"ಜಿಲ್ಲೆಯಲ್ಲಿ ಹಿಂದು - ಮುಸ್ಲಿಂ ಗಲಾಟೆ ಎಬ್ಬಿಸುವುದೇ ರಮಾನಾಥ ರೈ”
ಮಂಗಳೂರು, ಜೂನ್ 28: ಜಿಲ್ಲೆಯಲ್ಲಿ ಹಿಂದು - ಮುಸ್ಲಿಂ ಗಲಾಟೆ ಎಬ್ಬಿಸುವುದೇ ರಮಾನಾಥ ರೈ ಎಂದು ಮಾಜಿ ಕಾಂಗ್ರೆಸ್ ನಾಯಕ ಹರಿಕೃಷ್ಣ ಬಂಟ್ವಾಳ್ ವಾಗ್ದಾಳಿ ನಡೆಸಿದ್ದಾರೆ.
ರಮಾನಾಥ ರೈ ವಿರುದ್ಧ ಕೆಂಡಕಾರಿರುವ ಹರಿಕೃಷ್ಣ, "ಜನಾರ್ದನ ಪೂಜಾರಿಯವರು ಕಾಂಗ್ರೆಸ್ ಪಕ್ಷದ ಹಿರಿಯ ವ್ಯಕ್ತಿ. ಇಂಥ ವ್ಯಕ್ತಿಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಹೀನಾಯವಾಗಿ ಬೈದಿದ್ದಾರೆ. ಮದುವೆ ಸಮಾರಂಭದಲ್ಲಿ ಸಾರ್ವಜನಿಕವಾಗಿ ತೆಗಳಿದ್ದಾರೆ. ಬೋ ಮಗ, ಸೂ ಮಗ ಅಂತಾ ಹೇಳಿ ಕಾರ್ಯಕರ್ತರಲ್ಲಿ ಒಡಕು ಸೃಷ್ಟಿಸಿದ್ದಾರೆ. ಪೂಜಾರಿ ಜೊತೆ ನಿಲ್ತೀರಲ್ಲಾ , ನೋಡಿಕೊಳ್ತೀನಿ ಅಂತಾ ಬೆದರಿಕೆ ಹಾಕಿದ್ದಾರೆ," ಎಂದರು.

"ರಮಾನಾಥ ರೈಯನ್ನು 1985ರಲ್ಲಿ ಟಿಕೆಟ್ ಕೊಟ್ಟು ಶಾಸಕರಾಗಿಸಿದ್ದು ಪೂಜಾರಿ. ಆಸ್ಕರ್ ಫೆರ್ನಾಂಡಿಸ್ ಆಗಲೀ ವೀರಪ್ಪ ಮೊಯ್ಲಿಯಾಗಲಿ ಅವರನ್ನು ಶಾಸಕರಾಗಿಸಿದ್ದಲ್ಲ. ಈಗ ಹಣ ಆಗಿರಬಹುದು. ಅಧಿಕಾರದ ಅಹಂಕಾರದಿಂದ ಮಾತನಾಡಿದ್ದಾರೆ. ಇಂಥ ಕೀಳು ಭಾಷೆ ಬಳಸಿದ ರಮಾನಾಥ ರೈಯನ್ನು ಪಕ್ಷದಿಂದ ಕಿತ್ತು ಹಾಕಬೇಕು. ಸಚಿವ ಸ್ಥಾನದಿಂದ ಕಿತ್ತೊಗೆದು ಪಕ್ಷದ ಮರ್ಯಾದೆ ಉಳಿಸಬೇಕು," ಎಂದು ಹರಿಕೃಷ್ಣ ಬಂಟ್ವಾಳ್ ಹೇಳಿದ್ದಾರೆ.
"ರಮಾನಾಥ ರೈ ಒಳಗೊಂದು, ಹೊರಗೊಂದು ಇದ್ದಾರೆ. ಜಿಲ್ಲೆಯಲ್ಲಿ ಹಿಂದು - ಮುಸ್ಲಿಂ ಗಲಾಟೆ ಎಬ್ಬಿಸುವುದೇ ರಮಾನಾಥ ರೈ. ಇಂಥ ವ್ಯಕ್ತಿಯಿಂದ ಜಿಲ್ಲೆಯಲ್ಲಿ ಸಾಮರಸ್ಯ ಸಾಧ್ಯವಿಲ್ಲ," ಎಂದು ಹರಿಕೃಷ್ಣ ಬಂಟ್ವಾಳ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.












Click it and Unblock the Notifications