ರಂಜಾನ್ ಖಾದ್ಯಗಳ ಮಳಿಗೆಗಳಲ್ಲಿ ಒಂದು ಸುತ್ತು!
ಇದು ರಂಜಾನ್ ಪವಿತ್ರ ಮಾಸ. ಮುಸ್ಲಿಂಮರು ಈ ಸಮಯದಲ್ಲಿ ಉಪವಾಸದ ನಂತರ ಇಫ್ತಾರ್ ಕೂಟವನ್ನು ಬಗೆ ಬಗೆಯ ರೀತಿಯಲ್ಲಿ ಆಯೋಜಿಸುತ್ತಾರೆ. ಇಫ್ತಾರ್ ಸಂಜೆ ಎಲ್ಲರಿಗೂ ಇಷ್ಟ. ಈ ಪವಿತ್ರ ಮಾಸದಲ್ಲಿ ಆರೋಗ್ಯಕರ ಆಹಾರಗಳ ಸೇವನೆಗೆ ವಿಶೇಷ ಆದ್ಯತೆಯಿದೆ. ದೇಹಕ್ಕೆ ಶಕ್ತಿ ನೀಡುವ ಪುಷ್ಟಿದಾಯಕ ತಿಂಡಿಗಳ ಸೇವನೆಯನ್ನು ಜನರು ಇಷ್ಟಪಡುತ್ತಾರೆ.
ರಂಜಾನ್ ಮಾಸದಂದು ಬಗೆ-ಬಗೆಯ ತಿಂಡಿಗಳು ನೆನಪಾಗುತ್ತವೆ. ಮಂಗಳೂರಿನಲ್ಲಿಯೂ ಈ ಹಬ್ಬದ ವೇಳೆ ವಿಶೇಷ ಖಾದ್ಯಗಳ ಲೋಕ ಅಲ್ಲಲ್ಲಿ ತೆರೆದುಕೊಳ್ಳುತ್ತದೆ. ಇಲ್ಲಿನ ಕೆಲವು ಪ್ರದೇಶಗಳು ಇಫ್ತಾರ್ ಖಾದ್ಯಾಗಾಗಿಯೇ ಪ್ರಸಿದ್ಧಿ ಪಡೆದಿವೆ.

ಈ ಪೈಕಿ ಪ್ರಮುಖವಾದದ್ದು ಬಂದರಿನ ಬಾಂಬೆ ರೆಸ್ಟೋರೆಂಟ್, ಹಂಪನಕಟ್ಟೆಯ ಹೋಟೆಲ್ ಸಫಾ ಹಾಗೂ ಸಾಲ್ವಾ, ಕಂಕನಾಡಿಯ ಬಿರಿಯಾನಿ ಪ್ಯಾರಡೈಸ್ ಮತ್ತು ಪಾಂಡೇಶ್ವರದ ಫೋರಂ ಫೀಜಾದಲ್ಲಿರುವ ಫೋರಮ್ ಫುಡ್ ಸ್ಟ್ರೀಟ್.
ಇಲ್ಲಿ ಗರಿಗರಿಯಾದ ಖಾರವಾದ ರೋಲ್, ಬಗೆ-ಬಗೆಯ ನಾನ್ ಗಳು, ಯಮ್ಮಿ ಫಲೂದಾ, ಚಿಕನ್ ಗ್ರಿಲ್, ಸಮೋಸ, ಪತ್ತರ್, ಈರುಳ್ಳಿ ಸಮೋಸ, ಕಂಡಿ, ಕ್ರಿಸ್ಪಿ ಚಿಕನ್, ಚಿಕನ್ ಕಂಡಿ, ಕ್ರಿಸ್ಪಿ ಕಬಾಬ್ ಇತ್ಯಾದಿಗಳನ್ನು ಸವಿಯಬಹುದು. ರಂಜಾನ್ ಹಬ್ಬ ಬಗೆ ಬಗೆಯ ಸಿಹಿ ತಿಂಡಿ ಇಲ್ಲದೆ ಪರಿಪೂರ್ಣವಾಗುವುದಿಲ್ಲ. ಅದರಲ್ಲೂ ಜನಪ್ರಿಯವಾಗಿರುವ ಸೋಜಿ ಪಾಯಸ ಇರಲೇಬೇಕು.
ಚಿಕನ್ ಬಿರಿಯಾನಿ : ಇಫ್ತಾರ್ ಕೂಟಗಳಲ್ಲಿ ಬಿರಿಯಾನಿ ಇಲ್ಲದಿದ್ದರೆ ಮಜಾ ಇಲ್ಲ. ಈ ಸಮಯದಲ್ಲಿ ನೀವು ಬಿರಿಯಾನಿ ಸೇವಿಸಬೇಕಿದ್ದರೆ ಬಿರಿಯಾನಿ ಪ್ಯಾರಡೈಸ್‌ಗೆ ಭೇಟಿ ಕೊಡಬೇಕು. ಕಂಕನಾಡಿ ವೃತ್ತದಲ್ಲಿರುವ ಈ ತಾಣದಲ್ಲಿ ಚಿಕನ್ ಬಿರಿಯಾನಿ ಬಾಯಲ್ಲಿ ನೀರು ತರಿಸುತ್ತದೆ.
ರಂಜಾನ್ ಸಮಯದಲ್ಲಂತೂ ಇಲ್ಲಿನ ಬಿರಿಯಾನಿಗೆ ಬಹಳ ಬೇಡಿಕೆ. ಇದರ ಜೊತೆಗೆ ಇಲ್ಲಿ ಸಿಗುವ ಚಿಕನ್ ಗ್ರಿಲ್ ಮತ್ತು ಚಿಕನ್ ತಂದೂರಿ ಸಖತ್ ಫೇಮಸ್. ಹಾಗೆಯೇ ಇಲ್ಲಿನ ಚಿಕನ್ ಕೊಲ್ಹಾಪುರಿ, ಚಿಕನ್ ಕಡಾಯಿ, ಚಿಕನ್ ಕಬಾಬ್ ಇತ್ಯಾದಿಗಳನ್ನು ಸವಿಯಲು ಜನರು ಬರುತ್ತಾರೆ.
ಮಂಗಳೂರಿನಲ್ಲಿ ಪತ್ತರ್ ಸ್ಪೆಷಲ್ : ಮಂಗಳೂರಿನಲ್ಲಿ ರಂಜಾನ್ ಸಮಯದಲ್ಲಿ ವಿಭಿನ್ನವಾಗಿ ತಯಾರಿಸುವ ಆಹಾರ 'ಪತ್ತರ್'. ಅಕ್ಕಿ ಹುಡಿಯಿಂದ ಮಿಶ್ರಣಗೊಳ್ಳುವ ಈ ರೊಟ್ಟಿ ಪ್ರತಿ ಮುಸ್ಲಿಂಮರ ಮನೆಗಳಲ್ಲಿ ಇದ್ದೇ ಇರುತ್ತದೆ .
ರಾಂಬುಟಾನ್ ಹಣ್ಣು : ರಂಜಾನ್ ಪವಿತ್ರ ಮಾಸದಂದು ರಾಂಬುಟಾನ್ ಹಣ್ಣಿಗೆ ಬಲು ಬೇಡಿಕೆ. ಇದು ಮಂಗಳೂರು, ಮೂಡಬಿದಿರಿಯ ಸೋನ್ಸ್ ಕೃಷಿ ತೋಟದಲ್ಲಿ ಬೆಳೆಸುತ್ತಾರೆ. ಈ ಹಣ್ಣಿಗೆ ರಂಜಾನ್ ಸಮಯದಲ್ಲಿ ಮಾತ್ರ ಹೆಚ್ಚಿನ ಬೇಡಿಕೆ. ಮೂಡಬಿದಿರೆಯಿಂದ ಮಂಗಳೂರು ಹಾಗೂ ಇತರ ಪ್ರದೇಶಗಳಿಗೆ ಇದು ಸರಬರಾಜು ಆಗುತ್ತದೆ. ಮಂಗಳೂರಿನಲ್ಲಂತು ಹಣ್ಣುಗಳ ಜೊತೆ ರಾಂಬುಟಾನ್ ಹಣ್ಣು ಇರಲೇಬೇಕು.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications