ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಿಎಸ್ಐ ಪರೀಕ್ಷೆ; ಸಿದ್ಧಿ ಜನಾಂಗದ ಏಕೈಕ ಅಭ್ಯರ್ಥಿ ಮನವಿ ಏನು?

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಅಕ್ಟೋಬರ್ 28; ಮಂಗಳೂರಿನಲ್ಲಿ ಪೊಲೀಸ್ ಸಬ್‌ಇನ್ಸ್ ಪೆಕ್ಟರ್ ನೇಮಕಾತಿ ನಡೆಯುತ್ತಿದೆ. ಮಂಗಳಾ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ 402 ಪೊಲೀಸ್ ಸಬ್‌ಇನ್ಸ್ ಪೆಕ್ಟರ್ ಹುದ್ದೆಗೆ ನೇಮಕಾತಿ ನಡೆಯುತ್ತಿದ್ದು ಸಾವಿರಾರು ಅಭ್ಯರ್ಥಿಗಳು ಭಾಗವಹಿಸಿದ್ದಾರೆ.

ಪೊಲೀಸ್ ನೇಮಕಾತಿಯಲ್ಲಿ ಕರಾವಳಿ ಕರ್ನಾಟಕ ಸೇರಿದಂತೆ ಉತ್ತರ ಕರ್ನಾಟಕದ ಹಲವು ಭಾಗದಿಂದ ಅಭ್ಯರ್ಥಿಗಳು ಭಾಗವಹಿಸಿದ್ದಾರೆ. ಸಿದ್ಧಿ ಜನಾಂಗದ ಏಕೈಕ ಅಭ್ಯರ್ಥಿ ಈ ನೇಮಕಾತಿ ಯಲ್ಲಿ ಭಾಗವಹಿಸಿದ್ದು, ದೈಹಿಕ ಪರೀಕ್ಷೆಯ ಎಲ್ಲಾ ವಿಭಾಗದಲ್ಲಿ ತೇಗರ್ಡೆಯಾಗಿದ್ದಾನೆ. ಆದರೆ ಎತ್ತರದಲ್ಲಿ ಕೇವಲ 5 ಮಿ. ಮೀಟರ್‌ನಲ್ಲಿ ರಿಜೆಕ್ಟ್ ಆಗಿದ್ದಾನೆ. ಇದರಿಂದ ಈಗ ರಿಯಾಯಿತಿ ಕೊಡುವಂತೆ ರಾಜ್ಯ ಸರ್ಕಾರದ ಮೊರೆ ಹೋಗಿದ್ದಾನೆ.

ಸಿದ್ಧಸಿರಿ ಸೌಹಾರ್ದ ಸಹಕಾರಿ ನಿಯಮಿತ; ಕರ್ನಾಟಕದಲ್ಲಿ 135 ಹುದ್ದೆಗೆ ಅರ್ಜಿ ಆಹ್ವಾನ ಸಿದ್ಧಸಿರಿ ಸೌಹಾರ್ದ ಸಹಕಾರಿ ನಿಯಮಿತ; ಕರ್ನಾಟಕದಲ್ಲಿ 135 ಹುದ್ದೆಗೆ ಅರ್ಜಿ ಆಹ್ವಾನ

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಸಿದ್ದಿ ಸಮುದಾಯದ ಜೇಸುಸ್ ಪ್ರಾನ್ಸಿಸ್ ಬೈಗಿ ಕೇವಲ 5 ಮಿಲಿ ಮೀಟರ್ ಎತ್ತರದ ಅಂತರದಿಂದ ದೈಹಿಕ ಪರೀಕ್ಷೆಯಲ್ಲಿ ರಿಜೆಕ್ಟ್ ಆಗಿದ್ದಾನೆ. ಪೊಲೀಸ್ ಸಬ್ಇನ್ಸ್‌ಪೆಕ್ಟರ್ ನೇಮಕಾತಿ ಆಗಬೇಕಾದರೆ 168 ಮಿಲಿ ಮೀಟರ್ ಎತ್ತರ ಕಡ್ಡಾಯ. ಆದರೆ ಜೇಸುಸ್ ಪ್ರಾನ್ಸಿಸ್ ಬೈಗಿ ಎತ್ತರ 167.5 ಮಿಲಿ ಮೀಟರ್ ಇದೆ. ಹೀಗಾಗಿ ಪೊಲೀಸರು ದೈಹಿಕ ಪರೀಕ್ಷೆಯಲ್ಲಿ ಜೇಸುಸ್ ಪ್ರಾನ್ಸಿಸ್ ಬೈಗಿಯನ್ನು ರಿಜೆಕ್ಟ್ ಮಾಡಿದ್ದಾರೆ.

ಗ್ರಾಮ ಲೆಕ್ಕಿಗರ ನೇಮಕಾತಿಗೆ ಒಪ್ಪಿಗೆ; ಯಾವ ಜಿಲ್ಲೆಗೆ ಎಷ್ಟು ಹುದ್ದೆ? ಗ್ರಾಮ ಲೆಕ್ಕಿಗರ ನೇಮಕಾತಿಗೆ ಒಪ್ಪಿಗೆ; ಯಾವ ಜಿಲ್ಲೆಗೆ ಎಷ್ಟು ಹುದ್ದೆ?

PSI Recruitment Siddi Community Youth Demand For Hight Relaxation

ದೈಹಿಕ ಪರೀಕ್ಷೆಯ ಬೇರೆಲ್ಲಾ ವಿಭಾಗದಲ್ಲಿ ಜೇಸುಸ್ ಪ್ರಾನ್ಸಿಸ್ ಬೈಗಿ ಉತ್ತಮ ಪ್ರದರ್ಶನ ತೋರಿದ್ದಾನೆ. 1600 ಮೀಟರ್ ದೂರವನ್ನು ಕೇವಲ 6.20ನಿಮಿಷದಲ್ಲಿ ಪೂರ್ತಿಗೊಳಿಸಿದ್ದಾನೆ. ಉದ್ದ ಜಿಗಿತ, ಶಾಟ್ ಪುಟ್ ಎಸೆತದಲ್ಲೂ ಉತ್ತಮ ಪ್ರದರ್ಶನ ತೋರಿದ್ದಾನೆ. ಎದೆಯ ಅಳತೆಯಲ್ಲೂ ಪಾಸ್ ಆಗಿದ್ದಾನೆ. ಆದರೆ ಎತ್ತರಲ್ಲಿ ಕೇವಲ 5 ಮಿಲಿ ಮೀಟರ್ ಅಂತರದಲ್ಲಿ ರಿಜೆಕ್ಟ್ ಮಾಡಲಾಗಿದೆ.

ಬಿಎಂಆರ್‌ಸಿಎಲ್ ನೇಮಕಾತಿ; 37 ಹುದ್ದೆಗಳಿಗೆ ಅರ್ಜಿ ಹಾಕಿ ಬಿಎಂಆರ್‌ಸಿಎಲ್ ನೇಮಕಾತಿ; 37 ಹುದ್ದೆಗಳಿಗೆ ಅರ್ಜಿ ಹಾಕಿ

ಇದರಿಂದ ಜೇಸುಸ್ ಪ್ರಾನ್ಸಿಸ್ ಬೈಗಿ ಕುಗ್ಗಿ ಹೋಗಿದ್ದು, ರಿಯಾಯಿತಿ ನೀಡುವಂತೆ ಸರ್ಕಾರದ ಮೊರೆ ಹೋಗಿದ್ದಾನೆ. ಸಾಮಾನ್ಯವಾಗಿ ಸಿದ್ಧಿ ಜನಾಂಗದ ಯುವಕರು ಎತ್ತರದಲ್ಲಿ ಗಿಡ್ಡವೇ ಇರುವುದರಿಂದ ಪೊಲೀಸ್ ಪರೀಕ್ಷೆಯಲ್ಲಿ ತೊಡಕಾಗುತ್ತಿದೆ.

ಈ ನ್ಯೂನತೆಯನ್ನು ಸಮುದಾಯವೇ ಎದುರಿಸುತ್ತಿರೋದರಿಂದ ಪೊಲೀಸ್ ಹೆಡ್‌ ಕಾನ್ಸ್‌ಸ್ಟೇಬಲ್ ಹುದ್ದೆಯಲ್ಲಿ ಎತ್ತರದಲ್ಲಿ 10 ಮಿಲಿ ಮೀಟರ್ ತನಕ ರಿಯಾಯಿತಿ ನೀಡಲಾಗಿದೆ. ಆದರೆ ಪೊಲೀಸ್ ಸಬ್ಇನ್ಸ್ ಪೆಕ್ಟರ್ ಹುದ್ದೆಗೆ ಯಾವುದೇ ರಿಯಾಯಿತಿ ನೀಡಲಾಗಿಲ್ಲ. ಹೀಗಾಗಿ ಸಿದ್ಧಿ ಸಮುದಾಯಕ್ಕೆ ಪಿಎಸ್ಐ ಹುದ್ದೆಯಲ್ಲೂ ರಿಯಾಯಿತಿ ನೀಡಬೇಕೆಂದು ಜೇಸುಸ್ ಪ್ರಾನ್ಸಿಸ್ ಬೈಗಿ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದಾನೆ.

PSI Recruitment Siddi Community Youth Demand For Hight Relaxation

ಜೇಸುಸ್ ಪ್ರಾನ್ಸಿಸ್ ಬೈಗಿಗೆ ಈ ಪಿಎಸ್ಐ ಪರೀಕ್ಷೆ ಕೊನೆಯ ಅವಕಾಶವಾಗಿದೆ. 32ವರ್ಷದ ತನಕ ಪಿಎಸ್ಐ ಹುದ್ದೆಗೆ ಅವಕಾಶ ವಿದೆ. ಜೇಸುಸ್ ಪ್ರಾನ್ಸಿಸ್ ಬೈಗಿಗೆ ಸದ್ಯ 32 ವರ್ಷ ತುಂಬುತ್ತಿದ್ದು, ಕೊನೆಯ ಅವಕಾಶಕ್ಕಾಗಿ ಬಹಳಷ್ಟು ಶ್ರಮ ವಹಿಸಿದ್ದಾನೆ.

ಬಿಸಿಎ ಪದವೀಧರರಾಗಿರುವ ಜೇಸುಸ್ ಪ್ರಾನ್ಸಿಸ್ ಬೈಗಿ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು. ಆದರೆ ಪಿಎಸ್ಐ ಆಗಬೇಕೆಂದು ಕೆಲಸವನ್ನು ತೊರೆದು ಅಭ್ಯಾಸ ಮಾಡಿದ್ದರು. ಇದೀಗ ಎಲ್ಲದರಲ್ಲೂ ತೇರ್ಗಡೆಯಾಗಿ ಕೇವಲ 5 ಮಿಲಿ ಮೀಟರ್ ಎತ್ತರದ ಕೊರತೆಯಿಂದ ದೈಹಿಕ ಪರೀಕ್ಷೆಯಲ್ಲಿ ರಿಜೆಕ್ಟ್ ಆಗಿರೋದರಿಂದ ದಿಕ್ಕು ತೋಚದಂತಾಗಿದೆ.

English summary
Siddi community youth demand the Karnataka government to announce relaxation in height for PSI recruitment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X