ಮಂಗ್ಳೂರು: 6 ಕೋಟಿ ರು ವೆಚ್ಚದಲ್ಲಿ ಅಂಡರ್ ಗ್ರೌಂಡ್ ವಿದ್ಯುತ್ ಕೇಬಲ್

ಮಂಗಳೂರು, ಮಾರ್ಚ್ 23 : ಮಂಗಳೂರಿಗೆ ಅಂಡರ್ ಗ್ರೌಂಡ್ ವಿದ್ಯುತ್ ಕೇಬಲ್ ಅಳವಡಿಸಬೇಕು ಎನ್ನುವ ಕನಸು ಇದೀಗ ನನಸಾಗುವ ಕಾಲ ಒದಗಿ ಬಂದಿದ್ದು. ಮೊದಲ ಹಂತದಲ್ಲಿ 6 ಕೋಟಿ ರು. ವೆಚ್ಚದಲ್ಲಿ ಅಂಡರ್ ಗ್ರೌಂಡ್ ವಿದ್ಯುತ್ ಕೇಬಲ್ ಅಳವಡಿಸುವ ಕ್ರಮ ಆರಂಭವಾಗಿದೆ.

ಇದು ಮೊದಲ ಹಂತದಲ್ಲಿ 6 ಕೋಟಿ ರೂಪಾಯಿ ವೆಚ್ಚದ ಯೋಜನೆಯಾಗಿದ್ದು, ಎರಡನೇ ಹಂತದಲ್ಲಿ ಇನ್ನೂ ಹೆಚ್ಚಿನ ಕಾಮಗಾರಿ ಆರಂಭವಾಗಲಿದೆ ಎಂದು ಶಾಸಕ ಜೆ ಆರ್ ಲೋಬೊ ತಿಳಿಸಿದ್ದಾರೆ.

Rs 6 Crore for Underground electricity Cable in Mangaluru says MLA J R Lobo

ಇಷ್ಟರವರೆಗೆ ವಿದ್ಯುತ್ ಕೇಬಲ್ ಗಳನ್ನು ಮೇಲಿನಿಂದಲೇ ಅಳವಡಿಸುವ ಕ್ರಮವಿತ್ತು. ಇದನ್ನು ಅಂಡರ್ ಗ್ರೌಂಡಿನಲ್ಲಿ ಅಳವಡಿಸಿದರೆ ಸುರಕ್ಷಿತ ಎನ್ನುವ ಕಾರಣದಿಂದ ಈ ಕ್ರಮವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.

ಕರಾವಳಿ ಸರ್ಕಲ್ ನಿಂದ ಬೆಂದೂರವೆಲ್ ಹಂಪನಕಟ್ಟೆ ಮೂಲಕ ಎ ಬಿ ಶೆಟ್ಟಿ ಸರ್ಕಲ್ ನವರೆಗೆ ಈ ಅಂಡರ್ ಗ್ರೌಂಡ್ ವಿದ್ಯುತ್ ಕಾಮಗಾರಿ ನಡೆಯುತ್ತಿದೆ. ಮೆಸ್ಕಾಂ ಎಕ್ಸಿಕ್ಯುಟಿವ್ ಇಂಜಿನಿಯರ್ ಮಂಜಪ್ಪ ಇದರ ಉಸ್ತುವಾರಿ ವಹಿಸಿದ್ದಾರೆ.

ಎಲ್ಲವೂ ಪರಿಪೂರ್ಣವಾಗಿ ನಡೆದರೆ ಮಂಗಳೂರು ನಗರದಲ್ಲಿ ಅಂಡರ್ ಗ್ರೌಂಡ್ ಕೇಬಲ್ ಅಳವಡಿಸಿ ಸುರಕ್ಷಿತವಾಗಿ ವಿದ್ಯುತ್ ಸರಬರಾಜು ಮಾಡಲು ಸಾಧ್ಯವಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+