• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಿಎಫ್ಐ ಮೇಲಿನ ದಾಳಿ ಮುಸ್ಲಿಂ ಸಮಾಜದ ಮೇಲಿನ‌ ದಾಳಿಯೇ ? ಯುಟಿ ಖಾದರ್ ಹೇಳಿದ್ದೇನು?

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 27: ಪಿಎಫ್ಐ ಮೇಲಿನ ಪೊಲೀಸ್‌ ದಾಳಿ ಮುಸ್ಲಿಂ ಸಮಾಜದ ಮೇಲಿನ ದಾಳಿಯಾಗುವುದಿಲ್ಲ ಎಂದು ವಿಧಾನಸಭಾ ವಿಪಕ್ಷ ಉಪನಾಯಕ ಯುಟಿ ಖಾದರ್ ಹೇಳಿದ್ದಾರೆ.

ಮಂಗಳೂರಿನ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು "ಪಿಎಫ್ಐ ನಾಯಕರ ಮೇಲೆ ಪೊಲೀಸರ ದಾಳಿ ಇದು ಇಡೀ ಮುಸ್ಲಿಂ ಸಮಾಜದ ಮೇಲಿನ ದಾಳಿಯಲ್ಲ. ಪಿಎಫ್ಐ ಮೇಲಿನ ದಾಳಿಯ ವಿರುದ್ಧ ರಾಜ್ಯದ, ಜಿಲ್ಲೆಗಳ ಧಾರ್ಮಿಕ ಗುರುಗಳು, ಉಲೇಮಾಗಳು, ಸಂಘಟನೆಗಳು ಯಾರೂ ಅಪಸ್ವರ ಎತ್ತಿಲ್ಲ. ಮುಸ್ಲಿಂ ಧರ್ಮದ ಸಹಿತ ಎಲ್ಲಾ ಧರ್ಮಗಳು ನ್ಯಾಯಯುತ ತನಿಖೆಗೆ ಎಲ್ಲರೂ ಬೆಂಬಲ ಕೊಡುತ್ತಾರೆ" ಎಂದು ಹೇಳಿದ್ದಾರೆ.

Breaking: ಕೋಲಾರ, ಚಿತ್ರದುರ್ಗದಲ್ಲೂ PFI ಸಂಘಟನೆ ಮುಖಂಡರ ಬಂಧನBreaking: ಕೋಲಾರ, ಚಿತ್ರದುರ್ಗದಲ್ಲೂ PFI ಸಂಘಟನೆ ಮುಖಂಡರ ಬಂಧನ

ಈ ದಾಳಿ ಮುಸ್ಲಿಂ ಸಮುದಾಯದ ಮೇಲಿನ ದಾಳಿಯಾಗಿದೆ ಎಂಬ ಮಾತುಗಳು ಕೇಳಿ‌ಬರುತ್ತಿದೆ ಎಂಬ ಮಾಧ್ಯದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಯಾವ ಸಂಘಟನೆಗಳನ್ನು ಬ್ಯಾನ್ ಮಾಡಬೇಕು, ಇನ್ನೇನು ಮಾಡಬೇಕೆಂಬುದು ತನಿಖೆಯ ಆಧಾರದಲ್ಲಿ ತಿಳಿಯುವಂತದ್ದು. ಸಮಾಜದಲ್ಲಿ ಅಶಾಂತಿ ಹುಟ್ಟುವ, ದ್ವೇಷ ಆಧಾರಿತ ಕೃತ್ಯ ನಡೆಯುತ್ತಿದ್ದರೆ ಎಲ್ಲ ಸಂಘಟನೆಗಳಿಗೆ ಸಮಾನವಾದ ಕಾನೂನು ತನ್ನಿ. ಇದರಿಂದ ದೇಶದಲ್ಲಿ ನ್ಯಾಯ, ತಾರತಮ್ಯ ರಹಿತವಾದ ಸಮಾಜ ಅಥವಾ ಆಡಳಿತಕ್ಕೆ ಎಲ್ಲರೂ ಬೆಂಬಲ ಕೊಡುತ್ತಾರೆ‌ ಎಂದು ಹೇಳಿದರು.

 ಕಾನೂನು ಕೈಗೆತ್ತಿಕೊಳ್ಳುವವರನ್ನು ಹದ್ದುಬಸ್ತಿನಲ್ಲಿಡಬೇಕು

ಕಾನೂನು ಕೈಗೆತ್ತಿಕೊಳ್ಳುವವರನ್ನು ಹದ್ದುಬಸ್ತಿನಲ್ಲಿಡಬೇಕು

ಸಮಾಜದಲ್ಲಿ ಅಶಾಂತಿ, ದ್ವೇಷದ ವಾತಾವರಣ, ಹಲ್ಲೆ, ಕೊಲೆಯ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದರೆ ಅಂತಹ ಘಟನೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಎಲ್ಲರ ಸಮ್ಮತ ಇರುತ್ತದೆ. ಆದರೆ ಶಾಂತಿ, ಸುವ್ಯವಸ್ಥೆಯ ವಾತಾವರಣ ನಿರ್ಮಾಣ ಮಾಡುವುದು, ಕಾನೂನು ಕೈಗೆತ್ತಿಕೊಳ್ಳುವವರನ್ನು ಹದ್ದುಬಸ್ತಿನಲ್ಲಿಡೋದು ಸರಕಾರದ ಜವಾಬ್ದಾರಿಯಾಗಿದೆ. ಅಲ್ಲದೆ ಯಾವುದೇ ತಾರತಮ್ಯವಿಲ್ಲದೆ ಎಲ್ಲರಿಗೂ ಒಂದೇ ರೀತಿಯ ನ್ಯಾಯ ಕೊಡುವ ಕಾರ್ಯ ಸರಕಾರದಿಂದ ಆಗಬೇಕು. ಮತ್ತು ತಮ್ಮ ಕಾರ್ಯ ರಚನೆಯು ಒಂದೇ ರೀತಿಯಾಗಿದ್ದಲ್ಲಿ ಎಲ್ಲರೂ ಬೆಂಬಲ ಕೊಡುತ್ತಾರೆ. ಯಾರಿಗೂ ಅನ್ಯಾಯವಾಗಬಾರದು. ನೈಜ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಜರುಗಿಸಲಿ. ಆದರೆ ನಿರಪರಾಧಿಗಳಿಗೆ ತೊಂದರೆಯಾಗಬಾರದು ಎಂದು ಯುಟಿ ಖಾದರ್ ಹೇಳಿದ್ದಾರೆ.

ಭಾರತದ 30ಕ್ಕೂ ಹೆಚ್ಚು ಕಡೆಗಳಲ್ಲಿ ಪಿಎಫ್ಐ ಸದಸ್ಯರ ಮೇಲೆ ಎನ್ಐಎ ದಾಳಿಭಾರತದ 30ಕ್ಕೂ ಹೆಚ್ಚು ಕಡೆಗಳಲ್ಲಿ ಪಿಎಫ್ಐ ಸದಸ್ಯರ ಮೇಲೆ ಎನ್ಐಎ ದಾಳಿ

 ಎಲ್ಲರಿಗೂ ಒಂದೇ ರೀತಿಯ ನ್ಯಾಯ ಕೊಡಬೇಕು

ಎಲ್ಲರಿಗೂ ಒಂದೇ ರೀತಿಯ ನ್ಯಾಯ ಕೊಡಬೇಕು

ಸಮಾಜದಲ್ಲಿ ಅಶಾಂತಿ ಮತ್ತು ದ್ವೇಷ ಸೃಷ್ಟಿಸಿದ್ರೆ ಕ್ರಮ ಆಗಬೇಕು. ಅಂತಹ ಯಾವುದೇ ಸಂಘಟನೆ ವಿರುದ್ದ ಕ್ರಮಕ್ಕೆ ಎಲ್ಲಾ ಧರ್ಮದ ಸಹಮತ ಇದೆ. ಕಾನೂನು ಕೈಗೆತ್ತಿಕೊಳ್ಳುವವರನ್ನ ಹದ್ದುಬಸ್ತಿನಲ್ಲಿಡುವುದು ಸರಕಾರದ ಜವಾಬ್ದಾರಿ. ಶಾಂತಿ ಸೌಹಾರ್ದದ ವಾತಾವರಣ ಸರಕಾರ ನಿರ್ಮಾಣ ಮಾಡಬೇಕು. ಯಾವುದೇ ತಾರತಮ್ಯ ಮಾಡದೇ ಸರಕಾರ ಕ್ರಮ ತೆಗೆದುಕೊಳ್ಳಲಿ. ಎಲ್ಲರಿಗೂ ಒಂದೇ ರೀತಿಯ ನ್ಯಾಯ ಕೊಟ್ಟರೆ ಎಲ್ಲರೂ ಬೆಂಬಲಿಸ್ತಾರೆ. ನಿರಪರಾಧಿಗಳಿಗೆ‌ ಅನ್ಯಾಯ ಆಗದಿದ್ದರೆ ಸರಕಾರವನ್ನ ಎಲ್ಲರೂ ಬೆಂಬಲಿಸುತ್ತಾರೆ ಎಂದು ಯುಟಿ ಖಾದರ್ ಹೇಳಿದ್ದಾರೆ.

 ಗಲಭೆ ಸೃಷ್ಟಿಸುವ ಗಲಭೆಯಾಗಬಾರದು

ಗಲಭೆ ಸೃಷ್ಟಿಸುವ ಗಲಭೆಯಾಗಬಾರದು

ನಮ್ಮ ರಾಜ್ಯದಲ್ಲಿ ಧಾರ್ಮಿಕ ಗುರುಗಳು, ಉಲೇಮಾಗಳು ಈ ದಾಳಿ ಬಗ್ಗೆ ಅಪಸ್ವರ ಎತ್ತಿಲ್ಲ. ಯಾವುದೇ ಧಾರ್ಮಿಕ ಗುರುಗಳು ಈ ದಾಳಿ ಬಗ್ಗೆ ಅಪಸ್ವರ ಎತ್ತಿದ್ದಾರಾ? ನಮ್ಮ ಧರ್ಮದ ಜೊತೆ ಎಲ್ಲಾ ಧರ್ಮ ನ್ಯಾಯಯುತ ತನಿಖೆಗೆ‌ ಬೆಂಬಲ ಕೊಡುತ್ತದೆ. ತಾರತಮ್ಯ ಮತ್ತು ಅನ್ಯಾಯ ಯಾರಿಗೂ ಆಗದಂತೆ ಸರಕಾರ ನೋಡಿಕೊಳ್ಳಬೇಕು. ಯಾವ ಸಂಸ್ಥೆ ಬ್ಯಾನ್ ಮಾಡಬೇಕು ಎನ್ನುವುದು ತನಿಖೆಯಲ್ಲಿ ಗೊತ್ತಾಗುತ್ತದೆ. ಆದರೆ ಎಲ್ಲಾ ‌ಸಂಘಟನೆಗೆ ಸಮಾನತೆಯ ಕಾನೂನು ತನ್ನಿ. ದ್ವೇಷಾಧರಿತ ಮತ್ತು ಗಲಭೆ ಸೃಷ್ಟಿಸುವ ಕೆಲಸ ಆಗಿದ್ದರೆ ಎಲ್ಲಾ ಸಂಘಟನೆಗಳಿಗೂ ಒಂದೇ ಕಾನೂನು ತನ್ನಿ ಎಂದು ಮಂಗಳೂರಿನಲ್ಲಿ ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಹೇಳಿದ್ದಾರೆ.

 ರಾಜ್ಯಾದ್ಯಂತ 70ಕ್ಕೂ ಹೆಚ್ಚು ಮಂದಿ ವಶಕ್ಕೆ

ರಾಜ್ಯಾದ್ಯಂತ 70ಕ್ಕೂ ಹೆಚ್ಚು ಮಂದಿ ವಶಕ್ಕೆ

ಮಂಗಳವಾರ ಪಾಪುಲರ್ ಪ್ರಂಟ್ ಆಫ್ ಇಂಡಿಯಾ ಕಚೇರಿ ಹಾಗೂ ಕಾರ್ಯಕರ್ತರ ಮನೆಗಳಿಗೆ ದಾಳಿ ಮಾಡಿರುವ ಆಯಾ ಜಿಲ್ಲಾ ಪೊಲೀಸರು 70ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆದರೆ, ಕೆಲವರನ್ನು ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಂಧಿತರ ಮೇಲೆ ಉಗ್ರವಾದ, ಭಯೋತ್ಪಾದಕ ಚಟುವಟಿಕೆಗಳಿಗೆ ಧನಸಹಾಯ, ಶಸ್ತ್ರಾಸ್ತ್ರ ತರಬೇತಿ ನೀಡಲು ಶಿಬಿರಗಳ ಆಯೋಜನೆ, ಉಗ್ರವಾದ ಚಟುವಟಿಕೆಗಳಿಗೆ ಪ್ರೆರೇಪಣೆ, ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿಕೊಳ್ಳುವುದು ಸೇರಿದಂತೆ ಹಲವಾರ ಆರೋಪಗಳನ್ನು ಮಾಡಲಾಗಿದೆ.

English summary
Deputy Leader of Opposition in Assembly UT Khader said that the police attack on PFI is not an attack on Muslim society, Religious gurus, Ulemas or any muslim organizations of the state have not raised any voice against this raide on PFI.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X