• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಗಳೂರು: ಮೊಬೈಲ್ ಕದ್ದ ಒಂದೂವರೆ ಗಂಟೆಯಲ್ಲಿ ಕಳ್ಳತನ ಬಂಧಿಸಿದ ಪೊಲೀಸರು

By ಮಂಗಳೂರು ಪ್ರತಿನಿಧಿ
|

ಮಂಗಳೂರು, ಸೆಪ್ಟೆಂಬರ್ 27: ಮೊಬೈಲ್‌ ಕದ್ದ ಕೇವಲ ಒಂದೂವರೆ ಗಂಟೆಯಲ್ಲಿ ಮಂಗಳೂರು ನಗರದ ಪೊಲೀಸರು ಕಳ್ಳತನ ಪ್ರಕರಣವನ್ನು ಬೇಧಿಸಿದ್ದು, ಕಳ್ಳರಿಂದ 11 ಮೊಬೈಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕರಂಗಲ್ಪಾಡಿಯಲ್ಲಿರುವ ನಿರ್ಮಾಣ ಹಂತದಲ್ಲಿರುವ ಕಟ್ಟಡ ಕಾರ್ಮಿಕರು ಮಧ್ಯಾಹ್ನದ ಸಂದರ್ಭ ಮಲಗಿದ್ದಾಗ ಮೊಬೈಲ್‌ಗಳನ್ನು ಕಳವು ಮಾಡಿದ್ದು, ಈ ಬಗ್ಗೆ ಕಾರ್ಮಿಕರು ಶನಿವಾರ ಸಂಜೆ 5 ಗಂಟೆಗೆ ಪೊಲೀಸರಿಗೆ ದೂರು ನೀಡಿದ್ದರು.

ಮಂಗಳೂರು ಉತ್ತರ ಠಾಣೆಯ ಇನ್ಸ್ ಪೆಕ್ಟರ್ ಗೋವಿಂದರಾಜು.ಬಿ, ಸಬ್‌ ಇನ್ಸ್ ಪೆಕ್ಟರ್ ಗಳಾದ ಗುರುಕಾಂತಿ ಹಾಗೂ ನಾಗರಾಜ್‌ ಮುಖ್ಯ ಪೇದೆಗಳಾದ ಭರತ್‌ ಹಾಗೂ ವಾಲೆಂಟೈನ್ ಡಿಸೋಜಾ ಹಾಗೂ ತಿಪ್ಪದೇರಪ್ಪ ಅವರನ್ನೊಳಗೊಂಡ ಪೊಲೀಸ್‌ ತಂಡವು ಕಾರ್ಯಪ್ರವೃತ್ತವಾಗಿದ್ದು, ಸಂಜೆ ಸುಮಾರು 6.45 ಕ್ಕೆ ಮಂಗಳೂರು ನಗರದ ಲಾಡ್ಜ್ ನಲ್ಲಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬೆಂಗ್ರೆ ನಿವಾಸಿಗಳಾದ ಮೊಹಮ್ಮದ್ ಸುಹೈಲ್, ಮೊಹಮ್ಮದ್ ಸರ್ಫ್ರಾಜ್, ಮೊಹಮ್ಮದ್ ಸಫ್ವಾನ್ ಬಂಧಿತ ಆರೋಪಿಗಳಾಗಿದ್ದು, ಮೊಹಮ್ಮದ್ ಸಫ್ವಾನ್ ವಿರುದ್ದ ಈಗಾಗಲೇ ಎರಡು ಕಳ್ಳತನದ ಪ್ರಕರಣಗಳು ದಾಖಲಾಗಿವೆ.

ಆರೋಪಿಗಳಿಂದ ಎರಡು ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಕ್ಷಿಪ್ರ ಕಾರ್ಯಚರಣೆ ನಡೆಸಿರುವ ಬಗ್ಗೆ ಪೊಲೀಸರನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಶ್ಲಾಘಿಸಿದ್ದಾರೆ.

English summary
Mangaluru city police have cracked a theft case and seized 11 mobile phones from thieves.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X