ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಂಬಾಕು ಉತ್ಪನ್ನಗಳ ಮೇಲೆ ನಿಷೇಧ ಹೇರಲ್ಲ: ಖಾದರ್

By Mahesh
|
Google Oneindia Kannada News

ಮಂಗಳೂರು, ನ.5: ತಂಬಾಕು ಉತ್ಪನ್ನಗಳ ಮೇಲೆ ನಿಷೇಧ ಹೇರುವ ಬಗ್ಗೆ ಕರ್ನಾಟಕ ಸರ್ಕಾರ ಇನ್ನೂ ನಿರ್ಧಾರ ಕೈಗೊಂಡಿಲ್ಲ. ನಿಷೇಧದ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡುತ್ತೇವೆ ಎಂದು ಆರೋಗ್ಯ ಸಚಿವ ಯು.ಟಿ ಖಾದರ್ ಹೇಳಿದ್ದಾರೆ.

ತಂಬಾಕು ಪದಾರ್ಥಗಳ ಬಳಕೆ ಮೇಲೆ ಕರ್ನಾಟಕ ಸರ್ಕಾರ ನಿಷೇಧ ಹೇರಿ ಆದೇಶ ಜಾರಿಗೊಳಿಸಿದೆ ಎಂಬ ಸುದ್ದಿ ಹಬ್ಬಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಯುಟಿ ಖಾದರ್ ಅವರು ಈ ರೀತಿ ಸ್ಪಷ್ಟನೆ ನೀಡಿದ್ದಾರೆ.

ಸದ್ಯಕ್ಕೆ ತಂಬಾಕು ಪದಾರ್ಥ ಬಳಕೆ ಮೇಲೆ ನಿಷೇಧ ಹೇರಲಾಗುತ್ತಿಲ್ಲ. ಈ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಆರೋಗ್ಯದ ದೃಷ್ಟಿಯಿಂದ ತಂಬಾಕು ಬಳಕೆ ನಿಷೇಧಕ್ಕೆ ಹಲವಾರು ಎನ್ ಜಿಒಗಳು ಮನವಿ ಸಲ್ಲಿಸಿವೆ. [ಗುಟ್ಕಾ, ಪಾನ್ ಮಸಾಲ ನಿಷೇಧ]

No Ban on Tobacco Products : Minister UT Khader,

ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ಅವರ ಆದೇಶದಂತೆ ರಾಜ್ಯದಲ್ಲಿ ಗುಟ್ಕಾ, ಪಾನ್ ಮಸಾಲ ನಿಷೇಧ ಹೇರಿದ್ದರ ಬಗ್ಗೆ ಕೇಂದ್ರ ಸರ್ಕಾರ ಮೆಚ್ಚುಗೆ ಸೂಚಿಸಿದೆ ಎಂದು ಖಾದರ್ ಹೇಳಿದರು. ಸಂಪೂರ್ಣವಾಗಿ ಗುಟ್ಕಾ ನಿಷೇಧ ಹಾಗೂ ತಂಬಾಕು ಉತ್ಪನ್ನಗಳ ಬಳಕೆಗೆ ನಿರ್ಬಂಧ ಹೇರಲು ಸರ್ಕಾರ ಸಿದ್ಧವಿದೆ. ಅದರೆ, ಸಾಧ್ಯಸಾಧ್ಯತೆ ಬಗ್ಗೆ ಸಮಿತಿ ಅಧ್ಯಯನ ವರದಿ ನೀಡಿದ ಮೇಲೆ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ.

PFA ಕಾಯಿದೆ 29(v) ಪ್ರಕಾರ ಪಾನ್ ಮಸಾಲ, ಗುಟ್ಕಾ, ಸುಪಾರಿ ತಿನ್ನಬಹುದಾದ ಪದಾರ್ಥ ಎಂದು ಮಾರಾಟಕ್ಕೆ ಲಭ್ಯವಿದೆ. ಆದರೆ, ಇದು ಆರೋಗ್ಯಕ್ಕೆ ಹಾನಿಕಾರಕ ಎಂದು ಶಾಸನ ವಿಧಿಸಿದ ಎಚ್ಚರಿಕೆ ಪಾಲನೆಯಾಗಬೇಕು.
ಗುಟ್ಕಾ ಆಹಾರ ಪಟ್ಟಿಗೆ ಸೇರುವುದಾದರೆ, Food Safety and Standards Act ಪ್ರಕಾರ ಅದು ಅಕ್ರಮವಾಗುತ್ತದೆ. ಹೀಗಾಗಿ ಗುಟ್ಕಾ ನಿಷೇಧಕ್ಕೆ ಕೇಂದ್ರ ಸರ್ಕಾರ ಆದೇಶಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
The Karnataka government has not passed any order to ban tobacco products in the state. We have convened a meeting and the result will be officially out in a day or two”, said Minister for health and family welfare U T Khader.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X