತಿಳಿಸಿದರು.

English summary
Revenue minister RV Deshpande expressed his deep condolence to Ambarish.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X