ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಆಗಮಿಸಿದ ರೆಟಿಕ್ಯುಲೇಟೆಡ್ ಹೆಬ್ಬಾವು

|
Google Oneindia Kannada News

ಮಂಗಳೂರು, ಫೆಬ್ರವರಿ 21: ಮಂಗಳೂರಿನ ಪಿಲಿಕುಳ ಡಾ.ಶಿವರಾಮ ಕಾರಂತ ಜೈವಿಕ ಉದ್ಯಾನಕ್ಕೆ ಹೊಸ ಅತಿಥಿಗಳ ಆಗಮನವಾಗಿದೆ. ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ರೆಟಿಕ್ಯುಲೇಟೆಡ್ ಹೆಬ್ಬಾವು, ಬಣ್ಣದ ಬಕ ಹಾಗೂ ಕಾಡುಕೋಣಗಳು ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಆಗಮಿಸಿವೆ.

ಅಪರೂಪದ ಹಲವು ಹೊಸ ಪ್ರಾಣಿಗಳು ಮುಂಬರುವ ದಿನಗಳಲ್ಲಿ ಪ್ರವಾಸಿಗರನ್ನು ಆಕರ್ಷಿಸಲಿವೆ. ನಿಕೋಬಾರ್ ದ್ವೀಪದ ರೆಟಿಕ್ಯುಲೇಟೆಡ್ ಹೆಬ್ಬಾವು ಪ್ರಪಂಚದ ವಿಷರಹಿತ ಹಾವುಗಳಲ್ಲಿ ಅತೀ ಉದ್ದ ಬೆಳೆಯುವ ಹಾವಾಗಿದೆ.

ಇನ್ಮುಂದೆ ಬಗ್ಗೀಸ್ ನಲ್ಲಿ ತೆರಳಿ ಪಿಲಿಕುಳ ನಿಸರ್ಗಧಾಮದ ಸೌಂದರ್ಯ ಸವಿಯಿರಿಇನ್ಮುಂದೆ ಬಗ್ಗೀಸ್ ನಲ್ಲಿ ತೆರಳಿ ಪಿಲಿಕುಳ ನಿಸರ್ಗಧಾಮದ ಸೌಂದರ್ಯ ಸವಿಯಿರಿ

ಇದರ ಜೊತೆಗೆ ಚೆನ್ನೈನ ವಂಡಲೂರು ಮೃಗಾಲಯದಿಂದ ಒಂದು ಜೊತೆ ಕಾಡುಕೋಣ , 10 ಜೊತೆ ಬಣ್ಣದ ಕೊಕ್ಕರೆ, 6 ಜೊತೆ ರಾತ್ರಿ ಕೊಕ್ಕರೆ ಮತ್ತು ಮೂರು ಜೊತೆ ರೆಟಿಕ್ಯುಲೇಟೆಡ್ ಹೆಬ್ಟಾವು ಆಗಮಿಸಿವೆ.

Pilikula welcomes new guests to Zoo

ಭಾರತದ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಕಾಡುಕೋಣವು ಅಳಿವಿನಂಚಿನಲ್ಲಿರುವ ಪ್ರಾಣಿಯೆಂದು ಪರಿಗಣಿಸಲಾಗಿದೆ. ಹೆಚ್ಚಾಗಿ ಪಶ್ಚಿಮ ಘಟ್ಟಗಳಲ್ಲಿ, ಅದರಲ್ಲೂ ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿ ಕಾಟಿಗಳು ಹೆಚ್ಚಿನ ಸಂಖ್ಯೆಯಲ್ಲಿವೆ.

Pilikula welcomes new guests to Zoo

 ದೇಶದ ಮೊದಲ 3ಡಿ ತಾರಾಲಯ ಮಂಗ್ಳೂರಲ್ಲಿ ಮಾರ್ಚ್ 2ರಿಂದ ಆರಂಭ ದೇಶದ ಮೊದಲ 3ಡಿ ತಾರಾಲಯ ಮಂಗ್ಳೂರಲ್ಲಿ ಮಾರ್ಚ್ 2ರಿಂದ ಆರಂಭ

ಈ ಅಪರೂಪದ ಪ್ರಾಣಿಗಳನ್ನು ಇನ್ನು ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ನೋಡಬಹುದಾಗಿದೆ. ಮುಂಬರುವ ದಿನಗಳಲ್ಲಿ ಬಿಳಿ ಹುಲಿ, ಹೈನಾ, ಕೆಲವು ಜಾತಿಯ ಜಿಂಕೆಗಳು, ಅಲ್ಲದೇ ಓತಿಕ್ಯಾತಗಳನ್ನು ಉದ್ಯಾನವನಕ್ಕೆ ತರಲು ಚಿಂತನೆ ನಡೆಸಲಾಗಿದೆ.

English summary
Indian Bison, Pythons and many more rare birds included to Pilikula Biological park.Likewise the new animals are coming to the park in the future.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X