ಮಂಗಳೂರು: ಹೆದ್ದಾರಿ ವಿಸ್ತರಣೆಗಾಗಿ ಇಡೀ ಕಟ್ಟಡವನ್ನೇ ಸ್ಥಳಾಂತರಿಸಲು ಮುಂದಾದ ಮಾಲೀಕ, ಏನಿದರ ವಿಶೇಷತೆ?
ಮಂಗಳೂರು, ಜುಲೈ, 15: ಕುಲಶೇಖರ -ಕಾರ್ಕಳ ಚತುಷ್ಪಥ ರಸ್ತೆ ಕಾಮಗಾರಿ ಭರದಿಂದ ಸಾಗುತ್ತಿದೆ. ಈ ರಸ್ತೆ ನಿರ್ಮಾಣಕ್ಕೆ ಅನೇಕ ಮನೆ-ಮರ-ಕಟ್ಟಡಗಳು ನೆಲಸಮ ಆಗುತ್ತಿದೆ. ಆದರೆ ಗುರುಪುರ ಕೈಕಂಬದ ವರ್ತಕ ಕುಟುಂಬವೊಂದು ಕಾಶಿಮಠದ ಸ್ವಾಮೀಜಿಯ ಮೇಲಿನ ಪ್ರೀತಿಯಿಂದ 25 ವರ್ಷಗಳ ಹಳೆಯ ವಾಣಿಜ್ಯ ಕಟ್ಟಡವನ್ನು ಸ್ಥಳಾಂತರ ಮಾಡುವ ಸಾಹಸಕ್ಕೆ ಇಳಿದಿದೆ.
ಕೈಕಂಬದಲ್ಲಿ ಒಂದು ಅಂತಸ್ತಿನ ವಾಣಿಜ್ಯ ಕಟ್ಟಡ 1999ರಲ್ಲಿ ನಿರ್ಮಾಣಗೊಂಡಿತ್ತು. ರಾಜೇಶ್ ಪೈ ಹಾಗೂ ಅಶೋಕ್ ಪೈ ಸಹೋದರರು ಕಷ್ಟಪಟ್ಟು ನಿರ್ಮಿಸಿದ ಪ್ರಥಮ ಕಟ್ಟಡ ಇದಾಗಿದೆ. ಇದು ಕಾಶಿಮಠದ ಸ್ವಾಮೀಜಿ ಶ್ರೀ ಸುಧೀಂದ್ರ ತೀರ್ಥರಿಂದ ಉದ್ಘಾಟನೆಗೊಂಡಿತ್ತು. ಭವಿಷ್ಯದಲ್ಲಿ ಹೆದ್ದಾರಿ ವಿಸ್ತರಣೆಗೊಂಡರೂ ಕಟ್ಟಡಕ್ಕೆ ಯಾವುದೇ ಧಕ್ಕೆಯಾಗೋಲ್ಲ ಎಂದು ಅಂದು ಸ್ವಾಮೀಜಿ ಭವಿಷ್ಯ ನುಡಿದಿದ್ದರು. ಇಷ್ಟೆಲ್ಲಾ ಭಾವನೆಗಳು, ನೆನಪುಗಳು ಇರುವುದರಿಂದ ಈ ಕಟ್ಟಡವನ್ನು ಉಳಿಸಿ ಸ್ಥಳಾಂತರ ಮಾಡಲು ಈ ಸಹೋದರರು ಮುಂದಾಗಿದ್ದಾರೆ.

ಸಹೋದರರು ಈ ಪ್ರಯತ್ನದ ಫಲವೇ ಆರು ಸಾವಿರ ಚದರ ಅಡಿಯ ಕಟ್ಟಡದ ಸ್ಥಳಾಂತರ. ಸ್ಥಳಾಂತರಗೊಳ್ಳುವ ಈ ಕಟ್ಟಡದ ಒಂದು ಪಾರ್ಶ್ವ ಹೆದ್ದಾರಿ ಕಾಮಗಾರಿಗೆ ಹೋಗುತ್ತದೆ. ಆದ್ದರಿಂದ ಕಟ್ಟಡ ಮಾಲೀಕರು ಸಂಪೂರ್ಣ ಧ್ವಂಸಗೊಳಿಸದೆ, ಒಂದು ಪಾರ್ಶ್ವವನ್ನು ತೆಗೆದು ಉಳಿದದ್ದನ್ನು ಉಳಿಸುವ ಯತ್ನ ಮಾಡದೆ ಯಥಾಸ್ಥಿತಿಯಲ್ಲಿ ಸ್ಥಳಾಂತರ ಮಾಡಲು ಯೋಜನೆ ಹಾಕಿದ್ದಾರೆ.
ಕಟ್ಟಡ ಸ್ಥಳಾಂತರ ಮಾಡಲು ಹರಿಯಾಣದ ಎಚ್ಎಸ್‌ಬಿಎಲ್ ಕಂಪನಿಗೆ ವಹಿಸಲಾಗಿದೆ. ಮೊದಲಾಗಿ ಪಂಚಾಂಗದ ಅಡಿಯನ್ನು ಸುತ್ತಲೂ ಅಗೆದು 500 ಜಾಕ್‌ಗಳನ್ನು ಅಳವಡಿಸಲಾಗಿದೆ. ಬಳಿಕ ಬೀಮ್ ಕೆಳಗೆ ಪಿಲ್ಲರ್ ಹಾಕಲಾಗುತ್ತದೆ. ಅಗತ್ಯವಿದ್ದೆಡೆ ಕೆಂಪು ಕಲ್ಲು ಇಟ್ಟು ಎರಡೂ ಅಂತಸ್ತುಗಳ ಭಾರ ಸಮತೋಲನ ಕಾಯ್ದುಕೊಳ್ಳಲಾಗುತ್ತದೆ.
ಮೊದಲು ಕಟ್ಟಡ 15 ಅಡಿ ಹಿಂದಕ್ಕೆ ಬಳಿಕ ಬಲಕ್ಕೆ 115 ಅಡಿ, ಅಲ್ಲಿಂದ ಮತ್ತೆ ಹಿಂದಕ್ಕೆ 15 ಅಡಿ ಕಟ್ಟಡವನ್ನು ಉದ್ದೇಶಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗುತ್ತದೆ. ಇದಕ್ಕೆ ಸಾಕಷ್ಟು ಕಾಲಾವಕಾಶ ಬೇಕಿದ್ದು, ಪ್ರಕ್ರಿಯೆ ಮೂರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ದಿನಕ್ಕೆ 10 ಅಡಿಯಷ್ಟು ಮಾತ್ರ ಕಟ್ಟಡ ಸ್ಥಳಾಂತರ ಸಾಧ್ಯ. ವಿಶೇಷವೆಂದರೆ ಯಂತ್ರೋಪಕರಣಗಳನ್ನು ಬಳಸದೆ ಮಾನವ ಶ್ರಮದಿಂದಲೇ ಕಟ್ಟಡ ಸ್ಥಳಾಂತರವಾಗಲಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕಟ್ಟಡ ಮಾಲಕ ರಾಜೇಶ್ ಪೈ ಅವರ ಸಹೋದರ ಅಶೋಕ್ ಪೈ, ಕಾಶಿಮಠದ ಸ್ವಾಮೀಜಿಯವರು ಪ್ರೀತಿಯಿಂದ ಉದ್ಘಾಟಿಸಿದ ಕಟ್ಟಡದಲ್ಲಿ ಸಾವಿರಾರು ನೆನಪುಗಳಿವೆ. ಹೆದ್ದಾರಿ ಅಗಲೀಕರಣಕ್ಕಾಗಿ ಕಟ್ಟಡವನ್ನು ತೆರವು ಮಾಡಬೇಕೇಂದಾಗ ತುಂಬಾ ಬೇಸರ ಆಯಿತು. ಆದರೆ ಕಟ್ಟಡ ಸ್ಥಳಾಂತರ ಮಾಡಬಹುದೆಂಬ ಪ್ಲಾನ್ ಸಿಕ್ಕಾಗ ಸವಾಲಿಗೆ ಕೈ ಹಾಕಿದ್ದೇವೆ ಎಂದರು.
ಸದ್ಯ ಮಳೆ ಜಾಸ್ತಿ ಇರುವ ಹಿನ್ನೆಲೆಯಲ್ಲಿ ಸ್ಥಳಾಂತರ ಸ್ವಲ್ಪ ದಿನ ತಡ ಆಗಬಹುದು. ಸುಮಾರು ಎರಡು ತಿಂಗಳು ಸಮಯ ಈ ಸ್ಥಳಾಂತರಕ್ಕೆ ತಗಲುತ್ತದೆ. ಹಳೆಯ ಕಟ್ಟಡಕ್ಕೆ ಏನೂ ಆಗಲಾರದು ಎಂಬ ವಿಶ್ವಾಸ ಇದೆ. ಹೊಸ ಕಟ್ಟಡ ಕಟ್ಟಲು ಒಂದು ಕೋಟಿ ರೂಪಾಯಿ ಬೇಕಾಗಬಹದು. ಆದರೆ ಸ್ಥಳಾಂತರ ಮಾಡಿದರೆ ಐವತ್ತು ಲಕ್ಷ ರೂಪಾಯಿ ಖರ್ಚಿನಲ್ಲಿ ಹಳೆಯ ಕಟ್ಟಡವನ್ನೇ ಪಡೆಯಬಹುದು ಎಂದು ಹೇಳಿದರು.
-
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್












Click it and Unblock the Notifications