ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾರಾಟವಾಗಿದ್ದ ಮಗು ಅಮ್ಮನ ಮಡಿಲು ಸೇರಿತು

|
Google Oneindia Kannada News

ಮಂಗಳೂರು, ನ.13 : ಮಂಗಳೂರಿನಲ್ಲಿ ಎರಡು ವರ್ಷದ ಮಗುವನ್ನು ಅಪಹರಿಸಿ ಮಾರಾಟ ಮಾಡಿದ ಪ್ರಕರಣ ಸುಖಾಂತ್ಯಗೊಂಡಿದ್ದು, ಮಗು ಅಮ್ಮನ ಮಡಿಲು ಸೇರಿದೆ. ಮಗುವನ್ನು ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಮಗುವನ್ನು ಅಪಹರಿಸಿ 1.50 ಲಕ್ಷ ರೂ.ಗಳಿಗೆ ಮಾರಾಟ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಫರಿತಾ ಬೇಗಂ, ಮಣಿ ಹಾಗೂ ವಿನೋದ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಹೊರವಲಯದ ಮಣಿ ಎಂಬಾತನ ಮನೆಯಲ್ಲಿ ಮಗುವನ್ನು ವಶಕ್ಕೆ ಪಡೆದ ಪೊಲೀಸರು, ಹೆತ್ತವರಿಗೆ ಒಪ್ಪಿಸಿದ್ದಾರೆ.

Child

ಘಟನೆಯ ವಿವರ : ತೆನ್ನೂರು ನಿವಾಸಿ ಹಝ್ರಯ್ ಶೈನಾ ಅವರ ಎರಡು ವರ್ಷದ ಮಗು ನ.4ರಂದು ಮನೆಯ ಹೊರಗಡೆ ಆಟವಾಡುವ ಸಂದರ್ಭದಲ್ಲಿ ನಾಪತ್ತೆಯಾಗಿತ್ತು. ಮಂಗಳೂರು ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ದಂಪತಿಗಳು ದೂರು ನೀಡಿದ್ದರು. [ಬಡತನದಿಂದಾಗಿ ಮಗುವನ್ನು ಮಾರಿದ ತಾಯಿ]

ತನಿಖೆ ಆರಂಭಿಸಿದ ಪೊಲೀಸರಿಗೆ ಮಗು ನಾಪತ್ತೆಯಾದ ದಿನವೇ ಪಕ್ಕದ ಮನೆಯ ನಿವಾಸಿ ಫರಿತಾ ಬೇಗಂ ಅಲಿಯಾಸ್ ಜೆನ್ನಿಫರ್ ಕೂಡಾ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ದೊರಕಿತು. ಪತಿ ಗಲೀಲ್ ಅಹ್ಮದ್‍ನಿಂದ ವಿಚ್ಛೇದನ ಪಡೆದುಕೊಂಡಿದ್ದ ಜೆನ್ನಿಫರ್, ದೆಹಲಿ ನಿವಾಸಿ ವಿನೋದ್ ಎಂಬಾತನನ್ನು ಮದುವೆ ಮಾಡಿಕೊಂಡಿದ್ದಳು.

ವಿನೋದ್ ಅವರ ಸಹೋದರ ಮಣಿ ಎಂಬಾತ ಸಿನಿಮಾ, ಧಾರವಾಹಿಗಳಿಗೆ ಮಕ್ಕಳನ್ನು ಒದಗಿಸುವ ಕೆಲಸ ಮಾಡುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಮಣಿ ಮನೆಯ ಮೇಲೆ ದಾಳಿ ಮಾಡಿದಾಗ ಮಗು ಅಲ್ಲಿ ಪತ್ತೆಯಾಗಿದೆ. [ಬೆಳಗಾವಿ ಮಗು ರಾಜಸ್ಥಾನದಲ್ಲಿ ಮಾರಾಟ]

ಮಣಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಜೆನ್ನೀಫರ್ ಒಂದೂವರೆ ಲಕ್ಷ ರೂ.ಗಳಿಗೆ ಮಗುವನ್ನು ಮಾರಾಟ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಪ್ರಕರಣದ ಸಂಬಂಧ ಜೆನ್ನಿಫರ್, ಆಕೆಯ ಪತಿ ವಿನೋದ್ ಮತ್ತು ಮಣಿ ಪೊಲೀಸರು ಬಂಧಿಸಿದ್ದಾರೆ. [ಚಿತ್ರ : ಐಸಾಕ್ ರಿಚರ್ಡ್]

English summary
The 10-day travails of a couple in search of their missing two-year-old son ended on Wednesday in Mangaluru, Police cracked the case of missing of child and arrested three accused who sold child for 1.5 lakhs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X