• search
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾಂಗ್ರೆಸ್-ಜೆಡಿಎಸ್‌ನದ್ದು ವಂಶೋದಯ, ನಮ್ಮದು ಅಂತ್ಯೋದಯ: ಮೋದಿ

|

ಮಂಗಳೂರು, ಏಪ್ರಿಲ್ 13: ಕಾಂಗ್ರೆಸ್ ಮತ್ತು ಜೆಡಿಎಸ್ ಒಂದು ಕುಟುಂಬಕ್ಕಾಗಿ ಸಮರ್ಪಿತವಾದ ಪಕ್ಷ , ಅವರ ಗುರಿ ಕೇವಲ ಕುಟುಂಬದ ಅಭಿವೃದ್ಧಿಯಷ್ಟೇ. ಅವರದ್ದು ಕೇವಲ ವಂಶೋದಯ ಮಾತ್ರ ಎಂದು ಪ್ರಧಾನಿ ಮೋದಿ ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಂಗಳೂರಿನಲ್ಲಿ ಬಿಜೆಪಿ ಬೃಹತ್ ವಿಜಯ ಸಂಕಲ್ಪ ಸಮಾವೇಶದಲ್ಲಿ ಅವರು ಮಾತನಾಡಿದರು.

ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅಬ್ಬರಿಸಿದ್ದಾರೆ. ಮೋದಿ ಸುನಾಮಿಯಿಂದ ಮಂಗಳೂರು ಅಕ್ಷರಶಃ ಕೇಸರಿ ಸಾಗರವಾಗಿ ಮಾರ್ಪಟ್ಟಿತ್ತು. ದಾಖಲೆ ಸಂಖ್ಯೆಯಲ್ಲಿ ಜನ ಸೇರಿದ್ದರು. ಸಂಜೆ‌4 ಗಂಟೆ ವೇಳೆ ಕೇಂದ್ರ ಮೈದಾನದ ವೇದಿಕೆಗೆ ಆಗಮಿಸಿದ ಮೋದಿ,ಎಂದಿನಂತೆ ಮಾತಿನ‌ ಬಾಣದಿಂದ ಪ್ರತಿಪಕ್ಷಗಳಿಗೆ ತಿವಿದಿದ್ದಾರೆ.ಕಾಂಗ್ರೆಸ್ ಹೆಸರೆತ್ತದೆ ಮಾತಿನ ಬಾಣ ಬಿಟ್ಟ ಮೋದಿ,ವಂಶೋದಯದಿಂದ ಅನ್ಯಾಯ ಸೃಷ್ಠಿಯಾಗುತ್ತದೆ. ನಮ್ಮ ಅಂತ್ಯೋದಯದಿಂದ ಪಾರದರ್ಶಕತೆ ಸೃಷ್ಠಿಯಾಗುತ್ತದೆ. ವಂಶೋದಯದಿಂದ ಬಡತನ ಕಡಿಮೆ ಮಾಡುವ ಘೋಷಣೆ ಮಾತ್ರ ಆಗಿದೆ.ನಾವು ಬಡತನವನ್ನು ಕಡಿಮೆ ಮಾಡಿದ್ದೇವೆ ಎಂದು ಟೀಕಿಸಿದರು.

ಕಾಂಗ್ರೆಸ್- ಜೆಡಿಎಸ್ ನದ್ದು ಕುಟುಂಬ ರಾಜಕಾರಣ. ಬಿಜೆಪಿಯದ್ದು ರಾಷ್ಟ್ರವಾದದ ರಾಜಕಾರಣ . ಅವರದ್ದು ಕೇವಲ ವಂಶೋದಯ , ನಮ್ಮದು ಅಂತ್ಯೋದಯ . ಬಡವರ ಶ್ರೇಯೋಭಿವೃದ್ಧಿಯೇ ನಮ್ಮ ಅಂತ್ಯೋದಯ . ನಮ್ಮ ಅಂತ್ಯೋದಯ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ . ಆದರೆ ಅವರ ಗುರಿ ಕೇವಲ ಕುಟುಂಬದ ಅಭಿವೃದ್ಧಿಯಷ್ಟೇ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ಕಿಡಿಕಾರಿದರು.

'ನಮ್ಮದು ರಾಷ್ಟ್ರವಾದ, ಅವರದ್ದು ಕುಟುಂಬ ವಾದ'

'ನಮ್ಮದು ರಾಷ್ಟ್ರವಾದ, ಅವರದ್ದು ಕುಟುಂಬ ವಾದ'

ಕಾಂಗ್ರಸ್- ಜೆಡಿಎಸ್ ಗೆ ಕೇವಲ ಕುಟುಂಬ ಒಂದೇ ಪ್ರೇರಣೆ ಅದೇ ಅವರ ಉದ್ದೇಶ ಕೂಡ , ಆದರೆ ನಮ್ಮ ಪ್ರೇರಣೆ ರಾಷ್ಟ್ರವಾದ. ರಾಜ್ಯ ಸರಕಾರದಲ್ಲಿ ಭ್ರಷ್ಟಾಚಾರ, ಅನ್ಯಾಯ ಹೆಚ್ಚಾಗಿದೆ. ಬಿಜೆಪಿ ಅಂತ್ಯೋದಯದಲ್ಲಿ ಒಬ್ಬ ಚಾಯ್ ವಾಲಾ ಕೂಡಾ ಪ್ರಧಾನಿಯಾಗುತ್ತಾನೆ ಎಂದು ಹೇಳಿದ ಅವರು ರಾಜ್ಯ ಸರಕಾರ ತುಷ್ಟೀಕರಣ ನೀತಿ ಮತ್ತು ಬಿಜೆಪಿ ಯದ್ದು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಈ ವ್ಯತ್ಯಾಸ ನಿಮಗೆ ಗೊತ್ತಾಗುತ್ತಿದೆಯಾ ? ಎಂದು ಅವರು ಪ್ರಶ್ನಿಸಿದರು .

ಸಾಮಾನ್ಯರಿಗೆ ಪದ್ಮಶ್ರೀ ಕೊಟ್ಟಿದ್ದೇವೆ ನಾವು:ಮೋದಿ

ಸಾಮಾನ್ಯರಿಗೆ ಪದ್ಮಶ್ರೀ ಕೊಟ್ಟಿದ್ದೇವೆ ನಾವು:ಮೋದಿ

ಸಾಲುಮರ ತಿಮ್ಮಕ್ಕ ಪದ್ಮಶ್ರೀ ಪಡೆದುಕೊಂಡಾಗ ಮನ ತುಂಬಿ ಬಂತು. ಎಲೆ ಮರೆಯ ಕಾಯಿ ಯಂತಿದ್ದ ಸಾಲು ಮರ ತಿಮ್ಮಕ್ಕ ನಂತಹ ಸಾಮಾನ್ಯ ಜನರನ್ನು ಗುರುತಿಸಿ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ. ಇದು ಬಿಜೆಪಿ ಸರಕಾರದಲ್ಲಿ ಸಾಧ್ಯವಾಗಿದೆ. ರಾಮನಾಥ ಪುರಂ ನಿಂದ ಬಂದೆ,ಅಲ್ಲಿಮಾಜಿ ರಾಷ್ಟ್ರಪತಿ ದಿವಂಗತ ಡಾ ಕಲಾಂ ಅವರ ಸ್ಮಾರಕ‌ ನಿರ್ಮಿಸಿದ್ದೇವೆ. ಈ ಹಿಂದೆ ಯಾರೊಬ್ಬ ರಾಷ್ಟ್ರಪತಿಗೂ ಇಂತಹ ಗೌರವ ನೀಡಲಾಗಿಲ್ಲ. ಡಾ.ರಾಧಾಕೃಷ್ಣನ್ ಕರ್ನಾಟಕದವರು ಈ ರಾಜ್ಯ, ರಾಷ್ಟ್ರಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ. ಆದರೆ ಅವರಿಗೆ ಸಲ್ಲಬೇಕಾದ ಗೌರವ ವನ್ನು ಕಾಂಗ್ರೆಸ್ ಸಲ್ಲಿಸಿಲ್ಲ ಎಂದು ಅವರು ಕುಟುಕಿದರು.

ಶಬರಿಮಲೆ ವಿಚಾರ ಪ್ರಸ್ತಾಪ ಮಾಡಿದ ಮೋದಿ

ಶಬರಿಮಲೆ ವಿಚಾರ ಪ್ರಸ್ತಾಪ ಮಾಡಿದ ಮೋದಿ

ಶಬರಿಮಲೆ ವಿಚಾರ ಪ್ರಸ್ತಾಪ ಮಾಡಿದ ಮೋದಿ
ಇಂದು ಎಪ್ರಿಲ್ 13, ಜಲಿಯನ್ ವಾಲಾಬಾಗ್ ನರಮೇಧ ನಡೆದ ದುರಂತ ದಿನ .ಜಲಿಯನ್ ವಾಲಾಭಾಗ್ ಹತ್ಯಾಕಾಂಡ ವಾಗಿ ನೂರುವರ್ಷಗಳು ಸಂದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲೂ ಹುತಾತ್ಮರನ್ನುಮೋದಿ ನೆನೆದು ಹುತಾತ್ಮರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಮಿಲಾವಟಿ ಜನರ ಮಹಾಘಟಬಂಧನ ನ ಭಾಗವಾಗಿರುವ ಕೇರಳದ ಕಮ್ಯೂನಿಸ್ಟ್ ಸರಕಾರದ ದಲ್ಲಿ .ಶಬರಿಮಲೆ ವಿಚಾರದಲ್ಲಿ ಪ್ರಥಮ ಬಾರಿಗೆ ಧ್ವನಿಯೆತ್ತಿರುವ ಮೋದಿ, ಕೇರಳದಲ್ಲಿ ಅಯ್ಯಪ್ಪನ ಹೆಸರೆತ್ತದ ಸ್ಥಿತಿ ನಿರ್ಮಾಣವಾಗಿದೆ.ಶಬರಿಮಲೆ ಹೆಸರು ಹೇಳಿದ್ರೆ ಜೈಲಿಗೆ ಕಳುಹಿಸಿದ್ದಾರೆ.ಬಿಜೆಪಿ ಅಭ್ಯರ್ಥಿ ಯನ್ನೂ ಜೈಲಿಗೆ ಕಳುಹಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

'ಬ್ಯಾಂಕಿಂಗ್ ಕ್ಷೇತ್ರವನ್ನು ವೆಂಟಿಲೇಟರ್ ನಲ್ಲಿಟ್ಟಿತ್ತು ಯುಪಿಎ'

'ಬ್ಯಾಂಕಿಂಗ್ ಕ್ಷೇತ್ರವನ್ನು ವೆಂಟಿಲೇಟರ್ ನಲ್ಲಿಟ್ಟಿತ್ತು ಯುಪಿಎ'

ಈ ಹಿಂದಿನ ಸರಕಾರ 2014ರಲ್ಲಿ ಬ್ಯಾಂಕಿಂಗ್ ಕ್ಷೇತ್ರವನ್ನು ವೆಂಟಿಲೇಟರ್ ಸ್ಥಿತಿಗೆ ತಲುಪಿಸಿ ಹೋಗಿತ್ತು. ಸ್ವಾತಂತ್ರ ಭಾರತದಲ್ಲಿ ಕಳೆದ 60 ವರ್ಷದಲ್ಲಿ ಉದ್ಯಮಿ ಗಳಿಗೆ ಬ್ಯಾಂಕಗಳಿಂದ ನೀಡಲಾದ ಸಾಲದ ಪ್ರಮಾಣ ಹೋಲಿಸಿದರೆ ಕೇವಲ 2006ರಿಂದ 14 ರ ಅವಧಿಯಲ್ಲಿ ಎರಡು ಪಟ್ಟು ಸಾಲ ನೀಡಲಾಗಿತ್ತು. ಅದರಲ್ಲೂ ಕಮಿಷನ್ ಪಡೆದು ಬ್ಯಾಂಕಿಂಗನ್ನು ದಿವಾಳಿ ಎಬ್ಬಿಸಿದ್ದರು .ಆದರೆ ಈಗ ಬ್ಯಾಂಕಿಂಗ್ ಕ್ಷೇತ್ರ ಸುಸ್ಥತಿ ಅಭಿವೃದ್ಧಿಯ ಗತಿಯಲ್ಲಿದೆ ಎಂದು ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಕೆಲವರು ದೇಶ ಬಿಟ್ಟು ಓಡುತ್ತಿದ್ದಾರೆ. ಆದರೆ, ಎಲ್ಲೇ ಓಡಿದರೂ ಈ ಚೌಕಿದಾರ ಮೋದಿ ಬಿಡಲ್ಲ ಅಂತಾ ಹೇಳಿದರು.

ದಕ್ಷಿಣ ಕನ್ನಡ ರಣಕಣ
ಮತದಾರರು
Electors
15,65,281
 • ಪುರುಷ
  7,74,500
  ಪುರುಷ
 • ಸ್ತ್ರೀ
  7,90,781
  ಸ್ತ್ರೀ
 • ತೃತೀಯ ಲಿಂಗಿ
  N/A
  ತೃತೀಯ ಲಿಂಗಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Addressing huge Vijaya sankalpa election rally in Mangaluru PM Narendra Modi slammed Congress and JDS over Parivarvad . He said this election e between parivarvad and Rashtravad. He said congress and JDS main agenda is Vamshodaya.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more