• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪ್ರವಾಹ ಸೃಷ್ಟಿಸಿದ್ದ ಕರಾವಳಿ ನದಿಗಳು ಬತ್ತುತ್ತಿರುವುದಕ್ಕೆ ತಜ್ಞರು ಕೊಟ್ಟ ಉತ್ತರ ನೋಡಿ

|

ಮಂಗಳೂರು, ಸೆಪ್ಟೆಂಬರ್.17: ಕರಾವಳಿ ಭಾಗದ ನದಿಗಳಲ್ಲಿ ನೀರಿನ ಹರಿವು ದಿಢೀರ್ ಕುಸಿತವಾಗಿರುವುದಕ್ಕೆ ಕರಾವಳಿಯ ಜನರಲ್ಲಿ ಆತಂಕ ಮನೆಮಾಡಿದೆ. ದಕ್ಷಿಣ ಕನ್ನಡ ಮಾತ್ರವಲ್ಲದೇ ಉಡುಪಿ ಜಿಲ್ಲೆಯ ನದಿಗಳಲ್ಲೂ ನೀರಿನ ಹರಿವು ದಿಢೀರ್ ಕುಸಿದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿ , ಕುಮಾರಧಾರಾ, ಪಯಸ್ವಿನಿ, ಗುಂಡ್ಯ ಸೇರಿದಂತೆ ಇನ್ನಿತರ ಉಪನದಿಗಳಲ್ಲಿ ನೀರಿನ ಹರಿವು ಉಹಿಸಲು ಸಾಧ್ಯವಾಗದ ಮಟ್ಟದಲ್ಲಿ ಕುಸಿದಿದೆ. ಉಡುಪಿಗೆ ನೀರುಣಿಸುವ ಸ್ವರ್ಣ ನದಿ ಬತ್ತಲಾರಂಭಿಸಿದೆ. ಹೆಬ್ರಿ ಭಾಗದಲ್ಲಿ ಜನವರಿ ಹಾಗು ಫೆಬ್ರವರಿವರೆಗೂ ಭರ್ತಿಯಾಗಿ ಹರಿಯುತ್ತಿದ್ದ ಸೀತಾ ನದಿಯಲ್ಲೂ ಕಲ್ಲು ಬಂಡೆ, ತಳ ಗೋಚರಿಸತೊಡಗಿದೆ.

ಮಳೆಗಾಲ ಮುಗಿಯುವ ಮೊದಲೇ ನದಿಗಳು ಹೀಗೆ ಬತ್ತುತ್ತಾ ಹೋದರೆ ಬೇಸಿಗೆಯಲ್ಲಿ ಪರಿಸ್ಥಿತಿ ಹೇಗಿರಬಹುದೆಂದು ಕರಾವಳಿಯ ಜನರಿಗೆ ಊಹಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ. ಉಭಯ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಕೂಡ ಕುಸಿದಿದೆ.

ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ ಆಕಾರಣ ಈಬಾರಿ ಬೇಸಿಗೆಯಲ್ಲಿ ನೀರಿನ ಸಮಸ್ಯೆಯ ಅಗಲಾರದು ಎಂದೇ ಭಾವಿಸಲಾಗಿತ್ತು. ಆದರೆ ಈಗ ನದಿಗಳು ಬತ್ತುತ್ತಿರುವುದು ಕರಾವಳಿಗರಲ್ಲಿ ಆತಂಕ ಮೂಡಿಸಿದೆ.

ಪ್ರವಾಹ ಸೃಷ್ಟಿಸಿದ್ದ ನೇತ್ರಾವತಿ, ಕುಮಾರಧಾರ ಈಗ ಬತ್ತಲು ಕಾರಣ ಇದೇನಾ!

ಪ್ರಕೃತಿಯ ಮೇಲೆ ನಡೆದ ದೌರ್ಜನ್ಯದ ಫಲವೇನೋ ಎಂಬಂತೆ ಈ ಬಾರಿ ಧಾರಾಕಾರ ಮಳೆ ಸುರಿದಿತು. ಭಾರೀ ಮಳೆಗೆ ಗುಡ್ಡಗಳೇ ಕುಸಿದವು. ಕೆಲವೆಡೆ ಜಲಸ್ಫೋಟದಿಂದ ಆಸ್ತಿಪಾಸ್ತಿ ಸೇರಿದಂತೆ ಪ್ರಾಣಹಾನಿಗೂ ಈ ಬಾರಿಯ ಮಳೆ ಕಾರಣವಾಗಿತ್ತು.

ಈಗ ಮಳೆ ನಿಂತಿದೆ ಆದರೆ ನದಿಯಲ್ಲಿ ಪ್ರವಾಹವಾಗಿ ಹರಿದ ಮಳೆ ನೀರು ಎಲ್ಲಿ ಹೋಯಿತು? ಎಂಬುದೇ ಜನರಿಗೆ ಯಕ್ಷ ಪ್ರಶ್ನೆಯಾಗಿ ಕಾಡತೊಡಗಿದ್ದು, ಈ ಕುರಿತು ತಜ್ಞರನ್ನು ಒನ್ ಇಂಡಿಯಾ ಮಾತನಾಡಿಸಿದಾಗ ಅವರಿಂದ ಬಂದ ಉತ್ತರ ಹೀಗಿತ್ತು...

 ಕೃಷಿಗೆ ನೀರಿಲ್ಲದಿದ್ದರೆ ಗತಿ ಏನು?

ಕೃಷಿಗೆ ನೀರಿಲ್ಲದಿದ್ದರೆ ಗತಿ ಏನು?

ಸುಳ್ಯ, ಬೆಳ್ತಂಗಡಿ ಭಾಗದ ತೋಟಗಳ ಬದಿಯ ತೋಡಿನಲ್ಲಿ ನೀರಿಲ್ಲದೇ ಭಯಾನಕ ದೃಶ್ಯ ಎದುರಾಗಿದೆ. ಪರಿಸರದ ಚಿಕ್ಕ ಹೊಳೆಗಳಾದ ಗೌರಿ, ಮಡಾವು ಹೊಳೆಯಲ್ಲೂ ನೀರು ಬತ್ತತೊಡಗಿದೆ. ಮುಂದಿನ ದಿನಗಳಲ್ಲಿ ಕೃಷಿಗೆ ನೀರಿಲ್ಲದಿದ್ದರೆ ಗತಿ ಏನು ಎಂದು ಕೃಷಿಕರು ಈಗಲೇ ತಲೆ ಮೇಲೆ ಕೈಹೊತ್ತಿ ಕೂತಿದ್ದಾರೆ.

ಪಶ್ಚಿಮ ಘಟ್ಟದ ತಪ್ಪಲು ಪ್ರದೇಶವಾದ ಸುಳ್ಯ, ಬೆಳ್ತಂಗಡಿ, ಸಂಪಾಜೆ, ಜಾಲ್ಸೂರು, ಗುತ್ತಿಗಾರು ಸೇರಿದಂತೆ ಇತರೆ ಕಡೆಗಳಲ್ಲಿ ಅಂತರ್ಜಲ ಇಲಾಖೆ ಅಂಕಿಅಂಶಗಳ ಅಧ್ಯಯ ನಡೆಸಿದ್ದು ಅಂತರ್ಜಲ ಮಟ್ಟ ಕುಸಿಯುತ್ತಿರುವುದು ಧೃಡ ಪಟ್ಟಿದೆ. ಕೆಲವೆಡೆ ಅಂತರ್ಜಲ ಮಟ್ಟ 2.45 ಮೀಟರ್ ಗಳಷ್ಟು ಕೆಳಗೆ ಹೋಗಿದೆ.

ಬತ್ತುತ್ತಿವೆ ನದಿಗಳು, ಪ್ರವಾಹದ ಹೊಸ ಸಂಕಷ್ಟದಲ್ಲಿ ಕೇರಳ

 ನೀರನ್ನು ಸುಲಭವಾಗಿ ಹೀರಿಕೊಳ್ಳುವ ಕೆಂಪು ಮಣ್ಣು

ನೀರನ್ನು ಸುಲಭವಾಗಿ ಹೀರಿಕೊಳ್ಳುವ ಕೆಂಪು ಮಣ್ಣು

ನದಿಗಳಲ್ಲಿ ನೀರು ಬತ್ತಲೂ ಪಶ್ಚಿಮ ಘಟ್ಟ ಪ್ರದೇಶದಲ್ಲಿ ನದಿ ನೀರಿನ ಒರತೆ ಸ್ಥಗಿತ ಗೊಂಡಿರುವುದೇ ಕಾರಣ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಡೆದ ಅರಣ್ಯ ನಾಶ. ಅದರ ಪರಿಣಾಮದಿಂದ ಈ ಭಾರೀ ಉಂಟಾದ ಭಾರೀ ಭೂ ಕುಸಿತ, ಕರಾವಳಿಯ ನದಿಯಲ್ಲಿ ನೀರು ಬತ್ತಲು ಮೂಲ ಕಾರಣ ಎಂದು ಎನ್ ಐಟಿಕೆ ತಜ್ಞ ಪ್ರೊ.ಎಸ್ ಜಿ ಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಪಶ್ಚಿಮ ಘಟ್ಟ ಕೆಂಪು ಮಣ್ಣನ್ನು ಹೊಂದಿದೆ. ಕೆಂಪು ಮಣ್ಣು ನೀರನ್ನು ಸುಲಭವಾಗಿ ಹೀರಿಕೊಳ್ಳುತ್ತದೆ. ಆದರೆ ಈ ಭಾಗದಲ್ಲಿ ವ್ಯಾಪಕವಾಗಿ ನಡೆದ ಅರಣ್ಯ ನಾಶದಿಂದ ಮಣ್ಣು ನೀರನ್ನು ಹಿಡಿದಿಟ್ಟು ಕೊಳ್ಳುವ ಶಕ್ತಿಯನ್ನು ಕಳೆದುಕೊಂಡಿದೆ ಎಂದು ತಿಳಿಸಿದರು.

ರಾಜ್ಯಕ್ಕೆ ಆಗಮಿಸಿದ ಕೇಂದ್ರ ತಂಡ: ಎರಡು ದಿನ ಮಳೆ ಹಾನಿ ಪರಿಶೀಲನೆ

 ಭೂಮಿಯ ಒಳಪದರದ ಮಣ್ಣು ಒಣಗುತ್ತಿದೆ

ಭೂಮಿಯ ಒಳಪದರದ ಮಣ್ಣು ಒಣಗುತ್ತಿದೆ

ಅರಣ್ಯ ಮತ್ತು ಪಶ್ಚಿಮ ಘಟ್ಟ ಪ್ರದೇಶದಲ್ಲಿ ಹೇರಳವಾಗಿ ಮರ ಗಿಡಗಳಿದ್ದರೆ ಅದರ ಬೇರುಗಳು ಮಣ್ಣನ್ನು ಹಿಡಿದಿಟ್ಟು ಅಷ್ಟು ಬೇಗ ಇಂಗಿದ ಮಳೆ ನೀರನ್ನು ಹರಿದು ಹೋಗಲು ಬಿಡುವುದಿಲ್ಲ. ಆದರೆ ಅರಣ್ಯ ನಾಶದಿಂದ ಪಶ್ಚಿಮ ಘಟ್ಟದ ಮಣ್ಣು ನೀರನ್ನು ಹಿಡಿದಿಡುವ ಸಾಮರ್ಥ್ಯವನ್ನೇ ಕಳೆದುಕೊಂಡಿದೆ .

ಈ ಕಾರಣದಿಂದಾಗಿ ನದಿಗೆ ಹರಿದು ಬರುವ ನೀರಿನ ಒರತೆ ಸ್ಥಗಿತಗೊಂಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಾಮಾನ್ಯವಾಗಿ ಮಳೆಯಾದಾಗ ನದಿ, ಕೆರೆ, ಬಾವಿಗಳಲ್ಲಿ ನೀರು ಇಂಗಿ ಅಂತರ್ಜಲ ವೃದ್ಧಿಸುತ್ತದೆ. ಈಗಿನ ಸ್ಥಿತಿ ನೋಡುವಾಗ ಮಳೆ ಕಡಿಮೆಯಾದಂತೆ ಭೂಮಿಯ ಒಳಪದರದ ಮಣ್ಣು ಒಣಗುತ್ತಾ ಬಂದಿದೆ.

ಅಂತರ್ಜಲ ಮಟ್ಟ ಕುಗ್ಗಿ ದೊಡ್ಡಗ್ಯಾಪ್ ಸೃಷ್ಠಿಯಾಗಿದೆ ಎಂದು ಪ್ರೊ.ಎಸ್ ಜಿ ಮಯ್ಯ ತಿಳಿಸಿದ್ದಾರೆ.

 ವರ್ಷದ ಕೊನೆಯವರೆಗೂ ನೀರು!

ವರ್ಷದ ಕೊನೆಯವರೆಗೂ ನೀರು!

ಇನ್ನೊಂದೆಡೆ ಬೇಸಿಗೆ ಮುನ್ನವೇ ಬಿಸಿಲ ಝಳ ಕರಾವಳಿಯಲ್ಲಿ ಹೆಚ್ಚುತ್ತಿದೆ. ದಿನದಿಂದ ದಿನಕ್ಕೆ ತಾಪಮಾನ ಹೆಚ್ಚುತ್ತಿದೆ. ಮಾರ್ಚ್ ಕೊನೆಯವಾರದಾಚೆಗೆ ಸುಡು ಬಿಸಿಲು ಕಾಣಬೇಕಾದ ಕರಾವಳಿಯಲ್ಲಿ ಮಳೆ ಕಡಿಮೆಯಾಗಿ 20 ದಿನಗಳು ಉರುಳುವ ಮುನ್ನವೇ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಗೆ ಏರಿದೆ .

ಮಳೆ ನೀರು ಇಂಗುವುದು ಘಟ್ಟ ಪ್ರದೇಶಗಳಲ್ಲಿ. ಕರಾವಳಿಯಲ್ಲಿ ಅಲ್ಲ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಈ ಬಾರಿ ಸಂಭವಿಸಿದ ಭಾರೀ ಭೂಕುಸಿತದಿಂದಾಗಿ ಇಂಗಿದ ಮಳೆ ನೀರು ಬಹಳ ಬೇಗನೆ ಹರಿದು ಹೋಗಿದೆ. ಮಳೆಗಾಲದಲ್ಲಿ ನದಿಗಳಲ್ಲಿ ಹರಿಯುವ ನೀರನ್ನು ಅಲ್ಲಲ್ಲಿ ಚೆಕ್ ಡ್ಯಾಂ ಗಳನ್ನು ನಿರ್ಮಿಸಿ ಹಿಡಿದಿಟ್ಟುಕೊಳ್ಳುವ ಯೋಜನೆ ರೂಪಿಸಬೇಕಾಗಿತ್ತು.

ಅಂತಹ ಯತ್ನಗಳು ನಡೆದಿದ್ದರೆ ವರ್ಷದ ಕೊನೆಯವರೆಗೂ ನೀರು ದೊರಕುತ್ತಿತ್ತು.

 ನೀರಿನ ಸಮಸ್ಯೆ ಎದುರಿಸಬೇಕಾಗುತ್ತದೆ

ನೀರಿನ ಸಮಸ್ಯೆ ಎದುರಿಸಬೇಕಾಗುತ್ತದೆ

ಈಗಲೇ ನದಿಯಲ್ಲಿ ನೀರಿನ ಹರಿವು ಕುಸಿದಿರುವ ಕಾರಣ ಮುಂಬರುವ ದಿನಗಳಲ್ಲಿ ನೀರಿನ ತಾತ್ವರ ಎದುರಾಗುವುದು ಖಂಡಿತ ಎಂದು ಪ್ರೊ.ಮಯ್ಯ ಅಭಿಪ್ರಾಯ ಪಟ್ಟಿದ್ದಾರೆ. ಅದರಲ್ಲೂ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶವಾದ ಬೆಳ್ತಂಗಡಿ, ಸುಳ್ಯ, ಭಾಗದ ಜನರು ನೀರಿಗಾಗಿ ಅತಿ ಹೆಚ್ಚು ಸಮಸ್ಯೆ ಎದುರಿಸಲಿದ್ದಾರೆ ಎಂದು ಅವರು ಹೇಳಿದರು.

English summary
Three weeks after the devastating flood in Coastal districts witnessing the strange phenomenon. After flood now Nathravathi and Kumaradhara, Payasvini, Sitha, Svarna river dry up. Here is the details and main reason for this strange phenomenon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X