ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು; ಖಾಸಗಿ ಬಸ್ ಓಡಿಸಲ್ಲ ಎಂದ ಮಾಲೀಕರು!

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜೂನ್ 23; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್‌ಡೌನ್ ನಿಯಮಗಳಲ್ಲಿ ಸಡಿಲಿಕೆಯಾಗಿದೆ. ಎಲ್ಲಾ ಅಂಗಡಿಗಳನ್ನು ಮಧ್ಯಾಹ್ನ 1 ಗಂಟೆಯವರೆಗೆ ತೆರೆಯಲು ಅನುಮತಿ ಸಿಕ್ಕಿದೆ. ಬಸ್ ಸಂಚಾರವನ್ನು ನಡೆಸಬಹುದೆಂದು ರಾಜ್ಯ ಸರ್ಕಾರ ಆದೇಶ ಮಾಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸಂಚಾರಿ ವ್ಯವಸ್ಥೆಯ ಜೀವನಾಡಿ ಖಾಸಗಿ ಬಸ್. ಸರ್ಕಾರ ಬಸ್ ಓಡಿಸಲು ಒಪ್ಪಿಗೆ ಕೊಟ್ಟರೂ ಖಾಸಗಿ ಬಸ್‌ಗಳ ಮಾಲೀಕರು ಮಾತ್ರ ಯಾವುದೇ ಕಾರಣಕ್ಕೂ ಈ ತಿಂಗಳು ನಾವು ಬಸ್ ತೆಗೆಯೋದಿಲ್ಲ ಎಂದು ತೀರ್ಮಾನಿಸಿದ್ದಾರೆ.

ಅನ್‌ಲಾಕ್; ಬಸ್ ಸಂಚಾರ ಆರಂಭವಾದರೂ ಪ್ರಯಾಣಿಕರಿಲ್ಲ! ಅನ್‌ಲಾಕ್; ಬಸ್ ಸಂಚಾರ ಆರಂಭವಾದರೂ ಪ್ರಯಾಣಿಕರಿಲ್ಲ!

ಜಿಲ್ಲೆಯಲ್ಲಿ ಮಧ್ಯಾಹ್ನದವರೆಗೆ ಬಸ್ ಸಂಚಾರಕ್ಕೆ ಅನುಮತಿ ಇದೆ. "ಮಂಗಳೂರಿನಲ್ಲಿ ಖಾಸಗಿ ಬಸ್‌ಗಳು ಓಡಾಟ ಮಾಡುವುದಿಲ್ಲ" ಎಂದು ದಕ್ಷಿಣ ಕನ್ನಡ ಜಿಲ್ಲಾ ‌ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್ ರಾಜ್ ಆಳ್ವಾ ಹೇಳಿದ್ದಾರೆ.

ದಕ್ಷಿಣ ಕನ್ನಡದಲ್ಲಿ ಮಧ್ಯಾಹ್ನ 2 ಗಂಟೆಯವರೆಗೆ ಎಲ್ಲಾ ಅಂಗಡಿಗಳು ಓಪನ್ ದಕ್ಷಿಣ ಕನ್ನಡದಲ್ಲಿ ಮಧ್ಯಾಹ್ನ 2 ಗಂಟೆಯವರೆಗೆ ಎಲ್ಲಾ ಅಂಗಡಿಗಳು ಓಪನ್

No Private Bus Operation In June At Dakshina Kannada

"ಜೂನ್ ತಿಂಗಳ ಅಂತ್ಯದವರೆಗೆ ಖಾಸಗಿ ಬಸ್ ಓಡಿಸುವುದಿಲ್ಲ. ಮಧ್ಯದಲ್ಲಿ ಬಸ್ ಓಡಿಸಿದರೆ ಟ್ಯಾಕ್ಸ್ ಸೇರಿ ಇತರೆ ಆರ್ಥಿಕ ಹೊರೆ ಎದುರಿಸಬೇಕಾಗುತ್ತದೆ. ಹೀಗಾಗಿ ಸದ್ಯಕ್ಕೆ ಬಸ್ ಸಂಚಾರ ಮಾಡದಿರಲು ನಿರ್ಧರಿಸಿದ್ದೇವೆ" ಎಂದು ತಿಳಿಸಿದ್ದಾರೆ.

ಮಂಗಳೂರು; ಕೋವಿಡ್ ಪರೀಕ್ಷೆಗೆ ಜಿಲ್ಲಾಡಳಿತದ ಹೊಸ ಆದೇಶ ಮಂಗಳೂರು; ಕೋವಿಡ್ ಪರೀಕ್ಷೆಗೆ ಜಿಲ್ಲಾಡಳಿತದ ಹೊಸ ಆದೇಶ

"ಡಿಸೇಲ್ ಬೆಲೆಯೇರಿಕೆ ಮಧ್ಯೆ ಶೇ 50% ಸೀಟಿಂಗ್ ಹಾಕಿ ಬಸ್ ಓಡಿಸಲು ಸಾಧ್ಯವಿಲ್ಲ. ಬಸ್ ಓಡಿಸಿದರೆ ತೆರಿಗೆ ಕಟ್ಟಬೇಕಾಗಿರುವ ಕಾರಣ ಅದು ಕಷ್ಟವಾಗಿದೆ. ಹೀಗಾಗಿ ಈ ತಿಂಗಳ ಅಂತ್ಯದವರೆಗೆ ಬಸ್ ಓಡಿಸದೇ ಇರಲು ನಿರ್ಧಾರ ಮಾಡಿದ್ದೇವೆ. ಎರಡು ತಿಂಗಳಿನಿಂದ ನಿಂತಿರುವ ಬಸ್‌ಗಳನ್ನು ಏಕಾಏಕಿ ಓಡಿಸಲು ಆಗುವುದಿಲ್ಲ" ಎಂದು ದಿಲ್ ರಾಜ್ ಆಳ್ವ ಮಾಹಿತಿ ನೀಡಿದ್ದಾರೆ.

ಅನ್‌ಲಾಕ್ ಘೋಷಣೆ ಮಾಡಿದ್ದ ಕರ್ನಾಟಕ ಸರ್ಕಾರ ಸೋಮವಾರದಿಂದ ಸರ್ಕಾರಿ ಬಸ್‌ಗಳ ಸಂಚಾರಕ್ಕೂ ಅವಕಾಶ ನೀಡಿತ್ತು. ಬೆಂಗಳೂರು ನಗರದಿಂದ ಮೊದಲ ದಿನವಾದ ಸೋಮವಾರ 1,810, ಮಂಗಳವಾರ 1,700 ಬಸ್‌ಗಳು ಸಂಚಾರ ನಡೆಸಿವೆ. ಆದರೆ ಪ್ರಯಾಣಿಕರ ಸಂಖ್ಯೆ ಭಾರೀ ಕಡಿಮೆ ಇತ್ತು.

English summary
Will not operate private bus in the month of June said Dakshina Kannada private bus owners association president Dil Raj Alwa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X