Get Updates
Get notified of breaking news, exclusive insights, and must-see stories!

ಮೋದಿ ಕಾರ್ಯಕ್ರಮಕ್ಕೆ ಜನರನ್ನು ಬಲವಂತವಾಗಿ ಕರೆತರಲಾಗುತ್ತಿದೆ; ಯುಟಿ ಖಾದರ್ ಕಿಡಿ

ಮಂಗಳೂರು, ಆಗಸ್ಟ್‌, 31: ಸೆಪ್ಟೆಂಬರ್‌ 2ರಂದು ಮಂಗಳೂರಿಗೆ ಪ್ರಧಾನಿ ಮೋದಿ ಆಗಮಿಸಲಿದ್ದು, ಕಾರ್ಯಕ್ರಮಕ್ಕೆ ಬಲವಂತವಾಗಿ ಜನರಿಗೆ ಬಲವಂತವಾಗಿ ಆಹ್ವಾನ ನೀಡುತ್ತಿದ್ದಾರೆ ಎಂದು ಮಂಗಳೂರಿನಲ್ಲಿ ಮಾಜಿ ಸಚಿವ ಯು.ಟಿ.ಖಾದರ್ ವ್ಯಂಗ್ಯವಾಡಿದರು.

ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಮಾತನಾಡಿದ ಅವರು, ಜನರು ಸೇರುವ ನಿರೀಕ್ಷೆ ಕಂಡಾಗ ಈಗ ಇರುವ ಮೈದಾನಕ್ಕಿಂತ ದೊಡ್ಡ ಸ್ಥಳ ಬೇಕೆಂದು ಕಾಣಿಸುತ್ತಿದೆ.‌ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿ ಪಿಡಿಒಗಳಿಗೆ ಪ್ರತಿ ಗ್ರಾಮದಿಂದ 250 ಜನರನ್ನು ಕರೆತರಲು ಜಿಲ್ಲಾಡಳಿತ ನೋಟಿಸ್ ಕಳುಹಿಸಿದೆ. ಕಂದಾಯ ಇಲಾಖೆಯಿಂದ ಗ್ರಾಮ ಲೆಕ್ಕಾಧಿಕಾರಿ ಸೇರಿದಂತೆ ಎಲ್ಲಾ ಅಧಿಕಾರಿಗಳು ಬರಬೇಕೆಂದು ಸೂಚನೆ ನೀಡಲಾಗಿದೆ. ಗ್ರಾಮ ಪಂಚಾಯತಿ ಕಾರ್ಯದರ್ಶಿ, ಲೈನ್‌ ಮ್ಯಾನ್, ನೀರು ಬಿಡುವವರಿಗೂ ನೋಟಿಸ್‌ ನೀಡಿದ್ದಾರೆ ಎಂದರು.

ವಿದ್ಯಾರ್ಥಿಗಳಿಗೂ ಸೂಚನೆ:
ಶಾಲಾ, ಕಾಲೇಜುಗಳಿಗೆ ರಜೆ ನೀಡಿ ಎಲ್ಲಾ ಮಕ್ಕಳೂ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂಬ ಸೂಚನೆಯನ್ನು ನೀಡಲಾಗಿದೆ. ಎಲ್ಲಾ ಬ್ಯಾಂಕ್‌ಗಳಿಗೆ ಸೂಚನೆ ನೀಡಿ, ಬ್ಯಾಂಕ್ ಸವಲತ್ತು ಪಡೆದವರನ್ನು ಕರೆತರಬೇಕೆಂದು ಸೂಚಿಸಿದ್ದಾರೆ. ಜಿಲ್ಲಾಧಿಕಾರಿ ಸೂಚನೆ ನೀಡಿದರೆ ಕೆಳ ಮಟ್ಟದಲ್ಲಿರುವ ಅಧಿಕಾರಿಗಳು ಜನರನ್ನು ಕರೆತರಲೇ ಬೇಕಾಗುತ್ತದೆ‌. ಇಲ್ಲವಾದರೆ ಅಧಿಕಾರಿಗಳು ಅವರ ಮನೆಯವರನ್ನಾದರೂ ಕರೆತರಬೇಕು ಎಂದು ಬಿಜೆಪಿ ಅವರು ಹೇಳಿದ್ದಾರೆ. ಒಂದು ವಾರದಿಂದ ಎಲ್ಲಾ ಅಧಿಕಾರಿಗಳು ಕಾರ್ಯನಿತರಾಗಿದ್ದಾರೆ. ಎಲ್ಲಾ ಮೀನುಗಾರರಿಗೂ ಕಿಸಾನ್ ಕಾರ್ಡ್ ನೀಡಿ ಕಾರ್ಯಕ್ರಮಕ್ಕೆ ಬರಲು ಸೂಚಿಸಿದ್ದಾರೆ. ಇಷ್ಟೆಲ್ಲಾ ಸೂಚನೆ ನೀಡಿದ ಬಳಿಕ ಜನಸಾಗರವೇ ಬರಲಿದೆ. ಆದ್ದರಿಂದ ಜನರಿಗೆ ಯಾವುದೇ ತೊಂದರೆ ಆಗದಂತೆ ಜಿಲ್ಲಾಡಳಿತ ಕ್ರಮ ಜರುಗಿಸಬೇಕೆಂದು ಯುಟಿ ಖಾದರ್ ಲೇವಡಿ ಮಾಡಿದರು.

People being forcefully brought to Modi program; UT Khader sparks in Mangaluru

ತುಳು ಭಾಷೆಗೆ ರಾಷ್ಟ್ರೀಯ ಮಾನ್ಯತೆ ಸಿಗಬೇಕು:
ಪ್ರಧಾನಿ ಮೋದಿ ಅವರು ಜನರ ಬಹು ಬೇಡಿಕೆಯ ತುಳು ಭಾಷೆಗೆ ರಾಷ್ಟ್ರೀಯ ಮಾನ್ಯತೆ ಸಿಗುವ ಬಗ್ಗೆ ಘೋಷಣೆ ಮಾಡಲಿ. ಪಶ್ಚಿಮ ಘಟ್ಟದ ತಪ್ಪಲು ಮತ್ತು ಮಲೆನಾಡಿನ ಜನರನ್ನು ಭಯಗೊಳಿಸಿದ ಕಸ್ತೂರಿ ರಂಗನ್ ಯೋಜನೆ ರದ್ದು ಆಗುತ್ತಾ? ಅಥವಾ ಇಲ್ಲ ಎಂದು ಅನ್ನುವುದನ್ನು ಮೋದಿ ಅವರು ಸ್ಪಷ್ಟ ಪಡಿಸಬೇಕು. ಬ್ಯಾಂಕ್, ಕೈಗಾರಿಕೆಗಳು ಖಾಸಗೀಕರಣ ಆಗಿರುವುದರಿಂದ ಅನೇಕ ಜನರು ಕೆಲಸವನ್ನು ಕಳೆದುಕೊಂಡಿದ್ದಾರೆ. ಎಂಆರ್‌ಪಿಎಲ್ ಸೇರಿದಂತೆ ಹಲವು ಸಂಸ್ಥೆಯಲ್ಲಿ ತುಳುವರಿಗೆ ಮತ್ತು ಕನ್ನಡಿಗರ ಆದ್ಯತೆ ಮೇರೆಗೆ ಕೆಲಸ ನೀಡಬೇಕು. ಬ್ಯಾಂಕ್‌ಗಳು ಸಮ್ಮಿಲನ ಆಗುವ ಮುನ್ನ ತುಳು ಭಾಷೆ ಹೊಂದಿದ ಸಿಬ್ಬಂದಿ ಇದ್ದರು. ಆದರೆ ಈಗ ಬಿಹಾರ, ಗುಜರಾತ್, ಒರಿಸ್ಸಾದವರು ಬ್ಯಾಂಕ್‌ಗಳಲ್ಲಿ ತುಂಬಿ ಹೋಗಿದ್ದಾರೆ. ಬ್ಯಾಂಕ್‌ಗಳ ಸಮಸ್ಯೆ, ನಿರುದ್ಯೋಗ ಸಮಸ್ಯೆಗಳನ್ನು ಪರಿಹರಿಸುವುದಾಗಿ ಮೋದಿ ಅವರು ಮಾತು ಕೊಡಲಿ ಎಂದು ಯುಟಿ ಖಾದರ್ ಸವಾಲೊಡ್ಡಿದರು.

People being forcefully brought to Modi program; UT Khader sparks in Mangaluru

ಟೋಲ್‌ಗಳ ಸಮಸ್ಯೆಯಿಂದ ಮುಕ್ತಿ ಕೊಡಿಸಿ
ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್‌ಗಳ ಸಮಸ್ಯೆಯಿಂದ ಮುಕ್ತಿ ಸಿಗುವಂತೆ ಮಾಡಬೇಕು. ಶಿರಾಡಿ ಘಾಟ್‌ನಲ್ಲಿ ಸುರಂಗ ರಸ್ತೆ ನಿರ್ಮಾಣದ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು‌‌. ಸುರಂಗ ಮಾರ್ಗ ಆದರೆ ದೊಡ್ಡ ಮಟ್ಟದ ಪ್ರಯೋಜನ ಆಗಲಿದೆ. ಹಾಗಾಗಿ ಜನರಿಗೆ ಇದರ ಬಗ್ಗೆ ಮಾಹಿತಿ ನೀಡಬೇಕು. 2018ರ ಚುನಾವಣೆಯ ಪ್ರಣಾಳಿಕೆಯಲ್ಲಿ ಮಂಗಳೂರಿನಲ್ಲಿ ಎನ್‌ಐಎ ಆರಂಭ ಮಾಡುವುದಾಗಿ ಕೇಂದ್ರ ಸರ್ಕಾರ ಭರವಸೆ‌ ನೀಡಿತ್ತು. ಆದರೆ ಎನ್‌ಐಎ ಇನ್ನೂ ಜಾರಿ ಆಗಿಲ್ಲ ಎಂದು ಆಕ್ರೋಶ ಹೊರಹಾಕಿದರು. ಮಂಗಳೂರು ಏರ್ ಪೋರ್ಟ್‌ಗೆ ಕೋಟಿ-ಚೆನ್ನಯ್ಯ ಹೆಸರು ಇಡಬೇಕು ಎಂಬುದು ಜನರ ಒತ್ತಾಯ ಆಗಿದೆ. ಗಣೇಶ ಹಬ್ಬದ ದಿನವೇ ಕೋಟಿ ಚೆನ್ನಯ್ಯ ಎಂದು ಹೆಸರು ಇಟ್ಟರೆ ಸಂತೋಷ ಆಗಲಿದೆ ಎಂದು ಯುಟಿ ಖಾದರ್ ಅಭಿಪ್ರಾಯ ವ್ಯಕ್ತಪಡಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+