ಕೋಟ್ಯಾಂತರ ರೂ.ಮೌಲ್ಯದ ಮರಳು ವಶಪಡಿಸಿಕೊಂಡ ಪೊಲೀಸರು
ಮಂಗಳೂರು, ನವೆಂಬರ್. 27: ಅಕ್ರಮ ಮರಳು ಸಾಗಾಟ ಜಾಲವನ್ನು ಭೇದಿಸಿದ ಮಂಗಳೂರು ಪೊಲೀಸರು ಕೋಟ್ಯಾಂತರ ರೂಪಾಯಿ ಮೌಲ್ಯದ ಮರಳು ಹಾಗೂ ಸಾಗಾಟ ವಾಹನವನ್ನು ವಶಪಡಿಕೊಂಡಿದ್ದಾರೆ. ಮಂಗಳೂರಿನಿಂದ ಅಕ್ರಮವಾಗಿ ಕೇರಳಕ್ಕೆ ಮರಳನ್ನು ಸಾಗಾಟ ಮಾಡುತ್ತಿದ್ದ ಜಾಲವನ್ನು ಕೊಣಾಜೆ ಠಾಣಾ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಮರಳು ಸಹಿತ ಆರು ಲಾರಿಗಳನ್ನು ವಶಪಡಿಸಿಕೊಂಡಿದ್ದು, ಕಳೆದ ಎರಡು ದಿನಗಳಿಂದ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡ ತಡರಾತ್ರಿ ಮರಳನ್ನು ಸಾಗಾಟ ಮಾಡುತ್ತಿದ್ದ ಲಾರಿಗಳನ್ನು ತಡೆಹಿಡಿದಿದ್ದಾರೆ.

ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತಲಪಾಡಿ ಟೋಲ್ ಗೇಟ್ ಬಳಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಆರು ಲಾರಿಗಳನ್ನು ಕೊಣಾಜೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಪೈಕಿ ನಾಲ್ಕು ಮರಳು ತುಂಬಿದ್ದ 12 ಚಕ್ರಗಳ ಲಾರಿಗಳಾಗಿದ್ದರೆ, ಒಂದು ಮರಳು ತುಂಬಿದ್ದ ಟಿಪ್ಪರ್ ಹಾಗೂ ಮರಳು ಖಾಲಿ ಮಾಡಿ ಬಂದಿದ್ದ ಟಿಪ್ಪರ್ ಸೇರಿದೆ.
ವಶಪಡಿಸಿಕೊಂಡಿರುವ ಮರಳು ಹಾಗೂ ಲಾರಿಗಳ ಒಟ್ಟು ವೌಲ್ಯ 1.25 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.












Click it and Unblock the Notifications