ರಮಾನಾಥ ರೈ 'ಸಾಮರಸ್ಯ ರ‍್ಯಾಲಿ'ಗೆ ಅನುಮತಿಯಿಲ್ಲ : ರಾಮಲಿಂಗಾ ರೆಡ್ಡಿ

ಬೆಂಗಳೂರು, ಸೆಪ್ಟೆಂಬರ್ 5: ಮಂಗಳೂರಿನಲ್ಲಿ ಸೆಪ್ಟೆಂಬರ್ 12ರಂದು ಉಸ್ತುವಾರಿ ಸಚಿವ ರಮಾನಾಥ ರೈ ನೇತೃತ್ವದಲ್ಲಿ ನಡೆಸಲುದ್ದೇಶಿಸಿದ್ದ 'ಸಾಮರಸ್ಯ ರ‍್ಯಾಲಿ'ಗೂ ಅನುಮತಿ ನೀಡುವುದಿಲ್ಲ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, "ದಕ್ಷಿಣ ಕನ್ನಡದಲ್ಲಿ ಈಗಾಗಲೇ ಶಾಂತಿ ನೆಲೆಸಿದ. ಈ ಸಂದರ್ಭದಲ್ಲಿ ಸಾಮರಸ್ಯ ರ‍್ಯಾಲಿ ನಡೆಸುವ ಅವಶ್ಯಕತೆ ಏನಿದೆ?" ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ಪಕ್ಷದ ರ‍್ಯಾಲಿ ಗೆಸ್ವತಃ ಅದೇ ಪಕ್ಷದ ಗೃಹ ಸಚಿವರು ತಡೆ ನೀಡಿದ್ದಾರೆ.

Ramanath Rai's 'Samarasya Rally' not allowed: Ramalinga Reddy

ಇದೇ 12 ರಂದು ಜಿಲ್ಲೆಯ ಫರಂಗಿಪೇಟೆಯಿಂದ ಮಾಣಿವರೆಗೆ ಸಾಮರಸ್ಯ ನಡಿಗೆ ಪಾದಯಾತ್ರೆ ಕೈಗೊಳ್ಳಲಾಗುವುದು ಎಂದು ಅರಣ್ಯ ಸಚಿವ ರಮಾನಾಥ ರೈ ಅವರು ತಿಳಿಸಿದ್ದರು.

ಸೆಪ್ಟೆಂಬರ್ 12 ರ ರ‍್ಯಾಲಿ ಪಕ್ಷಾತೀತವಾಗಿರಲಿದೆ. ಈ ಹಿಂದೆ ನಡೆದ ಅಹಿತಕರ ಘಟನೆಗಳಲ್ಲಿ ಭಾಗಿಯಾಗಿರುವ ಸಂಘಟನೆಗಳನ್ನು ಹೊರತುಪಡಿಸಿ ಉಳಿದ ಸಂಘಟನೆಗಳು, ಬುದ್ಧಿಜೀವಿಗಳು, ಮಠಾಧೀಶರುಗಳು ಸಾಮರಸ್ಯ ನಡಿಗೆ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದರು.

ಆದರೆ, "ಒಂದು ಪಕ್ಷದ ಬದಲು ಎಲ್ಲಾ ಪಕ್ಷಗಳು ಒಟ್ಟಾಗಿ ಸಾಮರಸ್ಯ ರ‍್ಯಾಲಿ ನಡೆಸಿದರೆ ಮಾತ್ರ ಅನುಮತಿ ನೀಡುತ್ತೇವೆ," ಎಂದು ಗೃಹ ಸಚಿವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+