ಮೋದಿ ಪಾಕಿಸ್ತಾನದ ಭಜನೆ ಮಾಡುವುದನ್ನು ಬಿಟ್ಟಿಲ್ಲ: ರಮಾನಾಥ್ ರೈ ವಾಗ್ದಾಳಿ

ಮಂಗಳೂರು, ಏಪ್ರಿಲ್ 11:ಚುನಾವಣಾ ಪ್ರಚಾರ ಸಭೆಯಲ್ಲಿ ಮೋದಿ ಪಾಕಿಸ್ತಾನದ ಭಜನೆ ಮಾಡುವುದನ್ನು ಬಿಟ್ಟಿಲ್ಲ. ಪಾಕಿಸ್ತಾನದ ವಿಚಾರವನ್ನೇ ಚುನಾವಣೆ ಪ್ರಚಾರ ಸಭೆಗಳಲ್ಲಿ ಪ್ರಸ್ತಾಪಿಸುತ್ತಾ ಮತ ಯಾಚಿಸುತ್ತಿದ್ದಾರೆ ಎಂದು ಮಾಜಿ ಸಚಿವ ರಮಾನಾಥ್ ರೈ ವಾಗ್ದಾಳಿ ನಡೆಸಿದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಬಂಟ್ವಾಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಜನರ ಸಮಸ್ಯೆಗಳನ್ನು ಪರಿಹರಿಸುವ ಮಾತನಾಡದೆ ನೀಡಿದ ಭರವಸೆಯಲ್ಲಿ ಒಂದನ್ನೂ ಈಡೇರಿಸುವ ತಾಕತ್ತು ಮೋದಿ ಅವರಿಗಿಲ್ಲ. ಆದರೆ ಪಾಕಿಸ್ತಾನ, ಧರ್ಮಾಧಾರಿತ ಭಾವನಾತ್ಮಕ ವಿಷಯಗಳಲ್ಲೇ ಇನ್ನೂ ತಲ್ಲೀನರಾಗಿದ್ದಾರೆ. ಇಂದಿನ ಜನ ಪ್ರಜ್ಞಾವಂತರಾಗಿದ್ದು, ಮೋದಿಯ ಇಂತಹ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುವುದಿಲ್ಲ ಎಂದು ಕಿಡಿಕಾರಿದರು.

ಯುಪಿಎ ಸರಕಾರ ಹಾಗೂ ಎನ್‍ಡಿಎ ಸರಕಾರಗಳ ಸಾಧನೆಗಳನ್ನು ಜನ ತುಲನೆ ಮಾಡಿಕೊಂಡು ಈ ಬಾರಿ ಮತ ಚಲಾಯಿಸಲಿದ್ದಾರೆ ಎಂದ ರಮಾನಾಥ್ ರೈ, ಮಹಾತ್ಮಾಗಾಂಧಿ ಉದ್ಯೋಗ ಖಾತರಿ ಯೋಜನೆ, ಮಾಹಿತಿ ಹಕ್ಕು ಅಧಿನಿಯಮ , ಆಹಾರ ಭದ್ರತಾ ಕಾಯ್ದೆ, ಶಿಕ್ಷಣ ಹಕ್ಕು ಕಾಯ್ದೆ , ರಾಷ್ಟ್ರೀಯ ಆರೋಗ್ಯ ಅಭಿಯಾನ, ಸಾಕ್ಷರತಾ ಆಂದೋಲನ, ಸರ್ವಶಿಕ್ಷಾ ಅಭಿಯಾನ ಇಂತಹ ದೊಡ್ಡ ದೊಡ್ಡ ಯೋಜನೆಗಳನ್ನು ಕಾಂಗ್ರೆಸ್ ಸರಕಾರ ಜನರಿಗೆ ನೀಡಿದೆ ಎಂದರು. ಮುಂದೆ ಓದಿ...

 ಇನ್ನೊಬ್ಬರ ಮೇಲೆ ಗೂಬೆ ಕೂರಿಸುತ್ತಿದ್ದಾರೆ

ಇನ್ನೊಬ್ಬರ ಮೇಲೆ ಗೂಬೆ ಕೂರಿಸುತ್ತಿದ್ದಾರೆ

ಬಿಜೆಪಿ ಅವಧಿಯಲ್ಲಿ ದೇಶದ ಜನರಿಗೆ ನೀಡಿದ ಒಂದೇ ಒಂದು ದೊಡ್ಡ ಯೋಜನೆಗಳನ್ನು ಮೋದಿ ಜನರಿಗೆ ತಿಳಿಸಲಿ ಎಂದು ಸವಾಲು ಹಾಕಿದ ರಮಾನಾಥ್ ರೈ, ಕಾರ್ಗಿಲ್ ಘಟನೆ, ಕಂದಹಾರ್ ಘಟನೆಯ ಬಳಿಕ ಭಯೋತ್ಪಾದಕರನ್ನು ಬಿಟ್ಟದ್ದು, ಪಾರ್ಲಿಮೆಂಟ್ ಮೇಲೆ ಭಯೋತ್ಪಾದಕ ದಾಳಿ ಮೊದಲಾದವುಗಳು ಬಿಜೆಪಿ ಸರಕಾರದ ಅವಧಿಯಲ್ಲೇ ನಡೆದಿದೆ. ಆದರೆ ಬಿಜೆಪಿ ನಾಯಕರು ಮಾತ್ರ ಇನ್ನೊಬ್ಬರ ಮೇಲೆ ಗೂಬೆ ಕೂರಿಸುವ ಮೂಲಕ ಪಾಕಿಸ್ತಾನವನ್ನು ಗುಮ್ಮನಾಗಿ ತೋರಿಸುತ್ತಿದ್ದಾರೆ ಎಂದು ಗುಡುಗಿದರು.

 ನಳಿನ್ ಕುಮಾರ್ ಕಟೀಲ್ ಕಳಪೆ ಸಂಸದ

ನಳಿನ್ ಕುಮಾರ್ ಕಟೀಲ್ ಕಳಪೆ ಸಂಸದ

ಮೋದಿ ಅವರ ಹೆಸರಿನಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಮತ ಯಾಚಿಸುತ್ತಿದ್ದಾರೆ ಎಂದು ಕಿಡಿಕಾರಿದ ರಮಾನಾಥ್ ರೈ, ನಳಿನ್ ಕುಮಾರ್ ಕಟೀಲ್ ಒಬ್ಬ ಕಳಪೆ ಸಂಸದ ಅಂತ ಬಿಜೆಪಿಗರೇ ಹೇಳುತ್ತಿದ್ದಾರೆ. ಕಳೆದ 10 ವರ್ಷದಲ್ಲಿ ನಳಿನ್ ಕುಮಾರ್ ಕಟೀಲ್ ಈ ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿದರು.

 ದಕ್ಷಿಣ ಕನ್ನಡ ಜಿಲ್ಲೆಗೆ ಏನು ಕೊಟ್ಟಿದ್ದಾರೆ ?

ದಕ್ಷಿಣ ಕನ್ನಡ ಜಿಲ್ಲೆಗೆ ಏನು ಕೊಟ್ಟಿದ್ದಾರೆ ?

ಮೋದಿ ದಕ್ಷಿಣ ಕನ್ನಡ ಜಿಲ್ಲೆಗೆ ಏನು ಕೊಟ್ಟಿದ್ದಾರೆ ? ಎಂದು ಪ್ರಶ್ನಿಸಿದ ರಮಾನಾಥ್ ರೈ, ಓ.ಎನ್.ಜಿ.ಸಿ, ಎಂ.ಆರ್.ಪಿ.ಎಲ್ ಪಾಸ್‌ಪೋರ್ಟ್ ಆಫೀಸ್ ಕರಾವಳಿಗೆ ತಂದದ್ದು ನಮ್ಮ ಕಾಂಗ್ರೆಸ್ ಸರ್ಕಾರ. ಆದರೆ ಬಿಜೆಪಿ ಸರ್ಕಾರ ಇದ್ದ ಸಮಯದಲ್ಲಿ ಇಲ್ಲಿ ಇದ್ದ ರಕ್ಷಣಾ ಇಲಾಖೆಗೆ ಸಂಬಂಧಪಟ್ಟ ಕಚೇರಿಯನ್ನು ಮುಂಬಯಿಗೆ ವರ್ಗಾವಣೆ ಮಾಡಿದ್ದಾರೆ. ವಿಜಯ ಬ್ಯಾಂಕ್‌ ಅನ್ನು ಬ್ಯಾಂಕ್ ಆಫ್ ಬರೋಡ ಜೊತೆ ವಿಲೀನ ಮಾಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

 ತೋಟಗಾರಿಕಾ ಸಂಶೋಧನ ಕೇಂದ್ರ ಸ್ಥಳಾಂತರ

ತೋಟಗಾರಿಕಾ ಸಂಶೋಧನ ಕೇಂದ್ರ ಸ್ಥಳಾಂತರ

ಈಗ ಕಡಬದಲ್ಲಿರುವ ತೋಟಗಾರಿಕಾ ಸಂಶೋಧನ ಕೇಂದ್ರವನ್ನು ಹೈದ್ರಬಾದ್ ಗೆ ಸ್ಥಳಾಂತರಿಸುತ್ತಿದ್ದಾರೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಸಂಸದ ನಳಿನ್ ಕುಮಾರ್ ಕಟೀಲ್ ಮಾತ್ರ ಚಕಾರ ಎತ್ತಿಲ್ಲ ಎಂದು ರಮಾನಾಥ್ ರೈ ಟೀಕಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+