ರಾಜೀನಾಮೆ ನೀಡಿದ ಡಿಸಿ ಸಸಿಕಾಂತ್ ಸೆಂಥಿಲ್ ವಿರುದ್ದ ಭಾರೀ ಭ್ರಷ್ಟಾಚಾರದ ಆರೋಪ

ಮಂಗಳೂರು, ಸೆ 9: "ಪ್ರಜಾಪ್ರಭುತ್ವದ ಅಡಿಗಲ್ಲೇ ಕುಸಿಯುತ್ತಿದೆ; ಇಲ್ಲಿರಲಾರೆ" ಎಂದು ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದ, ದಕ್ಷಿಣಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ವಿರುದ್ದ, ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ.

" ದಕ್ಷಿಣಕನ್ನಡ ಜಿಲ್ಲೆಯ ಮರಳುಗಾರಿಕೆ ಟೆಂಡರ್ ನಲ್ಲಿ ಜಿಲ್ಲಾಧಿಕಾರಿಗಳು ಅಕ್ರಮ ಎಸಗಿದ್ದಾರೆ" ಎಂದು ಜಿಲ್ಲಾ ಲಾರಿ ಮಾಲೀಕರ ಒಕ್ಕೂಟ ಮತ್ತು ಮರಳು ಜಂಟಿ ಕ್ರಿಯಾ ಸಮಿತಿ ಆರೋಪಿಸಿದೆ.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಸಂಘದ ಅಧ್ಯಕ್ಷರು, " ಉಡುಪಿ ಜಿಲ್ಲೆಯಲ್ಲಿ ಕಪ್ಪುಪಟ್ಟಿಗೆ ಸೇರಿರುವ ಎರಡು ಸಂಸ್ಥೆಗಳಿಗೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳುಗಾರಿಕೆ ಸಂಬಂಧ ಸಸಿಕಾಂಥ್ ಸೆಂಥಿಲ್ ಅವಕಾಶ ನೀಡಿದ್ದಾರೆ" ಎಂದು ಆರೋಪಿಸಿದ್ದಾರೆ.

Resigned Dakshina Kannada DC, Sasikanth Senthil Accused Of Sand Mafia Corruption

" ಐ ಸರ್ಜ್ ಪ್ರೈ.ಲಿಮಿಟೆಡ್ ಮತ್ತು ಟಿ4ಯು, ಈ ಎರಡು ಸಂಸ್ಥೆಗಳನ್ನು ಉಡುಪಿ ಜಿಲ್ಲಾಡಳಿತ ಕಪ್ಪು ಪಟ್ಟಿಗೆ ಸೇರಿಸಿತ್ತು. ಆದರೆ, ಈ ಎರಡು ಸಂಸ್ಥೆಗಳಿಗೆ, ಮರಳು ಲಾರಿಗಳಿಗೆ ಜಿಪಿಎಸ್ ಅಳವಡಿಸುವ ಬಿಡ್ ಅನ್ನು ನೀಡಲಾಗಿದೆ" ಎಂದು, ಸಸಿಕಾಂತ್ ವಿರುದ್ದ ಆರೋಪಿಸಲಾಗಿದೆ.

" ಇಷ್ಟೇ ಅಲ್ಲದೇ, ಜಿಲ್ಲೆಯ ಹಳೆಯಂಗಡಿ ಭಾಗದಲ್ಲಿ, ಹೂಳೆತ್ತಲಾಗಿದ್ದ ಹತ್ತು ಸಾವಿರಕ್ಕೂ ಹೆಚ್ಚು ಮೆಟ್ರಿಕ್ ಟನ್ ಮರಳನ್ನು, ಒಂದೇ ದಿನದಲ್ಲಿ ವಿಲೇವಾರಿ ಮಾಡಿ, ಮರಳು ರವಾನಿಸಲು ಸಸಿಕಾಂತ್ ಸೆಂಥಿಲ್ ಅವಕಾಶ ನೀಡಿದ್ದಾರೆ" ಎಂದು ಸಂಘದ ಅಧ್ಯಕ್ಷರು ಆರೋಪಿಸಿದ್ದಾರೆ.

" ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಅದು ಹೇಗೆ, ಒಂದೇ ದಿನದಲ್ಲಿ ಟೆಂಡರ್ ಕರೆದು, ಮರಳು ವಿಲೇವಾರಿ ಮಾಡುತ್ತಾರೆ" ಎಂದು ಅಧ್ಯಕ್ಷರು ಪ್ರಶ್ನಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+