ಹೆಚ್ಚುತ್ತಿರುವ ರೋಗಿಗಳು, ವೆನ್ಲಾಕ್ ಐಸಿಯುನಲ್ಲಿ ಬೆಡ್ ಕೊರತೆ

1,000 ಬೆಡ್ ಸಾಮರ್ಥ್ಯದ ವೆನ್ಲಾಕ್ ಆಸ್ಪತ್ರೆಯಲ್ಲಿ 12 ಬೆಡ್ಡುಗಳ ಮೊದಲನೇ ಹಂತದ ಐಸಿಯು ಹಾಗೂ 7 ಬೆಡ್ಡುಗಳ 2ನೇ ಹಂತದ ಐಸಿಯು ಇದೆ. ದಿನವೊಂದರಲ್ಲಿ ಇಲ್ಲಿ ಕನಿಷ್ಠ 10- 12 ರೋಗಿಗಳು ಐಸಿಯುಗೆ ದಾಖಲಾಗಲು ಕಾಯುತ್ತಿರುತ್ತಾರೆ.

ಮಂಗಳೂರು, ಮೇ 11: ನಗರದ ವೆನ್ಲಾಕ್ ಸರಕಾರಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಹಾಸಿಗೆಗಳ ತೀವ್ರ ಕೊರತೆಯುಂಟಾಗಿದೆ.

ಈ 1,000 ಬೆಡ್ ಸಾಮರ್ಥ್ಯದ ಆಸ್ಪತ್ರೆಯಲ್ಲಿ 12 ಬೆಡ್ಡುಗಳ ಮೊದಲನೇ ಹಂತದ ಐಸಿಯು ಹಾಗೂ 7 ಬೆಡ್ಡುಗಳ 2ನೇ ಹಂತದ ಐಸಿಯು ಇದೆ. ಈ ಐಸಿಯುಗಳನ್ನು ಆಸ್ಪತ್ರೆಯ ರೋಗಿಗಳಿಗಲ್ಲದೇ ಹತ್ತಿರದ ಲೇಡಿಗೋಶನ್ ಆಸ್ಪತ್ರೆಯ ರೋಗಿಗಳಿಗೂ ಬಳಸಲಾಗುವುದರಿಂದ ಸಾಮಾನ್ಯವಾಗಿ ಯಾವತ್ತೂ ಎಲ್ಲಾ ಬೆಡ್ಡುಗಳೂ ಭರ್ತಿಯಾಗಿರುತ್ತವೆ. ಇದರಿಂದಾಗಿ ಐಸಿಯುವಿನಲ್ಲಿ ಚಿಕಿತ್ಸೆ ಅಗತ್ಯವಿರುವ ಹಲವಾರು ರೋಗಿಗಳು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡಬೇಕಾದ ಅನಿವಾರ್ಯತೆಯಿದೆ.

Patients are increasing, but no beds for patients at Venlock hospital, Mangaluru

ಸಾಮಾನ್ಯವಾಗಿ ದಿನವೊಂದರಲ್ಲಿ ಕನಿಷ್ಠ 10ರಿಂದ 12 ರೋಗಿಗಳು ಐಸಿಯುಗೆ ದಾಖಲಾಗಲು ಕಾಯುತ್ತಿರುತ್ತಾರೆ. ಇತ್ತೀಚೆಗೆ ಚಿಕ್ಕಮಗಳೂರಿನ ಕಳಸದಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಗಾಯಗೊಂಡಿದ್ದ 32 ಮಂದಿಯಲ್ಲಿ 5 ಮಂದಿಯನ್ನು ಐಸಿಯುವಿಗೆ ದಾಖಲಿಸಬೇಕಿದ್ದರೂ ಅಲ್ಲಿ ಕೇವಲ 3 ಬೆಡ್ ಮಾತ್ರ ಲಭ್ಯವಿದ್ದುದರಿಂದ ಉಳಿದ ಇಬ್ಬರು ಗಾಯಾಳುಗಳನ್ನು ಕೆಎಂಸಿಗೆ ಸ್ಥಳಾಂತರಿಸಬೇಕಾಯಿತು ಎಂದು ಸೂಪರಿಂಟೆಂಡೆಂಟ್ ಡಾ ರಾಜೇಶ್ವರಿ ದೇವಿ ಮಾಹಿತಿ ನೀಡುತ್ತಾರೆ.

ಇತರ ಕೆಲವು ಜಿಲ್ಲೆಗಳ ಸರಕಾರಿ ಆಸ್ಪತ್ರೆಗಳು ಇಲ್ಲಿರುವಂತೆ ಆಧುನಿಕ ಸೌಲಭ್ಯ ಹಾಗೂ ಐಸಿಯು ಹೊಂದಿಲ್ಲವಾದ ಕಾರಣ ಅಲ್ಲಿನ ರೋಗಿಗಳನ್ನು ಇಲ್ಲಿಗೆ ಸ್ಥಳಾಂತರಿಸಲಾಗುತ್ತದೆ. ದಾವಣಗೆರೆ, ಗದಗ, ಹಾವೇರಿಯಿಂದ ಇಲ್ಲಿಗೆ ಬರುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಡಾ ರಾಜೇಶ್ವರಿ ಮಾಹಿತಿ ನೀಡುತ್ತಾರೆ.

ಪ್ರತಿವರ್ಷ ಅಂದಾಜು 25,000ರಿಂದ 30,000 ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಇವರಲ್ಲಿ ಸುಮಾರು 1,500 ಮಂದಿಗೆ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತದೆ.

ಲೇಡಿಗೋಶನ್ ಆಸ್ಪತ್ರೆಗೆ ದಾಖಲಾಗುವ ಗರ್ಭಿಣಿಯರು ಹೆರಿಗೆ ಸಮಯದಲ್ಲಿ ಸಮಸ್ಯೆ ಎದುರಿಸಿದಲ್ಲಿ ಅವರನ್ನು ಇಲ್ಲಿನ ಐಸಿಯುಗೆ ದಾಖಲಿಸಲಾಗುತ್ತದೆ. ಲೇಡಿಗೋಶನ್ ಆಸ್ಪತ್ರೆಗಾಗಿ ನಿರ್ಮಾಣವಾಗುತ್ತಿರುವ ಹೊಸ ಬ್ಲಾಕಿನಲ್ಲಿ ಮೊದಲನೇ ಹಂತದ 20 ಬೆಡ್ಡುಗಳ ಐಸಿಯು ಹಾಗೂ 2ನೇ ಹಂತದ ಐಸಿಯು ಕೂಡ ಇರುವುದರಿಂದ ಈ ಕಟ್ಟಡ ಕಾರ್ಯಾರಂಭಗೊಂಡ ನಂತರ ಸಮಸ್ಯೆ ನಿವಾರಣೆಯಾಗಬಹುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+