• search
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಗಳೂರು ಪಾಲಿಕೆಗೆ ನೂತನ ಆಯುಕ್ತರ ನೇಮಕ

By ಐಸಾಕ್ ರಿಚರ್ಡ್, ಮಂಗಳೂರು
|

ಮಂಗಳೂರು, ಆಗಸ್ಟ್ 6 : ಸುಮಾರು ಎರಡು ತಿಂಗಳಿನಿಂದ ತೆರವಾಗಿದ್ದ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರ ಹುದ್ದೆ ಭರ್ತಿಯಾಗಿದೆ. ಕೆಎಎಸ್ ಅಧಿಕಾರಿ ಗೋಪಾಲಕೃಷ್ಣ ಅವರನ್ನು ನೂತನ ಆಯುಕ್ತರಾಗಿ ನೇಮಕ ಮಾಡಿ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.

ಮಂಗಳೂರು ಪಾಲಿಕೆ ಆಯುಕ್ತರಾಗಿದ್ದ ಹೆಫ್ಸಿಬಾ ರಾಣಿ ಕೊರ್ಲಪಾಟಿ ಅವರನ್ನು ಜೂನ್‌ 12ರಂದು ವಿಜಯಪುರದ ಜಿಲ್ಲಾ ಪಂಚಾಯತ್ ಸಿಇಒ ಆಗಿ ವರ್ಗಾವಣೆ ಮಾಡಲಾಗಿತ್ತು. ತೆರವಾದ ಸ್ಥಾನಕ್ಕೆ ಬೇರೆಯವರ ನೇಮಕವಾಗಿರಲಿಲ್ಲ. ಜಂಟಿ ಆಯುಕ್ತ ಗೋಕುಲ್‌ ದಾಸ್‌ ನಾಯಕ್‌ ಪ್ರಭಾರ ಆಯುಕ್ತರಾಗಿ ಹೆಚ್ಚುವರಿ ಹೊಣೆ ನಿಭಾಯಿಸುತ್ತಿದ್ದರು. [ಮಂಗಳೂರು ಪಾಲಿಕೆ ಆಯುಕ್ತರಿಗೆ ಗನ್ ಮ್ಯಾನ್ ಭದ್ರತೆ]

mangaluru

ಬುಧವಾರ 49 ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವ ರಾಜ್ಯ ಸರ್ಕಾರ ಹಾಸನದ ಅಪರ ಜಿಲ್ಲಾಧಿಕಾರಿಯಾಗಿದ್ದ ಡಾ.ಎಚ್‌.ಎನ್‌. ಗೋಪಾಲಕೃಷ್ಣ ಅವರನ್ನು ಪಾಲಿಕೆ ಆಯುಕ್ತರಾಗಿ ನೇಮಕ ಮಾಡಿದೆ.[6 ತಿಂಗಳಿನಿಂದ ಆಯುಕ್ತರ ಹುದ್ದೆ ಖಾಲಿ]

ವರ್ಗಾವಣೆಗೊಂಡ ಇತರ ಅಧಿಕಾರಿಗಳು : ದಕ್ಷಿಣ ಕನ್ನಡದ ಅಪರ ಜಿಲ್ಲಾಧಿಕಾರಿಯಾಗಿ ಕುಮಾರ್‌ ನೇಮಕಗೊಂಡಿದ್ದಾರೆ. ಉಡುಪಿ ಅಪರ ಜಿಲ್ಲಾಧಿಕಾರಿಯಾಗಿ ಅವರು ಕಾರ್ಯನಿರ್ವಹಿಸುತ್ತಿದ್ದರು. ಕುಮಾರ್ ಅವರಿಂದ ತೆರವಾದ ಅವರ ಸ್ಥಾನಕ್ಕೆ ದಕ್ಷಿಣ ಕನ್ನಡದ ಅಪರ ಜಿಲ್ಲಾಧಿಕಾರಿಯಾಗಿರುವ ಸದಾಶಿವ ಪ್ರಭು ಅವರನ್ನು ನೇಮಕ ಮಾಡಲಾಗಿದೆ. [49 ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ಸರ್ಕಾರ]

ಮಂಗಳೂರು ಪಾಲಿಕೆಯ ಕಂದಾಯ ವಿಭಾಗದ ಉಪ ಆಯಕ್ತರಾಗಿದ್ದ ಕೆ. ರಾಜು ಮೊಗವೀರ ಅವರು ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾಕರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಮಂಗಳೂರು ಸುದ್ದಿಗಳುView All

English summary
KAS officer Dr.H.N.Gopalkrishna has been appointed as the new commissioner of Mangaluru City Corporation.The post of MCC commissioner was lying vacant after the transfer of Hephsiba Rani Korlapati in June 2015.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more