ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನವ ಮಂಗಳೂರು ಬಂದರಿಗೆ ಬಂದಿದ್ದ ಐಷಾರಾಮಿ ಹಡಗು

|
Google Oneindia Kannada News

ಮಂಗಳೂರು, ನ. 29: ಕೊರೊನಾ ಸಾಂಕ್ರಾಮಿಕದ ಸುಮಾರು ಎರಡು ವರ್ಷಗಳ ಬಳಿಕ ನವ ಮಂಗಳೂರು ಬಂದರಿಗೆ ಈ ಋತುವಿನ ಮೊದಲ ಐಷಾರಾಮಿ ಹಡಗು ಬಂದಿತ್ತು. 600 ಕ್ಕೂ ಹೆಚ್ಚು ಜನರಿದ್ದ ಹಡಗು ಮುಂಜಾನೆ ಬಂದರನ್ನು ತಲುಪಿತ್ತು.

ಯೂರೋಪ್‌ನ ಮಾಲ್ಟಾದಿಂದ ಬಂದಿದ್ದ ಈ ಐಷಾರಾಮಿ ಹಡಗಿನ ಹೆಸರು 'ಎಂಎಸ್‌ ಯುರೋಪ-2. ಹಡಗಿನಲ್ಲಿ 271 ಪ್ರಯಾಣಿಕರು ಹಾಗೂ 373 ಸಿಬ್ಬಂದಿ ಇದ್ದರು.

Mangaluru blast case: ಉಡುಪಿ ಮಠಕ್ಕೂ ಭೇಟಿ ನೀಡಿದ್ದ ಆರೋಪಿ ಶಾರಿಕ್Mangaluru blast case: ಉಡುಪಿ ಮಠಕ್ಕೂ ಭೇಟಿ ನೀಡಿದ್ದ ಆರೋಪಿ ಶಾರಿಕ್

ಈ ಹಡಗಿನ ಸಾಗಿಸುವ ಸಾಮರ್ಥ್ಯವು 42,830 ಟನ್ ಮತ್ತು ಅದರ ಪ್ರಸ್ತುತ ಡ್ರಾಫ್ಟ್ 6.3 ಮೀಟರ್ ಎಂದು ವರದಿಯಾಗಿದೆ. 224.38 ಮೀಟರ್ ಉದ್ದ ಹಾಗೂ 29.99 ಮೀಟರ್ ಅಗಲವಿರುವ ಪ್ರಯಾಣಿಕ ಹಡಗು ಗೋವಾದಿಂದ ಮಂಗಳೂರಿನತ್ತ ಪ್ರಯಾಣಿಸಿತ್ತು.

New Mangaluru Port Witnessed First Cruise Europa 2

ಎನ್‌ಎಂಪಿಎದಲ್ಲಿ 11 ವಲಸೆ ಹಾಗೂ ನಾಲ್ಕು ಕಸ್ಟಮ್ಸ್‌ ಕೌಂಟರ್‌ಗಳನ್ನು ತೆರೆದು ಅತಿಥಿಗಳನ್ನು ಸ್ವಾಗತಿಸಲಾಗಿದೆ. ಪ್ರಯಾಣಿಕರಿಗಾಗಿ ಆರು ಬಸ್‌, 15 ಟ್ಯಾಕ್ಸಿಗಳ ವ್ಯವಸ್ಥೆ ಮಾಡಲಾಗಿತ್ತು. ಆಯುಶ್‌ ಇಲಾಖೆಯ ವತಿಯಿಂದ ಧ್ಯಾನ ಕೇಂದ್ರ ಹಾಗೂ ಭಾರತೀಯ ಪುರಾಣಗಳ ಮಾಹಿತಿ ನೀಡುವಂಥ ಕಾರ್ಯಕ್ರಮಗಳ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ಈ ಐಷಾರಾಮಿ ಹಡಗಿನಲ್ಲಿ ಬಂದಿದ್ದ ಪ್ರವಾಸಿಗರು ಸೇಂಟ್‌ ಅಲೋಶಿಯಸ್‌ ಕಾಲೇಜು, ಕದ್ರಿ ಹಾಗೂ ಕುದ್ರೋಳಿ ದೇವಸ್ಥಾನ, ಮಂಗಳೂರಿನ ಮಾರುಕಟ್ಟೆ, ಉಡುಪಿ ಕೃಷ್ಣ ಮಠ, ಮೂಡುಬಿದಿರೆಯ ಸಾವಿರ ಕಂಬದ ಬಸದಿ ಫಿಜಾ ಮಾಲ್‌ ಮುಂತಾದ ಸ್ಥಳಗಳಿಗೆ ಭೇಟಿ ನೀಡಿದ್ದರು ಎಂದು ವರದಿಯಾಗಿದೆ.

ಮಂಗಳೂರಿನಿಂದ ಈ ಹಡಗು ಕೊಚ್ಚಿಗೆ ಪ್ರಯಾಣ ಬೆಳೆಸಿದೆ. ಫೆಬ್ರವರಿ 18, 2020 ರಂದು ಕೊನೆಯ ಕ್ರೂಸ್ ಹಡಗು ಮಂಗಳೂರು ಬಂದರಿಗೆ ಬಂದಿತ್ತು. ಇದರಲ್ಲಿ 1,800 ಪ್ರಯಾಣಿಕರು ಮತ್ತು 800 ಸಿಬ್ಬಂದಿಯನ್ನು ಹೊಂದಿತ್ತು.

New Mangaluru Port Witnessed First Cruise Europa 2

ಕೊರೊನಾ ಸಾಂಕ್ರಾಮಿಕದ ಬೆನ್ನಲ್ಲಿ ಕೇಂದ್ರ ಸರ್ಕಾರ ಜಾರಿ ಮಾಡಿದ್ದ ನಿರ್ದೇಶನದ ಮೇರೆಗೆ ಮಾರ್ಚ್ 2020 ರಲ್ಲಿ ಕ್ರೂಸ್ ಹಡಗುಗಳನ್ನು ಬಂದರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.

English summary
Europa 2 cruise ship arrived New mangalore port and it had more than 600 people. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X