ಕಲ್ಲಡ್ಕ ಶಾಲೆಗೆ ಕೊಲ್ಲೂರಿನ ಹುಂಡಿಯ ಹಣ; ರಮಾನಾಥ್ ರೈ
ಮಂಗಳೂರು, ಡಿಸೆಂಬರ್ 06; ಮಾಜಿ ಸಚಿವ ಬಿ. ರಮಾನಾಥ್ ರೈ ಮತ್ತೆ ಭಾವೋದ್ವೇಗಕ್ಕೆ ಒಳಗಾಗಿದ್ದಾರೆ. 2017ರಲ್ಲಿ ಸಚಿವರಾಗಿದ್ದ ಸಂದರ್ಭದಲ್ಲಿ ಆಗಿನ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆಯನ್ನು ಬಂಟ್ವಾಳ ಐಬಿಗೆ ಕರೆಸಿಕೊಂಡು ಬೈದ ವಿಚಾರವಾಗಿ ರಮಾನಾಥ್ ರೈ ಮತ್ತೆ ಕೆರಳಿ ಕೆಂಡವಾಗಿದ್ದಾರೆ.
ಮಂಗಳೂರಿನ ಕಾಂಗ್ರೆಸ್ ಕಛೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ರಮಾನಾಥ್ ರೈ, ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ರಮಾನಾಥ್ ರೈ ಭಾವೋದ್ವೇಗಕ್ಕೆ ಒಳಗಾಗಿದ್ದಾರೆ. "ನಾನು ಆಗ ಎಸ್‌ಪಿಗೆ ಬೈದಿದ್ದೇನೆ. ಕಲ್ಲಡ್ಕ ಪ್ರಭಾಕರ್ ಭಟ್‌ರನ್ನು ಬಂಧನ ಮಾಡೋಕೆ ಸೂಚಿಸಿದ್ದೇನೆ ಅಂತಾ ಬಿಜೆಪಿಯವರು ಅಪಪ್ರಚಾರ ಮಾಡಿದರು. ನಾನು ಎಸ್‌ಪಿ ಬೈದಿದ್ದೇನೆ ಅಂತಾ ಯಾರಾದರೂ ಸಾಬೀತು ಮಾಡಿದರೆ ಆ ಕ್ಷಣದಿಂದಲೇ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ" ಅಂತಾ ಹೇಳಿದ್ದಾರೆ.
"ಭೂಷಣ್ ಜಿ. ಬೊರಸೆಯನ್ನು ಬಂಟ್ವಾಳ ಐಬಿಗೆ ಕರೆಯಿಸಿದೆ ಅಂತಾ ಎಲ್ಲರೂ ಹೇಳಿದ್ದರು. ಆದರೆ ಎಸ್‌ಪಿಯೇ ನಾನೇ ಬರುತ್ತೇನೆ ಅಂತಾ ಅವರೇ ಬಂದಿದ್ದಾರೆ. ನಾನು ಮಾತನಾಡಿದರೆ ಬೈಯೋದು ಆಗುತ್ತದೆ. ಆದರೆ ಬಿಜೆಪಿಯವರು ಮಾತನಾಡಿದರೆ ಅದು ತರಾಟೆ ಅಂತಾ ಆಗುತ್ತದೆ. ನಾನು ಬೈದಿದ್ದೇನೆ ಅಂತಾ ಅವನು ಎಸ್‌ಪಿ ಹೇಳಿದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ" ಎಂದು ರಮಾನಾಥ್ ರೈ ಹೇಳಿದ್ದಾರೆ.

"ಇತ್ತೀಚೆಗೆ ಒಬ್ಬ ಹಿಂದೂ ಮುಖಂಡರೊಬ್ಬರು ದೇವಸ್ಥಾನದ ಎದುರು ನಿಂತು ದೇವಸ್ಥಾನದ ದುಡ್ಡನ್ನು ಬೇರೆ ಯಾವುದಕ್ಕೂ ಬಳಸಬಾರದು ಅಂತಾ ಹೇಳಿದ್ದ. ಅವತ್ತು ನಾನೂ ಅದನ್ನೇ ಹೇಳಿದ್ದೆ. ಕಲ್ಲಡ್ಕದ ಶ್ರೀರಾಮ ಶಾಲೆಗೆಗೆ ಚೆಕ್ ಮೂಲಕ ಮೂರುವರೆ ಕೋಟಿ ಬಂದಿತ್ತು. ಆದನ್ನು ಹಿಂದೆ ಕೊಡಬೇಕು ಅಂತಾ ಹೇಳಿದ್ದೆ. ಕೊಲ್ಲೂರಿನ ಹುಂಡಿಯ ಮೂರುವರೆ ಕೋಟಿ ರೂಪಾಯಿ ಕೊಟ್ಟಿದ್ದು ಪ್ರಶ್ನೆ ಮಾಡಿದ್ದು ತಪ್ಪಾ? ಶಾಲೆಯ ಅನ್ನದಾಸೋಹಕ್ಕಾಗಿ ಅಕ್ಕಿ, ಕಾಯಿಪಲ್ಯ ಇತರ ಆಹಾರ ವಸ್ತುಗಳನ್ನು ಕೊಡಲಿ. ಅದು ಬಿಟ್ಟು ಕೊಲ್ಲೂರು ದೇವಸ್ಥಾನದಲ್ಲಿ ಭಕ್ತರು ಹಾಕಿದ ಹುಂಡಿಯ ಹಣವನ್ನು ಚೆಕ್ ರೂಪದಲ್ಲಿ ಕೊಟ್ಟಿರೋದು ಅವ್ಯವಹಾರ ಅಲ್ವಾ ಅಂತಾ?" ಎಂದು ಪ್ರಶ್ನೆ ಮಾಡಿದ್ದಾರೆ.
"ನನ್ನ ಮೇಲೆ ಅಪಪ್ರಚಾರ ಮಾಡಿ ಬಿಜೆಪಿ ಸೋಲಿಸಿದೆ. ಕಾಂಗ್ರೆಸ್ನ ಒಬ್ಬನೇ ಒಬ್ಬನ ಮೇಲೆ ಎಫ್‌ಐಆರ್ ಇಲ್ಲ. ಎಫ್‌ಐಆರ್‌ನಲ್ಲಿರೋದು ಬಿಜೆಪಿ, ಎಸ್‌ಡಿಪಿಐಯವರು ಮಾತ್ರ. ಟಿಪ್ಪು ಸತ್ತ ದಿನ ಹಿಂದೂ ಸಾಯಬೇಕು ಅದು ಮಾಡಿದ್ದು ಬಿಜೆಪಿ. ಕೋಮುದಳ್ಳುರಿ, ಗಲಭೆಯಲ್ಲಿ ಬಿಜೆಪಿ ಸೇರಿದಂತೆ ಮತಿಯವಾದಿಗಳೇ ಕೈ ವಾಡ ಇರೋದು" ಎಂದು ಮಾಜಿ ಸಚಿವರು ಆರೋಪಿಸಿದರು.
ಇನ್ನು ರಾಜ್ಯ ಸರ್ಕಾರದ ವಿರುದ್ಧ ಟೀಕಾ ಪ್ರಹಾರವನ್ನೇ ನಡೆಸಿದ ಅವರು, "ಸರ್ಕಾರದ ಆಡಳಿತ ಯಂತ್ರ ಕುಸಿದಿದೆ. ಜನರ ಮಾನ-ಪ್ರಾಣ ರಕ್ಷಣೆಯ ಜವಾಬ್ದಾರಿ ರಕ್ಷಣೆ ಇರೋದು ಗೃಹ ಇಲಾಖೆಗೆ. ಆದರೆ ಗೃಹ ಇಲಾಖೆ ಸಂಪೂರ್ಣ ಹದೆಗೆಟ್ಟು ಹೋಗಿದೆ. ಪೊಲೀಸ್ ಇಲಾಖೆಯನ್ನು ಶ್ವಾನಕ್ಕೆ ಹೋಲಿಸುವ ಮೂಲಕ ಅಧಃಪತನಕ್ಕೆ ತಲುಪಿದೆ" ಎಂದರು.
"ಪೊಲೀಸರು ಎಂಜಲು ತಿನ್ನುತ್ತಾರೆ ಅಂತಾ ಕೀಳು ಮಟ್ಟದ ಟೀಕೆಯನ್ನು ಗೃಹ ಸಚಿವರೇ ಮಾಡುತ್ತಾರೆ. ಇದು ಆಡಳಿತ ಯಂತ್ರದ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಗೃಹ ಇಲಾಖೆ ವೈಫಲ್ಯ, ಇದು ಸರ್ಕಾರದ ವೈಫಲ್ಯವಾಗಿದೆ. ತನ್ನ ಅಸಮರ್ಥತೆಯನ್ನು ಅಸಹಾಯಕತೆ ಅವರು ಮಾತಾಡಿರೋದು. ಇದು ಇಲಾಖೆಗೆ ಶೋಭೆ ಅಲ್ಲ. ಆರಗ ಜ್ಞಾನೇಂದ್ರರಿಗೆ ಗೃಹ ಸಚಿವರಾಗಿ ಮುಂದುವರಿಯೋಕೆ ಅರ್ಹತೆ ಇಲ್ಲ" ಎಂದು ಹೇಳಿದರು.
"ಗೃಹ ಇಲಾಖೆಯಲ್ಲಿ ಪೊಲೀಸ್ ಅಧಿಕಾರಿಗಳ ವರ್ಗಾವಣೆ ದಂಧೆಯಾಗುತ್ತಿದೆ. ಇದಕ್ಕೆ ಗೃಹ ಖಾತೆ ಸಚಿವರ ಹೇಳಿಕೆ ಪುಷ್ಠೀಕರಿಸುತ್ತದೆ. ಸರ್ಕಾರದ ಪ್ರತಿನಿಧಿಗಳು ಕಾಮಗಾರಿಯಲ್ಲಿ ಶೇ 40ರಷ್ಟು ಕಮಿಷನ್ ಪಡೆಯುತ್ತಿದ್ದಾರೆ. ಇದು ಸ್ವತಃ ಗುತ್ತಿಗೆದಾರರ ಸಂಘ ಮಾಡಿದ ಆರೋಪವಾಗಿದೆ" ಎಂದು ತಿಳಿಸಿದರು.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications