ಬಾಳ್ತಿಲದಲ್ಲಿ ಯುವತಿಯ ಮೇಲೆ ನಿರಂತರ ಅತ್ಯಾಚಾರ:ಯುವಕನ ಬಂಧನ

ಮಂಗಳೂರು, ಫೆಬ್ರವರಿ 15: ಮದುವೆಯಾಗುವುದಾಗಿ ನಂಬಿಸಿ ಯುವತಿಯೊಬ್ಬಳ ಮೇಲೆ ನಿರಂತರ ಅತ್ಯಾಚಾರ ಎಸಗಿದ ಆರೋಪದ ಮೇಲೆ ಯುವಕನೋರ್ವನನ್ನು ಬಂಟ್ವಾಳ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಪುತ್ತೂರು ತಾಲೂಕಿನ ನೂಜಿ ಬಾಳ್ತಿಲ ಗ್ರಾಮದ ನಿವಾಸಿ, ಕಲ್ಲಿನ ಕೋರೆಯ ಇಟಾಚಿ ಆಪರೇಟರ್ ಸುಜೀತ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.

ಸಂತ್ರಸ್ಥೆ ಯುವತಿ ಮೂಲತಃ ಬಾಗಲಕೋಟೆ ಜಿಲ್ಲೆಯವರು. ಸುಮಾರು 2 ವರ್ಷಗಳಿಂದ ಬಾಳ್ತಿಲ ಗ್ರಾಮದ ನೀರಪಾದೆಯಲ್ಲಿರುವ ಕಲ್ಲಿನ ಕೋರೆಯಲ್ಲಿ ಕೂಲಿ ಕಾರ್ಮಿಕಳಾಗಿ ಕೆಲಸ ಮಾಡಿಕೊಂಡಿದ್ದಳು. ಇಲ್ಲಿಯೇ ಕಲ್ಲಿನ ಕೋರೆಯಲ್ಲಿ ಇಟಾಚಿ ಆಪರೇಟರ್ ಆಗಿ ಕೆಲಸ ಮಾಡಿಕೊಂಡಿದ್ದ ಸುಜೀತ್ ಸಂತ್ರಸ್ಥ ಯುವತಿಯ ಸ್ನೇಹ ಬೆಳಸಿದ್ದ.

ಕಳೆದ ಎಂಟು ತಿಂಗಳಿನಿಂದ ಸಂತ್ರಸ್ಥೆಯನ್ನು ಮದುವೆ ಆಗುತ್ತೇನೆ ಎಂದು ನಂಬಿಸಿ ನಿರಂತರವಾಗಿ ಆತ್ಯಾಚಾರ ಮಾಡಿದ್ದ ಎಂದು ಆರೋಪಿಸಲಾಗಿದೆ.

Rape accused arrested in Bantwal

ಇತ್ತೀಚೆಗೆ ಮದುವೆ ಆಗುವ ಬಗ್ಗೆ ಸಂತ್ರಸ್ಥ ಯುವತಿ ಆರೋಪಿ ಸುಜೀತ್ ನಲ್ಲಿ ಕೇಳಿದಾಗ ಯುವತಿಯನ್ನು ಮದುವೆಯಾಗಲು ಸುಜೀತ್ ನಿರಾಕರಿಸಿದ್ದ. ಅದಲ್ಲದೇ, ನೀನು ಕೀಳು ಜಾತಿಯವಳು ನಾನು ಜೈಲಿನಲ್ಲಿ ಬೇಕಾದರೂ ಹೋಗಿ ಇರುತ್ತೇನೆ. ನಿನ್ನನ್ನು ನಾನೂ ಸತ್ತರೂ ಮದುವೆ ಆಗುವುದಿಲ್ಲ ಎಂದು ಜರಿದಿದ್ದ ಎಂದು ಆರೋಪಿಸಲಾಗಿದೆ.

ಸಂತ್ರಸ್ಥೆ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿ ಸುಜೀತ್ ನನ್ನು ಬಂಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+